ಕುಮಟಾದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 33ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ

Picture of Savistara

Savistara

Bureau Report

ಕುಮಟಾ(ನ. 04):- ಸೇವಾಭಾರತಿ-ಸೇವಾಧಾಮ, ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಕೆನರಾ ಹೆಲ್ತ್ ಕೇರ್ ಸೆಂಟರ್, ಕುಮಟಾ ಮತ್ತು ಲಯನ್ಸ್ ಕ್ಲಬ್ ಕುಮಟಾ ಇವುಗಳ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 33ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರದ ಉದ್ಘಾಟನಾ ಸಮಾರಂಭವು ನವೆಂಬರ್ 4 ರಂದು ಕೆನರಾ ಹೆಲ್ತ್ ಕೇರ್ ಸೆಂಟರ್ ಕುಮಟಾದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕುಮಟಾ ಕೆನರಾ ಹೆಲ್ತ್ ಕೇರ್ ಸೆಂಟರ್‌ನ ಅಧ್ಯಕ್ಷರಾದ ಡಾ. ಗಣೇಶ್ ಗಣಪತಿ ಹೆಗ್ಡೆ ಅವರು ಉದ್ಘಾಟಿಸಿ ಸೇವಾಧಾಮ ನಡೆಸುತ್ತಿರುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ ಸೇವಾಭಾರತಿ ನಡೆಸುತ್ತಿರುವ ಈ ಶಿಬಿರವು ಅತ್ಯಂತ ಉತ್ತಮ ಕಾರ್ಯವಾಗಿದ್ದು, ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. “ಜೀವನದಲ್ಲಿ ಕಷ್ಟ-ನೋವುಗಳು ಇದ್ದೇ ಇರುತ್ತವೆ. ಅವುಗಳನ್ನು ಧೈರ್ಯದಿಂದ ಮೆಟ್ಟಿ ನಿಂತು, ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ನಮ್ಮಲ್ಲಿರಬೇಕು” ಎಂದು ಉದ್ಘಾಟಕರ ನುಡಿಗಳನ್ನಾಡಿದರು.ಕನ್ಯಾಡಿ ಸೇವಾಭಾರತಿ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಅವರು ಮಾತನಾಡಿ, “ಕಳೆದ ಮೂರು ವರ್ಷಗಳಿಂದ ಕೆನರಾ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಉಚಿತ ಶಿಬಿರವನ್ನು ನಡೆಸಲು ನಮಗೆ ಸಂಪೂರ್ಣ ಸಹಕಾರ ಹಾಗೂ ಬೆಂಬಲವನ್ನು ನೀಡುತ್ತಾ ಬಂದಿದ್ದೀರಿ. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಸೇವಾ ಕಾರ್ಯದಲ್ಲಿ ನಿಮ್ಮ ಸಹಕಾರ ಅತ್ಯಂತ ಅಮೂಲ್ಯವಾಗಿದೆ. ನಿಮ್ಮ ಈ ಮಾನವೀಯ ಸೇವೆ ಹಾಗೂ ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿಯಾಗಿರುತ್ತೇವೆ.

ಇಂತಹ ಶಿಬಿರಗಳು ದಿವ್ಯಾಂಗರಿಗೆ ಹೊಸ ಭರವಸೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತವೆ. ಆದ್ದರಿಂದ ಶಿಬಿರದಲ್ಲಿ ದೊರೆಯುವ ಸೌಲಭ್ಯಗಳ ಸದುಪಯೋಗವನ್ನು ದಿವ್ಯಾಂಗರು ಪಡೆದುಕೊಂಡು, ತಮ್ಮ ಜೀವನದಲ್ಲಿ ಹೊಸ ಉತ್ಸಾಹದಿಂದ ಮುನ್ನಡೆಯಬೇಕು” ಎಂದು ಶುಭಹಾರೈಸಿದರು.ಕುಮಟಾ ತಾಲೂಕು ವೈದ್ಯಾಧಿಕಾರಿ ಡಾ. ಅಜ್ಞಾ ನಾಯಕ್, ಕುಮಟಾ ಲಯನ್ಸ್ ಕ್ಲಬ್ ಅಧ್ಯಕ್ಷರು ಲ| ಯೋಗಾನಂದ್ ಗಾಂಧಿ, ಕುಮಟಾ ಹೆಲ್ತ್ ಕೇರ್ ಸೆಂಟರ್ ನ ಜನರಲ್ ಸರ್ಜನ್ ಡಾ. ಸಚ್ಚಿದಾನಂದ ನಾಯಕ್‌, ಕುಮಟಾ ಲಯನ್ಸ್ ಕ್ಲಬ್ ಕಾರ್ಯದರ್ಶಿ Er. ಕೇಶವ ನಾಯ್ಕ್, ಕಾರವಾರ ಜಿಲ್ಲೆಯ ಸೇವಾಭಾರತಿ ಜಿಲ್ಲಾ ಸಂಯೋಜಕರಾದ ಶ್ರೀ ಜನಾರ್ಧನ್ ನಾಯಕ್, ಕುಮಟಾ ಲಯನ್ಸ್ ಕ್ಲಬ್ ಸದಸ್ಯರಾದ ಶ್ರೀ ಎಂ ಕೆ ಷಣ್ಮುಗನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ಮೂವರು ದಿವ್ಯಾಂಗರಿಗೆ ಗಾಲಿಕುರ್ಚಿಗಳನ್ನು ಹಾಗೂ ಇಬ್ಬರು ದಿವ್ಯಾಂಗರಿಗೆ ವಾಕರ್‌ಗಳನ್ನು ವಿತರಿಸಲಾಯಿತು.

ಅಲ್ಲದೆ ದಿವ್ಯಾಂಗರಿಗೆ ಸೆಲ್ಫ್ ಕೇರ್ ಕಿಟ್, ಮೆಡಿಕಲ್ ಕಿಟ್, ಏರ್ ಬೆಡ್ ಹಾಗೂ ವಾಟರ್ ಬೆಡ್‌ಗಳನ್ನು ನೀಡಲಾಯಿತು. ಒಟ್ಟು 13 ಮಂದಿ ದಿವ್ಯಾಂಗರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯ ಕ್ಷೇತ್ರ ಸಂಯೋಜಕರಾದ ಶ್ರೀಮತಿ ಕವಿತಾ ಸ್ವಾಗತಿಸಿ, ಸೇವಾಭಾರತಿ ಹಿರಿಯ ಪ್ರಬಂಧಕರಾದ ಶ್ರೀ ಚರಣ್ ಕುಮಾರ್ ಎಂ ಕಾರ್ಯಕ್ರಮವನ್ನು ನಿರೂಪಿಸಿದರು, ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರ ಸಂಯೋಜಕರಾದ ಶ್ರೀ ಸುಧಾಕರ್ ಧನ್ಯವಾದವಿತ್ತರು.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!