ಪೋರ್ಚುಗಲ್ ವಿರುದ್ಧ ಸ್ಪೇನ್‌ಗೆ ಗೆಲುವು | ವಿಶ್ವಕಪ್ ಕನಸು ಭಗ್ನ: ಮೈದಾನದಲ್ಲೇ ಕಣ್ಣೀರಿಟ್ಟ ರೊನಾಲ್ಲೋ

Picture of Savistara

Savistara

Bureau Report

2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ವಿರುದ್ಧ ಸ್ಪೇನ್ 1-0 ಗೋಲು ಅಂತರದ ಜಯಗಳಿಸಿದೆ. ಈ ಮೂಲಕ ಸ್ಪೇನ್ ಕ್ವಾಟರ್‌ಫೈನಲ್ಸ್‌ಗೆ ಲಗ್ಗೆಯಿಟ್ಟಿದ್ದು, ಪೋರ್ಚುಗಲ್ ತಂಡ ಹೊರಬಿದ್ದಿದೆ.

ಇದರೊಂದಿಗೆ ಪೋರ್ಚುಗಲ್‌ನ ಫುಟ್‌ಬಾಲ್ ದಿಗ್ಗಜ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಲೋ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್‌ನಲ್ಲಿ (90+1 ನಿಮಿಷದಲ್ಲಿ) ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ ಅದ್ಭುತ ಗೋಲು ಬಾರಿಸುವ ಮೂಲಕ ಸ್ಪೇನ್‌ಗೆ ಸ್ಮರಣೀಯ ಗೆಲುವು ತಂದುಕೊಟ್ಟರು. 2010ರ ಚಾಂಪಿಯನ್ ಸ್ಪೇನ್, ಇದೀಗ ಮಗದೊಂದು ಸಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಫಿಫಾ ವಿಶ್ವಕಪ್‌ನಲ್ಲಿ ಸತತ 6 ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದ ಸಾಧನೆ ಮಾಡಿದ ಮೊದಲ ತಂಡವೆನಿಸಿದೆ.

ಸೋಲಿನ ಬಳಿಕ ರೊನಾಲ್ಲೋ ಮೈದಾನದಲ್ಲೇ ಕಣ್ಣೀರಿಟ್ಟು ಭಾವುಕರಾದರು. ಒಂದು ಕಡೆ ಸ್ಪೇನ್ ಗೆಲುವಿನ ಕೆಕೆ ಹಾಕಿದ್ರೆ, ರೊನಾಲ್ಲೋ ಅವರ ವಿಶ್ವಕಪ್ ಪಯಣ ಕಣ್ಣೀರಿನೊಂದಿಗೆ ಅಂತ್ಯಗೊಂಡಿತು.

2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ವಿರುದ್ಧ ಸ್ಪೇನ್ 1-0 ಗೋಲು ಅಂತರದ ಜಯಗಳಿಸಿದೆ. ಈ ಮೂಲಕ ಸ್ಪೇನ್ ಕ್ವಾಟರ್‌ಫೈನಲ್ಸ್‌ಗೆ ಲಗ್ಗೆಯಿಟ್ಟಿದ್ದು, ಪೋರ್ಚುಗಲ್ ತಂಡ ಹೊರಬಿದ್ದಿದೆ.ಇದರೊಂದಿಗೆ ಪೋರ್ಚುಗಲ್‌ನ ಫುಟ್‌ಬಾಲ್ ದಿಗ್ಗಜ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಲೋ ವಿಶ್ವಕಪ್ ಕನಸು ಭಗ್ನಗೊಂಡಿದೆ.ಪಂದ್ಯದ ದ್ವಿತೀಯಾರ್ಧದ ಇಂಜುರಿ ಟೈಮ್‌ನಲ್ಲಿ (90+1 ನಿಮಿಷದಲ್ಲಿ) ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ ಅದ್ಭುತ ಗೋಲು ಬಾರಿಸುವ ಮೂಲಕ ಸ್ಪೇನ್‌ಗೆ ಸ್ಮರಣೀಯ ಗೆಲುವು ತಂದುಕೊಟ್ಟರು. 2010ರ ಚಾಂಪಿಯನ್ ಸ್ಪೇನ್, ಇದೀಗ ಮಗದೊಂದು ಸಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಫಿಫಾ ವಿಶ್ವಕಪ್‌ನಲ್ಲಿ ಸತತ 6 ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದ ಸಾಧನೆ ಮಾಡಿದ ಮೊದಲ ತಂಡವೆನಿಸಿದೆ.ಸೋಲಿನ ಬಳಿಕ ರೊನಾಲ್ಲೋ ಮೈದಾನದಲ್ಲೇ ಕಣ್ಣೀರಿಟ್ಟು ಭಾವುಕರಾದರು. ಒಂದು ಕಡೆ ಸ್ಪೇನ್ ಗೆಲುವಿನ ಕೆಕೆ ಹಾಕಿದ್ರೆ, ರೊನಾಲ್ಲೋ ಅವರ ವಿಶ್ವಕಪ್ ಪಯಣ ಕಣ್ಣೀರಿನೊಂದಿಗೆ ಅಂತ್ಯಗೊಂಡಿತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!