ಈ ಬಾರಿಯ ಬಜೆಟ್ ಕುರಿತು ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಏನಂದ್ರು!!??

Picture of Savistara

Savistara

Bureau Report

ಕರ್ನಾಟಕ ಬಜೆಟ್ 2025-26 ರ ಕುರಿತು ಮಾಜಿ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರ ಪತ್ರಿಕಾ ಪ್ರಕಟಣೆ.1.ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿನಂತೆ ಬಹುಸಂಖ್ಯಾತರನ್ನು ಪೂರ್ತಿ ಕಡೆಗಣಿಸಿ, ಅಲ್ಪಸಂಖ್ಯಾತರ ಓಲೈಕೆಯನ್ನು ಈ ಬಜೆಟ್ ನಲ್ಲೂ ಮುಂದುವರಿಸಿರುವುದು ಸ್ಪಷ್ಟ ವಾಗಿದೆ.2.ಸುಮಾರು 4 ಲಕ್ಷ 9 ಸಾವಿರ ಕೋಟಿಯ ಬಜೆಟ್ ನಲ್ಲಿ 7 ಲಕ್ಷ 64 ಸಾವಿರದ 755 ಕೋಟಿ ಸಾಲದ ಹೊರೆ ಆತಂಕಕಾರಿ. ಇಷ್ಟು ಸಾಕಾಗದೆ ರಾಜ್ಯದ ಅಲ್ಪ ಸಂಖ್ಯಾತ ಮಂತ್ರಿಯೊಬ್ಬರು ಜನಸಂಖ್ಯೆಗೆ ಅನುಗುಣವಾಗಿ 60 ಸಾವಿರ ಕೋಟಿ ಯಷ್ಟು ಬಜೆಟ್ ಅನುದಾನಕ್ಕೆ ಬೇಡಿಕೆ ಇಟ್ಟಿರುವುದು ಭವಿಷ್ಯದ ಕುರಿತು ಮತ್ತಷ್ಟು ಆತಂಕ ಸೃಷ್ಟಿಸಿದೆ.3.ಈ ಹಿಂದಿನ ಬಜೆಟ್ ಘೋಷನೆಗಳ ಅನುಷ್ಠಾನವನ್ನು ಪರಿಗಣಿಸಿದಾಗ ಈ ಬಜೆಟ್ ನ ಅಭೂತ ಪೂರ್ವ ಘೋಷಣೆಗಳು ಮೂಗಿಗೆ ತುಪ್ಪ ಸವರಿದಂತೆ ಗೋಚರಿಸುತ್ತದೆ.4.ಉದ್ಯೋಗ ಸೃಷ್ಟಿಯ ಅನಿವಾರ್ಯತೆಯಿರುವ ಈ ಕಾಲಘಟ್ಟದಲ್ಲಿ ಕೈಗಾರಿಕಾ ಕ್ಷೇತ್ರವನ್ನು ಪೂರ್ಣ ಕಡೆಗಣಿಸಿರುವುದು ಅಕ್ಷಮ್ಯ.5.ಈ ಬಜೆಟ್ ನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಯನ್ನು ಪೂರ್ಣ ಕಡೆಗಣಿಸಿರುವುದು ಎದ್ದು ಕಾಣುತ್ತಿದೆ.6.ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸದಿರುವುದು ಖಂಡನೀಯ. ಸ್ವಲ್ಪ ಸಂಭಾವನೆ ಹೆಚ್ಚಿಸಿರುವುದು ಸಮಾಧಾನಕರ.7.ಬೆಂಗಳೂರು ವಿಶ್ವವಿದ್ಯಾಲಯವನ್ನು ಹೊಸದಾಗಿ ಹೆಸರಿಸುವ ಸಂದರ್ಭದಲ್ಲಿ ರಾಜ್ಯದ ಯಾವುದೇ ಧೀಮಂತ ಸಾಧಕರ ಹೆಸರನ್ನು ಪರಿಗಣಿಸದಿರುವುದು ದೊಡ್ಡ ದುರಂತ.8.ಬೆಂಗಳೂರು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ ದೂರಾದೃಷ್ಟಿಯ ಯೋಜನೆಗಳ ಘೋಷಣೆ ಸ್ವಾಗತಾರ್ಹ. ಗುಣಮಟ್ಟದ ಅನುಷ್ಠಾನದ ಬಗ್ಗೆ ಚಿಂತೆ ಸಹಜ.9.ಆರೋಗ್ಯ ವಿಶ್ವವಿದ್ಯಾಲಯ ದ ಸ್ಥಾಪನೆಯ ವಿಚಿತ್ರ ಘೋಷಣೆ. 3 ದಶಕಗಳ ಹಿಂದೆ ಪ್ರಾರಂಭವಾದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಇನ್ನೂ ತನ್ನದೇ ಆದ ಕ್ಯಾಂಪಸ್ ಇಲ್ಲ.. ಈ ಹೊಸ ವಿಶ್ವ ವಿದ್ಯಾಲಯದ ಘೋಷಣೆ ಹಾಸ್ಯಸ್ಪದ.10.ಕೃಷಿ ವಿಶ್ವವಿದ್ಯಾಲಯ, ಕೃಷಿ ಕಾಲೇಜಿನ ಸ್ಥಾಪನೆ ಯ ಘೋಷಣೆ ಸ್ವಾಗತಾರ್ಹ.11.ಕರಾವಳಿ ತೀರದ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರದ ಕುರಿತು ಚಿಂತನೆ ಸ್ವಾಗತಾರ್ಹ.12.ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರನ್ನು ಓಲೈಸುವ ಸಿದ್ದರಾಮಯ್ಯರವರ ಈ ಬಜೆಟ್ ಕೇವಲ ವೋಟ್ ಬ್ಯಾಂಕ್ ರಾಜಕಾರಣವನ್ನು ಪ್ರತಿಬಿಂಬಿಸುವ ಬಜೆಟ್ ಆಗಿರುವುದು ಈ ರಾಜ್ಯದ ಬಹು ಸಂಖ್ಯಾತರಿಗೆ ಅನ್ಯಾಯ ಮಾಡಿದ ಬಜೆಟ್.ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾಜಿ ಶಾಸಕ.

[t4b-ticker]
error: Content is protected !!