ಬಸ್ ಪ್ರಯಾಣ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ

Picture of Savistara

Savistara

Bureau Report

ಬೆಂಗಳೂರು: ನಂದಿನಿ ಹಾಲು ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣ ದರ ಹೆಚ್ಚಿಸಲಾಗಿದ್ದು, ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಮೂಲಕ ಗ್ರಾಹಕರ ಜೇಬಿಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದೆ.

ಡಿಸೇಲ್ ಬೆಲೆಯಲ್ಲಿ ಹೆಚ್ಚಳ, ಸಾರಿಗೆ ನೌಕರರ ವೇತನ ಹಾಗೂ ಇನ್ನಿತರೆ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ನಷ್ಟ ಪ್ರಮಾಣ ವೆಚ್ಚವನ್ನು ಕಡಿಮೆ ಮಾಡಲು ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಕೆಎಸ್​ಆರ್​ಟಿಸಿ, ವಾಯವ್ಯ ಮತ್ತು, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ ಶೇ.23 ಹಾಗೂ ಬಿಎಂಟಿಸಿಯಲ್ಲಿ ಶೇ.35ರಷ್ಟು ದರ ಹೆಚ್ಚಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಮಾಹಿತಿ ನೀಡಿದರು.

ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯು ಸಾರಿಗೆ ಸಂಸ್ಥೆಗಳಿಗೆ ಭೇಟಿ ನೀಡಿ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿದೆ. ಬಿಎಂಟಿಸಿಗೆ ಶೇ.45, ಕೆಎಸ್​ಆರ್​ಟಿಸಿಗೆ ಶೇ.38 ಪ್ರಯಾಣ ದರ ಏರಿಸುವಂತೆ ಶಿಫಾರಸ್ಸು ಮಾಡಿತ್ತು. ಇದಕ್ಕೂ ಮುನ್ನ ಬಿಎಂಟಿಸಿಯಿಂದ ಶೇ.189ರಷ್ಟು ದರ ಏರಿಸಬೇಕು. ಉಳಿದ ಮೂರು ನಿಗಮಗಳಲ್ಲಿ ಶೇ.90ರಷ್ಟು ಟಿಕೆಟ್ ದರ ಏರಿಸಬೇಕೆಂದು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಶಿಫಾರಸು ಮಾಡಿದ್ದರು. ಪ್ರಯಾಣಿಕರ ಹಿತದೃಷ್ಟಿ ಹಾಗೂ ಸಾರಿಗೆ ಸಂಸ್ಥೆಗಳ ನಷ್ಟವನ್ನ ಕಡಿಮೆಗೊಳಿಸಲು ಕೆಎಸ್​ಆರ್​ಟಿಸಿಯಲ್ಲಿ ಶೇ.23 ಹಾಗೂ ಬಿಎಂಟಿಸಿಯಲ್ಲಿ ಶೇ.35ರಷ್ಟು ದರ ಹೆಚ್ಚಿಸಲಾಗಿದೆ ಎಂದು ಸಚಿವರು ವಿವರಿಸಿದರು.