ಮೈಸೂರು: ₹2ರಿಂದ ₹3 ಕೋಟಿ ವೆಚ್ಚದಲ್ಲಿ ಎಸ್.ಜಾನಕಿ ಸ್ಮಾರಕ

Picture of Savistara

Savistara

Bureau Report

ಮೈಸೂರು: ಎಸ್‌.ಜಾನಕಿ ಅವರ ಅಂತ್ಯಕ್ರಿಯೆ ನಡೆದ ಕಣಿಯನಹುಂಡಿಯ ಜಮೀನಿನಲ್ಲಿ ಎಸ್.ಜಾನಕಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ₹2-₹3 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಸಾರಾ ಮಹೇಶ್‌ ಘೋಷಿಸಿದರು.

ಎಸ್.ಜಾನಕಿ 12ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಜಾನಕಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಜಮೀನಿನ ಮಾಲೀಕರಾದ ನವೀನ್ ಅವರು 20 ಗುಂಟೆ ಜಾಗವನ್ನು ಉಚಿತವಾಗಿ ಟ್ರಸ್ಟ್ ಗೆ ನೀಡಲು ಒಪ್ಪಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೀಲಿ ನಕ್ಷೆ ತಯಾರಿಸಲು ಹೇಳಿದ್ದಾರೆ ಎಂದರು.ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಎಸ್.ಜಾನಕಿ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಜಾನಕಿ ಧ್ಯಾನ ಮಂದಿರ, ಎಸ್.ಜಾನಕಿ ಅಧ್ಯಯನ ಕೇಂದ್ರ ಹಾಗೂ ‘ಕೃಷ್ಣ ಕಲ್ಯಾಣ’ ಕಲ್ಯಾಣ ಮಂಟಪ ನಿರ್ಮಿಸಲಿದ್ದೇವೆ ಎಂದು ಹೇಳಿದರು.ಹಂಸಲೇಖ ಹಾಗೂ ರಾಜ್ ಇವೆಂಟ್ಸ್ ಮುಖ್ಯಸ್ಥ ಸಿದ್ದರಾಜು ಅವರು ಸ್ಮಾರಕ ನಿರ್ಮಾಣಕ್ಕೆ ₹5 ಲಕ್ಷ ನೀಡುವುದಾಗಿ ವೇದಿಕೆಯಲ್ಲಿ ಘೋಷಿಸಿದರು.

ಸಂಗೀತಗಾರರಿಂದ ಎಸ್.ಜಾನಕಿ ಹಾಡಿರುವ ಹಾಡುಗಳ ಗಾಯನ ಕಾರ್ಯಕ್ರಮ ನಡೆಯುತ್ತಿದೆ. ಅಭಿಮಾನಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ.

News Updates

ಎಲೆ ಚುಕ್ಕೆ ಸೇರಿ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ನಿಯಮ 377ರಡಿ ಸಂಸತ್ತಿನಲ್ಲಿ ಧ್ವನಿಯೆತ್ತಿದ ಸಂಸದ ಕ್ಯಾ.ಚೌಟ | CPCRI ನೇತೃತ್ವದಲ್ಲಿ ರೋಗ ನಿಯಂತ್ರಣ ವೆಚ್ಚ ಆಧಾರಿತ ವೈಜ್ಞಾನಿಕ ಅಧ್ಯಯನ, MIDH ನಿಯಮ ತಿದ್ದುಪಡಿಗೆ ಒತ್ತಾಯ

[t4b-ticker]
error: Content is protected !!