ಸುಳ್ಯ : ಕಾಯರ್ತೋಡಿ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ, ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ : ಭಾಗೀರಥಿ ಮುರುಳ್ಯ

Picture of Savistara

Savistara

Bureau Report

ಸುಳ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಲಾಗುವುದು ಎಂದು ಸುಳ್ಯದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಹೇಳಿದರು. ಶಾಸಕರು ಕೊಡಮಾಡಿದ 20 ಲಕ್ಷ ರೂ ಅನುದಾನ ಮತ್ತು ಸ್ಥಳೀಯ ನಗರ ಪಂಚಾಯತ್ ನಿಕಟಪೂರ್ವ ಸದಸ್ಯ ಪ್ರವಿತಾ ಪ್ರಶಾಂತ್ ರವರು ನೀಡಿದ ನಾಲ್ಕು ಲಕ್ಷ ರೂ ಅನುದಾನದಲ್ಲಿ ನಡೆದ ಕಾಯರ್ತೋಡಿ ದೇವಸ್ಥಾನದ ರಸ್ತೆಯ ಕಾಂಕ್ರೀಟೀಕರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ಸುಳ್ಯ ನಗರದ ನಾಲ್ಕು ರಸ್ತೆಗಳಿಗೆ ತಲಾ 20 ಲಕ್ಷ ರೂರಂತೆ ನೀಡಿದ 80 ಲಕ್ಷ ರೂವನ್ನು ಸೇರಿಸಿ ಈಗಾಗಲೇ ನಗರಕ್ಕೆ ಸುಮಾರು ಎರಡು ಕಾಲು ಕೋಟಿ ರೂ ಅನುದಾನವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ತರಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ವೆಂಕಟ್ ವಲಲಂಬೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ನಗರ ಪಂಚಾಯತ್ ನಿಕಟಪೂರ್ವ ಸದಸ್ಯ ಪ್ರವಿತಾ ಪ್ರಶಾಂತ್, ಮಾಜಿ ಅಧ್ಯಕ್ಷ ಎನ್ ಏ ರಾಮಚಂದ್ರ, ಕಾಯರ್ ತೋಡಿ ದೇವಸ್ಥಾನದ ನಿಕಟಪೂರ್ವ ಆಡಳಿತ ಸಮಿತಿ ಅಧ್ಯಕ್ಷ ಪಿಕೆ ಉಮೇಶ್,

ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀ ಕೃಷ್ಣ ಕಾಮತ್, ರಸ್ತೆಗೆ ಈ ಹಿಂದೆ ಸ್ಥಳ ದಾನ ಮಾಡಿದ ದೆಂಗೋಡಿ ಕುಟುಂಬಸ್ಥರು ಮತ್ತು ಅಳಿಕೆ ಮಜಲು ಕುಟುಂಬಸ್ಥರು, ಕಾಯರ್ತೋಡಿ ದೇವಸ್ಥಾನದ ಈಗಿನ ಆಡಳಿತ ಸಮಿತಿ ಸದಸ್ಯರು, ಚಂದ್ರಶೇಖರ ಅಡಪಂಗಾಯ, ಡಿಎಸ್ ಗೋಪಾಲ್, ನಾರಾಯಣ ಶಾಂತಿನಗರ, ರಂಜಿತ್ ನೆಡ್ಚಿಲ್, ಸುನಿಲ್ ಕೇರ್ಪಾಳ, ಚಿದಾನಂದ ಕಾಯರ್ತೋಡಿ, ವಿಠಲ ಸರ್ವೆಯರ್ ಕಿಶೋರ್ ಕಾಯತೋಡಿ, ವಿಜಯ ದೆಂಗೋಡಿ, ಸಚಿನ್ ದೇಂಗೋಡಿ, ಸೀನಪ್ಪ ಪಡ್ರೆ, ಬಾಲರಾಜ್ ದೆಂಗ್ಗೊಡಿ, ಕೃಷ್ಣ ಬೆಟ್ಟ, ಜಿನ್ನಪ್ಪ ಪೂಜಾರಿ ಹಾಗೂ ಊರವರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ನವೀನ್ ಕುದುಪಾದೆ ಸ್ವಾಗತಿಸಿ ದೇವಿ ಪ್ರಸಾದ್ ವಂದಿಸಿದರು. ಕುಸುಮಾದರೆ ಏ ಟಿ ಕಾರ್ಯಕ್ರಮ ನಿರೂಪಿಸಿದರು

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!