ಸಾಮಾನ್ಯ ಸಾರಿಗೆಯಲ್ಲಿ ಗರಿಷ್ಠ 9 ರೂಪಾಯಿ ಹಾಗೂ ವೇಗದೂತ ಸಾರಿಗೆಯಲ್ಲಿ ಗರಿಷ್ಠ 18 ರೂಪಾಯಿ ಏರಿಸಲಾಗಿದೆ. ಬೆಂಗಳೂರಿನಿಂದ ಹೊಸಕೋಟೆಗೆ ಪ್ರಸ್ತುತ 35 ರೂಪಾಯಿಂದ 44 ರೂಪಾಯಿ ಹೆಚ್ಚಿಸಲಾಗಿದೆ. ನಗರದಿಂದ ಅನೇಕಲ್​ಗೆ 38ರಿಂದ 47 ರೂಪಾಯಿ ಏರಿಸಲಾಗಿದೆ. ಅದೇ ರೀತಿ ಬೆಂಗಳೂರಿನಿಂದ ತುಮಕೂರಿಗೆ 81 ರೂಪಾಯಿಂದ 100 ರೂಪಾಯಿಗೆ, ಅದೇ ಬೆಂಗಳೂರಿನಿಂದ ಮೈಸೂರಿಗೆ 160 ರೂಪಾಯಿಯಿಂದ 197 ಹಾಗೂ ಚಿಕ್ಕಮಗಳೂರಿಗೆ 295 ರೂಪಾಯಿಂದ 363 ರೂಪಾಯಿಗೆ ಏರಿಸಲಾಗಿದೆ. ಸಾಮಾನ್ಯ ಸಾರಿಗೆಯಲ್ಲಿ ಮೊದಲ ಐದು ಸ್ಟೇಜ್​ಗಳವರೆಗೆ ಗರಿಷ್ಠ 9 ರೂಪಾಯಿ, ವೇಗದೂತ ಸಾರಿಗೆಯಲ್ಲಿ ಪ್ರತಿ ಹಂತದಲ್ಲಿ ಗರಿಷ್ಠ 18 ರೂಪಾಯಿ ಏರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಬಿಎಂಟಿಸಿ ವ್ಯಾಪ್ತಿಯಲ್ಲಿ 2 ಕೀಲೋಟರ್​ರೆಗಿನ ಪ್ರಯಾಣಕ್ಕೆ 4 ರೂಪಾಯಿ, 2ರಿಂದ 4 ಕಿಲೋಮೀಟರ್​ವರೆಗಿನ ಪ್ರಯಾಣಕ್ಕೆ 6 ರೂಪಾಯಿ ಏರಿಕೆ ಮಾಡಲಾಗಿದೆ. ದೂರದ ಪ್ರಯಾಣ ದರವನ್ನು 12 ರೂಪಾಯಿ ಹೆಚ್ಚಿಸಲಾಗಿದೆ. ಬಿಎಂಟಿಸಿ ವ್ಯಾಪ್ತಿಯಲ್ಲಿ ಓಡಾಡುವ ಹವಾ ನಿಯಂತ್ರಿತ ಸಾರಿಗೆಗಳಲ್ಲಿ (ವಜ್ರ ಸೇವೆಗಳು) ಮೊದಲ 6 ಕೀ.ಮೀವರೆಗಿನ ಪ್ರಯಾಣಕ್ಕೆ 5 ರೂಪಾಯಿ, 6 ಕಿ.ಮೀ.ನಿಂದ 18 ಕಿ.ಮೀವರೆಗಿನ 10 ರೂಪಾಯಿ ಏರಿಸಲಾಗಿದೆ. ದೂರದ ಪ್ರಯಾಣಕ್ಕೆ ದರವನ್ನ 15ಕ್ಕೆ ಹೆಚ್ಚಿಸಲಾಗಿದೆ ಸಚಿವರು ತಿಳಿಸಿದರು.ಶಕ್ತಿ ಯೋಜನೆ ಜಾರಿ ಬಳಿಕ ಪ್ರತಿದಿನ 74 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ.

ಶಕ್ತಿ ಯೋಜನೆಯಿಂದ ನಷ್ಟವಾಗುತ್ತಿಲ್ಲ. ಸರ್ಕಾರ ಹಂತ-ಹಂತವಾಗಿ ಸಾರಿಗೆ ನಿಗಮಗಳಿಗೆ ಅನುದಾನ ನೀಡುತ್ತಿದೆ. ಸಾರಿಗೆ ನಿಗಮಗಳಲ್ಲಿನ ನಷ್ಟದ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. 2023ರಿಂದ 2026ರ ಅಕ್ಟೋಬರ್ ವರೆಗೆ ಶಕ್ತಿಯೋಜನೆಯಡಿ 16,594 ಕೋಟಿ ಅನುದಾನ ನೀಡಲಾಗಿದೆ. ಇನ್ನೂ 6,300 ಕೋಟಿ ಬಾಕಿಯಿದ್ದು, ಹಂತ-ಹಂತವಾಗಿ ನೀಡಲಾಗುವುದು ಎಂದರು.ಪ್ರಸ್ತುತ ಡಿಸೇಲ್ ಬೆಲೆ 98.13 ರೂಪಾಯಿಯಿದೆ.

