ಸಚಿವ ಸತೀಶ ಜಾರಕಿಹೊಳಿ ಸಂಧಾನ ಸಭೆ: ₹3,600ಕ್ಕೆ ಒಪ್ಪಿದ ಕಾರ್ಖಾನೆಗಳು

Picture of Savistara

Savistara

Bureau Report

ಬೆಳಗಾವಿ: ಕಬ್ಬಿಗೆ ಬೆಲೆ ನಿಗದಿ ಮಾಡುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ, ಬುಧವಾರ ರಾತ್ರಿ ನಡೆದ ಐದನೇ ಸಭೆಯಲ್ಲೂ ಒಮ್ಮತ ಮೂಡಲಿಲ್ಲ.

ಬೆಳಗಾವಿ ಜಿಲ್ಲೆಯ ಸಕ್ಕರೆ ಕರ್ಖಾನೆಗಳು ಪ್ರತಿ ಟನ್‌ಗೆ ₹3,600 ದರ ನೀಡಲು ಒಪ್ಪಿಕೊಂಡಿವೆ. ಇದು ಕಟಾವು ಮತ್ತು ಸಾಗಣೆ ವೆಚ್ಚ ಹೊರತಾಗಿದೆ. ಅವೆರಡೂ ಸೇರಿ ರೈತರಿಗೆ ಇದಕ್ಕಿಂತ ಹೆಚ್ಚು ಹಣ ಸಿಗಲಿದೆ. ಆದ್ದರಿಂದ ಗುರುವಾರದಿಂದಲೇ ಕಾರ್ಖಾನೆಗಳು ಹಂಗಾಮು ಆರಂಭಿಸಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಕಿತ್ತೂರು, ಖಾನಾಪುರ, ಬೈಲಹೊಂಗಲ ಭಾಗದ ರೈತರು ಇದಕ್ಕೆ ಸಮ್ಮತಿ ಸೂಚಿಸಿದರು. ಸದ್ಯ ಕಬ್ಬು ಒಣಗುತ್ತಿದ್ದು ಕೂಡಲೇ ಕಾರ್ಖಾನೆಗಳು ಆರಂಭವಾಗಬೇಕಿದೆ. ₹3,600ಕ್ಕೆ ಒಪ್ಪಿ ಕಬ್ಬು ಕಟಾವು ಆರಂಭಿಸುತ್ತೇವೆ. ಆದರೆ, ರಾಜ್ಯ ಸರ್ಕಾರ ನೀಡಬೇಕಾದ ₹1,000 ಪ್ರೋತ್ಸಾಹ ಧನ ಹಾಗೂ ಸಕ್ಕರೆ ಎಂಎಸ್‌ಪಿ ದರ ಹೆಚ್ಚಳಕ್ಕೆ ಹೋರಾಟ ಮುಂದುವರಿಯಲಿದೆ ಎಂದು ಹಸಿರು ಸೇನೆ ಮತ್ತು ರೈತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಪರಗಣ್ಣವರ, ಗೌರವಾಧ್ಯಕ್ಷ ರಾಘವೇಂದ್ರ ನಾಯಕ ಹೇಳಿದರು.ಆದರೆ, ಸ್ಥಳದಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದ ನೇಗಿಲಯೋಗಿ ರೈತ ಸೇವಾ ಸಂಘದ ಅಧ್ಯಕ್ಷ ರವಿ ಪಾಟೀಲ ಹಾಗೂ ಬಣದವರು ಕೂಗಾಟ ಶುರು ಮಾಡಿದರು.

