ಅಮೆರಿಕ ಚುನಾವಣೆಯಲ್ಲಿ ಕನ್ನಡಿಗರ ನೆಂಟನ ಹೊಸ ಇತಿಹಾಸ!: ಬದ್ಧ ಎದುರಾಳಿಯನ್ನು ಸೋಲಿಸಿ ದಾಖಲೆ ಬರೆದ ನಾಯಕ!

Picture of Savistara

Savistara

Bureau Report

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿತ ಅಭ್ಯರ್ಥಿಗೆ ಭಾರಿ ಮುಖಭಂಗವಾಗಿದೆ. ಅತ್ಯಂತ ನಿರ್ಣಾಯಕ ಎನಿಸಿಕೊಂಡಿದ್ದ ಮಿಚಿಗನ್ ರಾಜ್ಯದ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಬ್ದುಲ್ ಎಲ್ ಸಯೀದ್ ಚಾರಿತ್ರಿಕ ಜಯ ಸಾಧಿಸುವ ಮೂಲಕ ಯುಎಸ್ ಸೆನೆಟರ್ ಆಗಿ ಆಯ್ಕೆಯಾದ ಅಮೆರಿಕದ ಪ್ರಥಮ ಮುಸ್ಲಿಂ ಎಂಬ ಅಪರೂಪದ ದಾಖಲೆ ಬರೆದಿದ್ದಾರೆ.

​ಮಾಜಿ ಸಾರ್ವಜನಿಕ ಆರೋಗ್ಯಾಧಿಕಾರಿಯಾಗಿದ್ದ ಸಯೀದ್, ತಳಮಟ್ಟದಲ್ಲಿ ಸಾರ್ವಜನಿಕ ಸಂಪರ್ಕ ಬೆಳೆಸಿ, ಜನಪರ ನೀತಿ ಹಾಗೂ ಉಚಿತ ಆರೋಗ್ಯ ಸೇವೆಗಳ ಭರವಸೆ ನೀಡಿ ರಿಪಬ್ಲಿಕನ್ ಪಕ್ಷದ ಪ್ರಬಲ ಸ್ಪರ್ಧಿ ಮೈಕ್ ರೋಜರ್ಸ್ ಅವರನ್ನು ಮಣ್ಣುಮುಕ್ಕಿಸಿದ್ದಾರೆ.​

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜೊತೆ ಅಪರೂಪದ ನಂಟು:ವಿಶೇಷವೆಂದರೆ, ಈ ಜಾಗತಿಕ ರಾಜಕೀಯ ಗೆಲುವಿನ ಹಿಂದೆ ಕರ್ನಾಟಕದ ಹೆಮ್ಮೆಯ ನಂಟಿದೆ. ಅಬ್ದುಲ್ ಎಲ್ ಸಯೀದ್ ಅವರ ಧರ್ಮಪತ್ನಿ ಡಾ. ಸಾರಾ ಜುಕಾಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದವರಾಗಿದ್ದು, ಪ್ರಸ್ತುತ ಅಮೆರಿಕದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾರಾ ಅವರ ಅಜ್ಜ ಶಂಶುದ್ದಿನ್ ಬಿನ್ ಹುಸೈನ್ ಸಾಹೇಬ್ ಜುಕಾಕು ಅವರು ಅಂದಿನ ಮೈಸೂರು ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

​ತಮ್ಮ ಕೌಟುಂಬಿಕ ಹಿನ್ನೆಲೆಯ ಬಗ್ಗೆ ಒಮ್ಮೆ ಹೆಮ್ಮೆಯಿಂದ ಮಾತನಾಡಿದ್ದ ಸಯೀದ್, “ನಾನು ದಕ್ಷಿಣ ಭಾರತೀಯ ಕುಟುಂಬದ ಜತೆ ಒಡನಾಟ ಹೊಂದಿ 20 ವರ್ಷಗಳಾಗಿವೆ. ಹಾಗಾಗಿ ನಾನು ಅರಬ್‌ಗಿಂತಲೂ ಹೆಚ್ಚಾಗಿ ಭಾರತೀಯ” ಎಂದು ಸ್ಮರಿಸಿಕೊಂಡಿದ್ದರು. ಕರುನಾಡಿನ ನಂಟಿರುವ ನಾಯಕನ ಈ ಅಪ್ರತಿಮ ಜಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!