ಪ್ರಸ್ತಕ ವರ್ಷದಲ್ಲೇ ಡಿಸೇಲ್ ಬೆಲೆಯಲ್ಲಿ ಒಂದೂವರೆ ವರ್ಷದಲ್ಲಿ 10.47 ರೂಪಾಯಿ ಹೆಚ್ಚಾಗಿದೆ. 80ರಷ್ಟು ಡಿಸೇಲ್ ಹಾಗೂ ಸಿಬ್ಬಂದಿ ವೇತನ ಇನ್ನಿತರೆ ವೆಚ್ಚಗಳಿಗೆ ಹೋಗುತ್ತಿದೆ. 1,111.88 ಕೋಟಿ ಇಂಧನ ಬಾಕಿಯಿದೆ. 2016ರಿಂದ 25 ರವೆರಗೆ ಸಾರಿಗೆ ನೌಕರರ ವೇತನದಲ್ಲಿ ಏರಿಕೆಯಾದ ಪರಿಣಾಮ 2026ರಲ್ಲಿ 3,694.55 ಕೋಟಿಗೆ ತಲುಪಿದೆ. ನಾಲ್ಕು ನಿಗಮಗಳಲ್ಲಿ ಪಿಂಚಣಿ, ಪಿಎಫ್ ಹಾಗೂ ಸಾಲ ಸೇರಿದಂತೆ ಬಾಕಿ 9,912 ಕೋಟಿ ಹೊಣೆಗಾರಿಕೆ ಮತ್ತು ಸಾಲವಿದೆ. ಪ್ರತಿ ವರ್ಷ ₹2 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಸಾರಿಗೆ ಇಲಾಖೆಯ ಮಾಹಿತಿ:

ರಾಜ್ಯದಲ್ಲಿರುವ ಬಸ್​ಗಳ ಸಂಖ್ಯೆ – 26,125

ಕೆಲಸ ಮಾಡುತ್ತಿರುವ ಸಿಬ್ಬಂದಿಗಳು – 1,02,646

ಪ್ರತಿದಿನ ಅನುಸೂಚಿ (ರೂಟ್​ಗಳು) – 24,179

ಪ್ರತಿನಿತ್ಯ ಸರಾಸರಿ ಪ್ರಯಾಣಿಸುವವರ ಸಂಖ್ಯೆ – 124,79

ಲಕ್ಷಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ:

ಬೆಂಗಳೂರು ಟು ಶಿವಮೊಗ್ಗಹಾಲಿ ದರ ₹340 – ಪರಿಷ್ಕೃತ ದರ ₹419

ಬೆಂಗಳೂರು ಟು ಮಂಗಳೂರುಹಾಲಿ ದರ ₹423 – ಪರಿಷ್ಕೃತ ದರ ₹521

ಬೆಂಗಳೂರು ಟು ಹುಬ್ಬಳ್ಳಿಹಾಲಿ ದರ ₹490 – ‌ಪರಿಷ್ಕೃತ ದರ ₹613

ಬೆಂಗಳೂರು ಟು ಬೆಳಗಾವಿಹಾಲಿ ದರ ₹603 – ಪರಿಷ್ಕೃತ ದರ ₹742

ಬೆಂಗಳೂರು ಟು ಕಲಬುರಗಿಹಾಲಿ ದರ ₹754 – ಪರಿಷ್ಕೃತ ದರ ₹928

ಬೆಂಗಳೂರು ಟು ದಾವಣಗೆರೆಹಾಲಿ ದರ ₹317 – ಪರಿಷ್ಕೃತ ದರ ₹390

ಕೆಎಸ್ಆರ್​ಟಿಸಿಯಲ್ಲಿ ಮೊದಲ ಸ್ಟೇಜ್ ಅಂದರೆ 6.5 ಕಿಮೀ ದೂರ:

ಕೆಎಸ್ಆರ್​ಟಿಸಿ ಫಸ್ಟ್‌ ಸ್ಟೇಜ್​ಗೆ ಈ ಹಿಂದೆ 12 ರೂ. ಇತ್ತು. ಈಗ 15 ರೂ. ಆಗಿದೆ. 3 ರೂ. ಏರಿಕೆ ಆಗಿದೆ (ಮೆಜೆಸ್ಟಿಕ್ ಟು ಯಶವಂತಪುರ).