ಈ ದರವನ್ನು ಕಳೆದ ತಿಂಗಳಿಂದನಿಂದಲೂ ಹೇಳುತ್ತಲೇ ಇದ್ದಾರೆ. ಹೊಸದೇನೂ ಇಲ್ಲ. ನಾವು ಈ ದರಕ್ಕೆ ಒಪ್ಪುವುದಿಲ್ಲ. ಯಾವುದೇ ಕಾರಣಕ್ಕೂ ಕಾರ್ಖಾನೆ ಆರಂಭವಾಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಅಷ್ಟರೊಳಗೆ ಸಚಿವ ಸತೀಶ ಜಾರಕಿಹೊಳಿ, ಸಭೆ ಮುಗಿದಿದೆ. ರೈತರು ಒಪ್ಪಿದ್ದಾರೆ. ಈ ದರವು ಬೆಳಗಾವಿ ಜಿಲ್ಲೆಗೆ ಮಾತ್ರ ಸಂಬಂಧಿಸಿದೆ. ಬೇರೆ ಜಿಲ್ಲೆಗಳ ಕಾರ್ಖಾನೆಗಳು ಅವುಗಳ ನಿಲುವು ಪ್ರಕಟಿಸಬಹುದು ಎಂದು ಹೇಳಿ ಹೊರ ನಡೆದರು.ಜಿಲ್ಲಾಧಿಕಾರಿ ಕಚೇರಿ ಮುಂದೆ ಪರ- ವಿರೋಧ ಬಣದ ರೈತ ಮುಖಂಡರು ವಾಗ್ವಾದ ಮಾಡುತ್ತಲೇ ಇದ್ದರು.ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಜೈಲ್ ಭರೋ ಚಳವಳಿಗೆ ಪಾದಯಾತ್ರೆ ಆರಂಭಿಸಿದ ರೈತರು ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.ಗುರುವಾರ ಜೈಲ್ ಭರೋ ನಡೆಯಬಹುದು ಎಂದು ಮುಂಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆ ಆಯೋಜಿಸಲಾಗಿದೆ.

ಬಗೆಹರಿಸಲು ಯತ್ನಿಸಿದ್ದೇವೆ

‘ಸಕ್ಕರೆ ಕನಿಷ್ಠ ಮಾರಾಟ ದರ ₹50ಕ್ಕೆ ಏರಿಕೆಯಾದರೆ ಕಬ್ಬಿಗೆ ₹3,850 ನೀಡಲು ಸಾಧ್ಯವಿದೆ. ಇದಕ್ಕೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರು ಒಪ್ಪಿಗೆ ನೀಡಿದ್ದಾರೆ. ಈ ರೀತಿ ಸಕ್ಕರೆ ಮಾರಾಟದಿಂದ ಬಂದ ಲಾಭದಲ್ಲಿ ಶೇ70ರಷ್ಟು ಲಾಭಾಂಶ ನೀಡಬೇಕು ಎಂದು ರೈತರು ಕೇಳಿದ್ದಾರೆ. ಇದೆಲ್ಲವೂ ನಂತರ ನಿಗದಿಯಾಗಬೇಕು. ನಾವು ಸಮಸ್ಯೆ ಬಗೆಹರಿಸಲು ಸಾಧ್ಯವಾದ ಯತ್ನ ಮಾಡಿದ್ದೇವೆ. ರೈತರ ಹಿತ ಗಮನದಲ್ಲಿ ಇಟ್ಟುಕೊಂಡೇ ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹಲ್ ಶಿಂಧೆ ಹೇಳಿದರು.

‘ನಗರದಲ್ಲಿ ನಿಷೇಧಾಜ್ಞೆ’

ಗುರುವಾರ ಅಪಾರ ಸಂಖ್ಯೆಯ ರೈತರು ಜೈಲ್ ಭರೋ ಚಳವಳಿ ನಡೆಸಲಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ ಎಂದು ನಗರ ಪೊಲಿಸ್ ಕಮಿಷನರ್ ಪ್ರಕಾಶ್ ನಿಕ್ಕಂ ತಿಳಿಸಿದ್ದಾರೆ.ನಗರದಲ್ಲಿ ಎಲ್ಲಿಯೂ ಐದಕ್ಕಿಂತ ಹೆಚ್ಚು ಜನ ಗುಂಪುಗೂಡುವಂತಿಲ್ಲ ಎಂದರು.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!