ವಕ್ಸ್ ಕಾಯ್ದೆವಿರೋಧಿಸಿ ಕೋಲಾಹಲ, ಮಸೂದೆ ಪ್ರತಿ ಹರಿದ ಎನ್ ಸಿ ಶಾಸಕರು!

Picture of Savistara

Savistara

Bureau Report

ಮಾರ್ಷಲ್ಸ್ ಗಳು ಅವರನ್ನು ತಡೆದು ನಿಲ್ಲಿಸಿದಾಗ, ಘೋಷಣೆ ಕೂಗಿ ಕೋಲಾಹಲ ಎಬ್ಬಿಸಿದ್ದರು.

ಜಮ್ಮು-ಕಾಶ್ಮೀರ(J&k Assembly): ವಕ್ಸ್ ತಿದ್ದುಪಡಿ ಕಾಯ್ದೆಯ ಅಧಿನಿಯಮ ವಿರೋಧಿಸಿ ಸೋಮವಾರ (ಏ.07) ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಸರೆನ್ಸ್ ಮತ್ತು ಮೈತ್ರಿ ಪಕ್ಷಗಳು ಪ್ರತಿಭಟನೆ ನಡೆಸಿ, ವಕ್ಸ್ ತಿದ್ದುಪಡಿ ಮಸೂದೆಯ ಪ್ರತಿಯನ್ನು ಹರಿದು ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ವಕ್ಸ್ ತಿದ್ದುಪಡಿ ಕಾಯ್ದೆ ಕುರಿತು ಮಂಡಿಸಲಾದ ನಿಲುವಳಿ ಸೂಚನೆಯನ್ನು ಸ್ಪೀಕರ್ ಅಬ್ದುಲ್ ರಹೀಮ್ ರಾರ್ಥ ಅವರ ನಿರ್ಧಾರವನ್ನು ಖಂಡಿಸಿ ಎನ್ ಸಿ ಶಾಸಕರು ಪ್ರತಿಭಟನೆ ನಡೆಸಿರುವುದಾಗಿ ವರದಿ ವಿವರಿಸಿದೆ.ಪ್ರಶೋತ್ತರ ಅವಧಿಯನ್ನು ಮುಂದೂಡಲು ಸ್ಪೀಕರ್ ನಿರಾಕರಿಸಿದಾಗ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ, ಗದ್ದಲವೆಬ್ಬಿಸಿದ ಪರಿಣಾಮ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದ್ದರು. ವಿಧಾನಸಭಾ ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳು ವಕ್ಸ್ ಕಾಯ್ದೆ ಕುರಿತ ತಿದ್ದುಪಡಿ ಅಂಶಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದಿರುವುದಾಗಿ ವರದಿ ತಿಳಿಸಿದೆ.

ನ್ಯಾಷನಲ್ ಕಾನ್ಸರೆನ್ಸ್ ಶಾಸಕ ತನ್ವಿರ್ ಸಾದಿಖ್ ನಿಲುವಳಿ ಸೂಚನೆ ಮುಂದೂಡಿಕೆಯಾದ ಬೆನ್ನಲ್ಲೇ ನ್ಯಾಷನಲ್ ಕಾನ್ಸರೆನ್ಸ್ ಶಾಸಕರು ಬಾವಿಯತ್ತ ತೆರಳಲು ಯತ್ನಿಸಿದ್ದರು, ಆದರೆ ಮಾರ್ಷಲ್ಸ್ ಗಳು ಅವರನ್ನು ತಡೆದು ನಿಲ್ಲಿಸಿದಾಗ, ಘೋಷಣೆ ಕೂಗಿ ಕೋಲಾಹಲ ಎಬ್ಬಿಸಿದ್ದರು.

ಲೋಕಸಭೆ ಬಜೆಟ್‌ ಕಲಾಪದಲ್ಲಿ ವಕ್ಸ್ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿತ್ತು. ಅದರಂತೆ ಏಪ್ರಿಲ್ 5ರಂದು ರಾಷ್ಟ್ರಪತಿ ದೌಪತಿ ಮುರ್ಮು ಅವರು ಮಸೂದೆಗೆ ಅಂಕಿತ ಹಾಕಿದ್ದರು.

[t4b-ticker]
error: Content is protected !!