FIFA World Cup 2026: ಸೋಲಿನ ಆಘಾತದೊಂದಿಗೆ ಬ್ರೆಜಿಲ್ ನಿರ್ಗಮನ, ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ನೇಮರ್ ಕಣ್ಣೀರ ವಿದಾಯ!

Picture of Savistara

Savistara

Bureau Report

2026 ರ ಫಿಫಾ ವಿಶ್ವಕಪ್‌ನಿಂದ ತಮ್ಮ ತಂಡವನ್ನು ಹೊರಗಿಡಲು ಕಾರಣವಾದ ನಾರ್ವೆ ವಿರುದ್ಧದ ಆಘಾತಕಾರಿ ಸೋಲಿನ ನಂತರ ಬ್ರೆಜಿಲ್ ನ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾದ ನೆಯ್ಮಾರ್ ಜ್ಯೂನಿಯರ್ ಅಂತಾರಾಷ್ಟ್ರೀಯ ಫುಟ್‌ಬಾಲ್‌ ನಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ.ಬ್ರೆಜಿಲ್ ನ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಆಗಿರುವ ನೇಮರ್ ಜ್ಯೂನಿಯರ್ 129 ಪಂದ್ಯಗಳನ್ನಾಡಿದ್ದು, 80 ಗೋಲುಗಳನ್ನು ಗಳಿಸಿದ್ದಾರೆ. 2010 ರ ಚೊಚ್ಚಲ ಪಂದ್ಯವನ್ನಾಡಿದ ಮೆಟ್‌ಲೈಫ್ ಕ್ರೀಡಾಂಗಣವೇ ನೇಮರ್ ಜ್ಯೂನಿಯರ್ ಅವರ ವಿದಾಯದ ಪಂದ್ಯವಾಗಿತ್ತು.ಬಾರ್ಸಿಲೋನಾ ಮತ್ತು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ಮಾಜಿ ಆಟಗಾರರಾದ ನೇಮರ್ ಜ್ಯೂನಿಯರ್ ನಾರ್ವೆ ವಿರುದ್ಧ ಪೆನಾಲ್ಟಿ ಗಳಿಸಿದರು. ಆದರೆ ಬ್ರೆಜಿಲ್ ಪಂದ್ಯಾವಳಿಯಿಂದ ಹೊರಗುಳಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ.

ನಾರ್ವೆಯಿಂದ ಬ್ರೆಜಿಲ್ ಟೂರ್ನಿಯಿಂದ ಹೊರಬಿದ್ದ ಕಾರಣ ನೇಮರ್ ಜ್ಯೂನಿಯರ್ ಹೃದಯ ಹೊಡೆದಿತ್ತು.ಇದರಿಂದಾಗಿ ನಿರಂತರವಾಗಿ ಅಳುತ್ತಿರುವ ದೃಶ್ಯಗಳು ಅಭಿಮಾನಿಗಳ ಮನಸ್ಸನ್ನು ಕಲಕುವಂತೆ ಮಾಡಿತು.

ಪಂದ್ಯದ ನಂತರದ ಮಾತನಾಡಿದ ಅವರು, ನಾನು ಇಲ್ಲಿಂದ ಪ್ರಾರಂಭಿಸಿದೆ. ಇಲ್ಲಿಯೇ ಮುಗಿದಿದೆ. ಸೆಲೆಕಾವೊ ಜೊತೆಗಿನ ನೇಮರ್ ಅವಧಿ ಮುಗಿದಿದ್ದರೂ, ಸ್ಯಾಂಟೋಸ್ ಎಫ್‌ಸಿಯೊಂದಿಗೆ ತಮ್ಮ ಕ್ಲಬ್ ವೃತ್ತಿಜೀವನವನ್ನು ಮುಂದುವರೆಸುತ್ತಾರೆ ಎನ್ನಲಾಗಿದೆ.

[t4b-ticker]
error: Content is protected !!