ಸುಳ್ಯ: ಮರ್ಕಂಜ ಗ್ರಾಮದ ಮಿತ್ತಡ್ಕ ಅಂಗನವಾಡಿ ಕೇಂದ್ರಕ್ಕೆ ತೆರವಾಗಿದ್ದ ಸ್ಥಾನಕ್ಕೆ ನೂತನ ಅಂಗನವಾಡಿ ಕಾರ್ಯಕರ್ತೆಯಾಗಿ ಸರ್ಕಾರದಿಂದ ನೇಮಕಗೊಂಡ ಶ್ರೀಮತಿ ಪ್ರೀತಿಕಾ ಅವರನ್ನು ಬಾಲ ವಿಕಾಸ ಸಮಿತಿ ವತಿಯಿಂದ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.

ತೆರವಾಗಿದ್ದ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಪ್ರಭಾರ ಅಂಗನವಾಡಿ ಕಾರ್ಯಕರ್ತೆಯರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀಮತಿ ರತ್ನಾವತಿ ಮತ್ತು ಶ್ರೀಮತಿ ಸುನೀತಾ ಅವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ ಎಂ, ಪೋಷಕರಾದ ಶ್ರೀಮತಿ ಗೀತಾ, ಬಳ್ಳಕ ಶ್ರೀಮತಿ ಶುಭಲತ, ಶ್ರೀಮತಿ ಅಶ್ವಿನಿ, ಶ್ರೀಮತಿ ಕವಿತ, ಅಂಗನವಾಡಿ ಸಹಾಯಕಿ ಶ್ರೀಮತಿ ಬಬಿತಾ, ತೇರ್ಥಮಜಲು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲತಾ ಹಾಗೂ ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



































