ಸುಬ್ರಹ್ಮಣ್ಯ, ಎ.12: ಮಂಗಳೂರು – ಸುಬ್ರಹ್ಮಣ್ಯ ನಡುವಿನ ಪ್ಯಾಸೆಂಜರ್ ರೈಲಿಗೆ ಮಂಗಳೂರಿನಲ್ಲಿ ಚಾಲನೆ ನೀಡ ಲಾಗಿದ್ದು, ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದಾಗ ಚೆಂಡೆ ನಾದನದೊಂದಿಗೆ ಸ್ವಾಗತಿಸಲಾಯಿತು.ನಿಲ್ದಾಣಕ್ಕೆ ಆಗಮಿಸಿದ ಸಂಸದ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಅವರನ್ನು ಸಮ್ಮಾನಿಸಲಾಯಿತು. ಸಂಸದರು ಮಾತನಾಡಿ, ಹಲವು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ. ಇಲ್ಲಿನ ಅಭಿವೃದ್ಧಿ ಬೇಡಿಕೆ ಈಡೇರಿಸುವುದಾಗಿ ಹೇಳಿದರು.

ಹಲವು ವರ್ಷಗಳ ಬೇಡಿಕೆ ಈಡೇರಿದ ಖುಷಿ
ಮಂಗಳೂರು -ಸುಬ್ರಹ್ಮಣ್ಯ ನಡುವೆ ಬೆಳಗ್ಗೆ ಸಂಜೆ ಪ್ಯಾಸೆಂಜರ್ ರೈಲು ಓಡಾಟ ನಡೆಸಬೇಕೆಂಬ ಬೇಡಿಕೆ ಹಲವು ವರ್ಷಗಳಾದ್ದಾಗಿತ್ತು. ಹಲವು ಹೋರಾಟ, ಮನವಿಗಳ, ಒತ್ತಾಯದ ಪ್ರಯತ್ನದ ಫಲವಾಗಿ ಬೇಡಿಕೆ ಈಡೇರಿದಂತಾಗಿದ್ದು,

ಹೋರಾಟದ ಜಯದ ಖುಷಿ ಜನರಲ್ಲಿತ್ತು.ಪ್ರಮುಖರಾದ ಸಯ್ಯದ್ ಮೀರಾ ಸಾಹೇಬ್, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ವಿನಯಕುಮಾರ್ ಕೃಷ್ಣದಡ್ಯ ಪುಲಸ್‌ತ್ಯಾ ರೈ, ವಾಡಿಯಪ್ಪ ಗೌಡ ಎರ್ಮಾಯಿಲ್, ವೆಂಕಟರಮಣ ಗೌಡ ಕೊಟ್ರೆ ಸರೋಜಿನಿ ಜಯಪ್ರಕಾಶ್, ಸತೀಶ್ ಎರ್ಕ, ಉಮೇಶ್ ಕೊಂಬಾರುಗದ್ದೆ ಕಿರಣ್ ಮದೆಪರ್ಲ, ಚಂದ್ರಶೇಬ ನಾರಾಯಣ, ಕಿಶೋರ್ ಶಿರಾಡಿ, ದಾಮೋದರ ಗುಂಡ್ಯ, ಮುರಳೀಧರ ಎರ್ಮಾಯಿಲ್, ಪ್ರಕಾಶ್ ಗುಂಡ್ಯ, ತುಕಾರಾಮ ಗೌಡ ಸೂಡ್ಲು ಸುರೇಶ್ ಬಿಳಿನೆಲೆ, ಸಂತೋಷ್, ವಿನಯಚಂದ್ರ ಬಳಕ್ಕ ರಮೇಶ್ ವಾಲ್ತಾಜೆ, ದುರ್ಗಾಪ್ರಸಾದ್ ಕಲ್ಲುಗುಡ್ಡೆ, ಕೃಷ್ಣಪ್ಪ ಗೌಡ, ಮನುದೇವ್ ಏನೆಕಲ್ಲು, ಪ್ರಸಾದ್ ನೆಟ್ಟಣ, ಅನಿತಾ ವಿಜಯ ಕುಮಾರ್ ಬಿಳಿನೆಲೆ ಉಪಸ್ಥಿತರಿದ್ದರು.













