5 ಸ್ಟೇಜ್​ಗೆ ಈ ಹಿಂದೆ 35 ರೂ. ಇತ್ತು. ಈಗ 44 ರೂ. ಆಗಿದೆ. 9 ರೂ. ಏರಿಕೆ ಆಗಿದೆ (ಮೆಜೆಸ್ಟಿಕ್ ಟು ನೆಲಮಂಗಲ).

ಬಿಎಂಟಿಸಿ ಮೊದಲ ಸ್ಟೇಜ್ ಅಂದರೆ 2 ಕಿಮೀ ದೂರ:

ಈ ಹಿಂದೆ 6 ರುಪಾಯಿ ಇದ್ದದ್ದು, ಪರಿಷ್ಕೃತ ದರ 10 ರೂ. ಆಗಿದೆ. 4 ರೂ. ಹೆಚ್ಚಳ ಆಗಿದೆ. (ಮೆಜೆಸ್ಟಿಕ್ ಟು ಮಹಾರಾಣಿ ಕಾಲೇಜು)

ಈ ಹಿಂದೆ ಬಿಎಂಟಿಸಿಯಲ್ಲಿ 5 ಸ್ಟೇಜ್​ಗೆ 30 ರೂ. ಇದ್ದದ್ದು ಪರಿಷ್ಕೃತ ದರ 12 ರೂ. ಏರಿಕೆ ಆಗಿದೆ. (ಮೆಜೆಸ್ಟಿಕ್ ಟು ಅತ್ತಿಬೆಲೆ)

ನಗರದಿಂದ ವಿವಿಧ ಸ್ಥಳಗಳಿಗೆ ವಜ್ರ ಹವಾನಿಯಂತ್ರಿತ ಸೇವೆಗಳ ಪ್ರಯಾಣ ದರದ ವಿವರಗಳು:

ಸಿಲ್ಕ್ ಬೋರ್ಡ್​ಯಿಂದ ಹೆಬ್ಬಾಳ – 55ರಿಂದ 65 ರೂ.

ಬನಶಂಕರಿಯಿಂದ ಐಟಿಪಿಎಲ್ – 50ರಿಂದ 60 ರೂ.

ಕೆ.ಆರ್.ಪುರಯಿಂದ ಸಿಲ್ಕ್ ಬೋರ್ಡ್ – 40ರಿಂದ 55 ರೂ.

ಸಿಲ್ಕ್ ಬೋರ್ಡ್​ನಿಂದ ಕಾಡುಗೋಡಿ – 50ರಿಂದ 60 ರೂ.

ಮೆಜೆಸ್ಟಿಕ್​ನಿಂದ ಅತ್ತಿಬೆಲೆ – 60 ರಿಂದ 70 ರೂ.

ಬಿಎಂಟಿಸಿ ವಾಯುವಜ್ರ (ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್) ಬಸ್​ಗಳ ಹಾಲಿ ಮತ್ತು ಪರಿಷ್ಕೃತ ದರ:

ಮೆಜೆಸ್ಟಿಕ್ ಟು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಹಾಲಿ ದರ ₹265 ರೂಪಾಯಿ – ಪರಿಷ್ಕೃತ ದರ ₹300

ಬನಶಂಕರಿ ಟು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಹಾಲಿ ದರ ₹295 ರೂಪಾಯಿ – ಪರಿಷ್ಕೃತ ದರ ₹325

ಕಾಡುಗೋಡಿ ಟು ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ಹಾಲಿ ದರ ₹305 ರೂಪಾಯಿ – ಪರಿಷ್ಕೃತ ದರ ₹325

ರಾಯಲ್ ಮೀನಾಕ್ಷಿ ಮಾಲ್ ಟು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಹಾಲಿ ದರ ₹315 ರೂಪಾಯಿ – ಪರಿಷ್ಕೃತ ದರ ₹325

ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್ ಟು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಹಾಲಿ ದರ ₹380 ರೂಪಾಯಿ – ಪರಿಷ್ಕೃತ ದರ ₹400

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!