ರಾಜಕೀಯದಲ್ಲೂ ನಾನು ಯೋಗಿ, ಉತ್ತರಾಧಿಕಾರಿ ಅಲ್ಲನಾವು ರಾಜಕೀಯದಲ್ಲೂ ಕೂಡ ಕೇವಲ ಆಗಿಯೇ ಇದ್ದೇನೆ. ನಾನು ಅನ್ನೋದು ನಿಮಿತ್ತ, ಯಾರದ್ದೇ ಉತ್ತರಾಧಿಕಾರಿ ಅಲ್ಲ ಯೋಗಿ ಆಗಿಯೇ ಮುಂದುವರಿಯಲು ಇಷ್ಟಪಡುತ್ತೇನೆ.ಅವಕಾಶ ಸಿಕ್ಕರೆ ಗೋರಖನಾಥ ಮಠಕ್ಕೆ ಮರಳುವೆ ಹೊರತು ದಿಲ್ಲಿ ಕಡೆಗೆ ಅಲ್ಲ.” ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿ ದ್ದಾರೆ. ಈ ಮೂಲಕ ಕೇಂದ್ರ ರಾಜಕಾರಣಕ್ಕೆ ಸಿಎಂ ಯೋಗಿ ಧುಮುಕುತ್ತಾರೆ ಎಂಬ ನಿರೀಕ್ಷೆಗಳಿಗೆ ತೆರೆ ಎಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿ ಯ ಬಳಿಕ ಪ್ರಧಾನಿ ಹುದ್ದೆ ಸಂಭಾಳಿಸು ವವರ ಪಟ್ಟಿಯಲ್ಲಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಅವರನ್ನು ಗುರುತಿಸಲಾಗು ತ್ತಿದೆ. ಆದರೆ, ಸಿಎಂ ಯೋಗಿ ಆದಿತ್ಯನಾಥ್ ಅವರು ದಿಲ್ಲಿಗೆ ತೆರಳಲ್ಲ ಎಂದು ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ. “ಮುಂಬ ರುವ 2027ರ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಲಿದೆ. ರಾಜ್ಯದ ಶೇ.80 ರಷ್ಟು ಜನರ ಮತಗಳು ಬಿಜೆಪಿ ಜತೆಗಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಾವು ಮುಚ್ಚಿಟ್ಟಿಲ್ಲ: ಮಹಾಕುಂಭದಲ್ಲಿಮಾ. 14ರಂದು ಹೋಳಿ ಹಬ್ಬವಿದ್ದು, ಅದರ ಹಿನ್ನೆಲೆಯಲ್ಲಿ ಸಂಭಾಲ್ ನ ಕೋಟವಾಲಿ ಪೊಲೀಸ್ ಠಾಣೆಯ ಡಿಎಸ್ ಪಿ ಅನುಜ್ ಚೌಧರಿ ಅವರು,
“ಹೋಳಿ ವರ್ಷದಲ್ಲಿ ಒಮ್ಮೆ ಬರುತ್ತದೆ. ಶುಕ್ರವಾರದ ನಮಾಜ್ ವರ್ಷದಲ್ಲಿ ಕೆಸಿ ಬಾರಿ ಮಾಡಬಹುದು. ಹಾಗಾಗಿ ಮುಸ್ಲಿರಿ ಸೋದರರು ಹೋಳಿಯ ದಿನದಂದು ಮನೆಯೊಳಗೆ ಉಳಿದು ಬಣ್ಣಗಳ ಸಂಭ್ರಮಾಚರಣೆಗೆ ಸಹಕರಿಸಲಿ,” ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗಿ,” ಪೈಲ್ವಾನ್ ರೀತಿಯಲ್ಲಿ ನಮ್ಮ ಡಿಎಸ್ ಪಿ ಮಾತನಾಡಿದ್ದಾರೆ. ಚೌಧರಿ ಅವರು ಮಾಜಿ ಕುಸ್ತಿಪಟು, ಅರ್ಜುನ ಪ್ರಶಸ್ತಿ ಪುರಸ್ಕೃತರು. ಈಗಾಗಲೇ ಹೋಳಿ ಯಂದು ನಮಾಜ್ ಅನ್ನು ಮಧ್ಯಾಹ್ನ ಗಂಟೆಯ ಬಳಿಕ ಮಾಡಲು ಮುಸ್ಲಿಂ. ನಾಯಕರು ನಿರ್ಧಾರ ಮಾಡಿ ಸಹಕಾರಕ್ಕೆ ಒಪ್ಪಿದ್ದಾರೆ. ಮಸೀದಿಗೆ ಪ್ರಾರ್ಥನೆಗೆ ಹೋಗುವುದು ಕಡ್ಡಾಯವಲ್ಲ,”ಎಂದಿದ್ದಾರೆ. ಕಾಲ್ತುಳಿತ ಘಟನೆಯಲ್ಲಿ 30 ಯಾತ್ರಿಕರು ಮೃತಪಟ್ಟಿದ್ದಕ್ಕೆ ಸಂತಾಪ ಸೂಚಿಸಿದ ಸಿಎಂ ಯೋಗಿ ಅವರು, ‘ನಮ್ಮ ಸರಕಾರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿಲ್ಲ. ಐಕ್ಯತೆಗೆ ಮಹಾ ಕುಂಭವು ಉತ್ತಮ ನಿದರ್ಶನ, ” ಎಂದರು.













































