ಭರ್ಜರಿ ಗುಡ್‌ನ್ಯೂಸ್: ಒಂದೇ ದಿನಕ್ಕೆ 2 ಸಾವಿರ ಇಳಿಕೆ, ಬೆಂಗಳೂರಲ್ಲಿ ಎಷ್ಟಾಯ್ತು ಗೊತ್ತಾ 10 ಗ್ರಾಂ ಬೆಲೆ?

Picture of Savistara

Savistara

Bureau Report

ಅಕ್ಷಯ ತೃತೀಯ ಬಳಿಕ, 10 ಗ್ರಾಂ ನಲ್ಲಿ ಬರೋಬ್ಬರಿ 2180 ರೂ ಕಡಿಮೆ ಆಗಿದೆ. ಇಂದು ಚಿನ್ನ ಖರೀದಿಸಿದರೆ, ಗ್ರಾಹಕರಿಗೆ ಲಾಭ ಆಗೋದು ಗ್ಯಾರಂಟಿ.

ಬೆಂಗಳೂರು: ಅಕ್ಷಯ ತೃತೀಯದ ಮಾರನೇ ದಿನವೇ ಚಿನ್ನದ ಬೆಲೆ ಭರ್ಜರಿಯಾಗಿ ಕುಸಿತ ಆಗಿದ್ದು, ಇಂದಿನ ಖರೀದಿ ಲಾಭ ಆಗೋದು ಗ್ಯಾರಂಟಿ. ನಿನ್ನೆ ದೊಡ್ಡ ಮಟ್ಟದಲ್ಲಿ ಇದ್ದ ಬೇಡಿಕೆ ದೇಶದಲ್ಲಿ ಟನ್‌ಗಟ್ಟಲೆ ಚಿನ್ನ ಬೆಳ್ಳಿ ಮಾರಾಟ ಕಂಡಿತ್ತು. ಮಾರನೆ ದಿನವೇ ಭಾರೀ ಪ್ರಮಾಣದಲ್ಲಿ ಬೆಲೆ ಇಳಿಕೆ ಆಗಿದೆ.ಇಂದಿನ ಬೆಲೆ ಎಷ್ಟಿದೆ?ದೇಶೀಯ ಮಾರುಕಟ್ಟೆಯಲ್ಲಿ ಮೇ 1 ಗುರುವಾರದಂದು, 1 ಗ್ರಾಂ ಚಿನ್ನದ ದರದಲ್ಲಿ ಇಂದು ಬರೋಬ್ಬರಿ 200 ರೂಪಾಯಿ ಕಡಿಮೆ ಆಗಿದೆ. ಹೀಗಾಗಿ ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,775 ರೂ ಇದ್ದು, 24 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 218 ರೂ ಕಡಿಮೆ ಆಗಿ, 9,573 ರೂ ಗೆ ಕಡಿಮೆ ಆಗಿದೆ.

10 ಗ್ರಾಂ ಬೆಲೆ ಎಷ್ಟು?22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 2000 ರೂ ಇಳಿಕೆ ಆಗಿದೆ. ಇಂದಿನ ಬೆಲೆ 87,750 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 2,180 ರೂ ಕಡಿಮೆ ಆಗಿ, ಇಂದಿನ ಬೆಲೆ 95,730 ರೂ ಆಗಿದೆ.

ಬೆಂಗಳೂರಿನ ಚಿನ್ನದ ಬೆಲೆಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 8,775 ರೂ ಇದೆ. ಬೆಳ್ಳಿಯ ಬೆಲೆ 10 ಪೈಸೆ ಕಡಿಮೆ ಆಗಿ, 99,900 ರೂ ಇದೆ.

ಇತಿಹಾಸ ಸೃಷ್ಟಿಸಿದ ಹಳದಿ ಲೋಹ! ಲಕ್ಷದ ಗಡಿ ದಾಟಿದ 10 ಗ್ರಾಂ ಬಂಗಾರ! ಇಳಿಯುತ್ತಾ ಬೆಲೆ? 1964ರಲ್ಲಿ ಎಷ್ಟಿತ್ತು ಚಿನ್ನದ ದರ?ಬುಧವಾರವೂ ಚಿನ್ನ ಬೆಳ್ಳಿ ದರದಲ್ಲಿ 900 ರೂ. ಕುಸಿತಹೊಸದಿಲ್ಲಿಯಲ್ಲಿ ಬುಧವಾರ ಚಿನ್ನದ ಬೆಲೆ ಇಳಿಕೆಯಾಗಿ ಅಕ್ಷಯ ತೃತೀಯ ಹಬ್ಬಕ್ಕೆ ಹೆಚ್ಚಿನ ರಂಗನ್ನು ತಂದಿತು. ಚಿನ್ನದ ಖರೀದಿ ಭರಾಟೆಗೆ ಹೆಚ್ಚುವರಿ ಬಲ ತುಂಬಿತು. 10 ಗ್ರಾಂ ಶುದ್ಧ ಚಿನ್ನದ ದರ 900 ರೂ.ಕಡಿಮೆಯಾಗಿ 98,550 ರೂ.ಗೆ ಮಾರಾಟವಾಯಿತು. ಆಭರಣ ಚಿನ್ನದ ದರ ಕೂಡ ಇಷ್ಟೇ ಪ್ರಮಾಣದಲ್ಲಿಇಳಿಕೆಯಾಗಿ 98,100 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ್‌ ಸಂಘ ತಿಳಿಸಿದೆ. ಬೆಳ್ಳಿ ದರವು ಕೆ.ಜಿಗೆ 4 ಸಾವಿರ ಇಳಿಕೆಯಾಗಿದ್ದು, 98 ಸಾವಿರ ಆಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್‌, 10 ಗ್ರಾಂ ಚಿನ್ನದ ಬೆಲೆಯಲ್ಲಿ60 ರೂ. ಇಳಿಕೆಯಾಗಿ 97,910ರೂ.ಗೆ ಮಾರಾಟವಾಯಿತು. ಇಷ್ಟೇ ತೂಕದ 22 ಕ್ಯಾರೆಟ್‌ಗೆ 50 ಕಡಿಮೆಯಾಗಿ 89,750 ರೂ. ಧಾರಣೆ ಇತ್ತು. ಬೆಳ್ಳಿ ದರ 1 ಕೆ.ಜಿಗೆ ಸಾವಿರ ರೂ. ಕುಸಿದು, 1,00,400 ರೂ.ಗೆ ಮಾರಾಟವಾಯಿತು.

ಕಳೆದ 10 ದಿನಗಳ ಚಿನ್ನದ ಬೆಲೆ ಹೀಗಿದೆ

ದಿನಾಂಕ 22 K

ಮೇ-1, 8775 (-200)

ಏ.30, 8975 (-5)

ಏ.29, 8980 (+40)

ಏ.28, 8940 (-62)

ಏ.27, 9002

ಏ.26, 9002

ಏ.25, 9005

ಏ.24, 9005 (-10)

ಏ.23, 9015 (-275)

ಏ.22, 9290 (+275)

ಏ.21, 9015 (+70)

ಏ.17, 8,920 (+105)

ಮಾರ್ಚ್ 1 ರಂದು 7,940 ರೂ ನಷ್ಟಿದ್ದ ಚಿನ್ನದ ಬೆಲೆ, ಏಪ್ರಿಲ್ 1 ಕ್ಕೆ 8,510 ಗೆ ಏರಿಕೆ ಆಗಿದೆ. ಟ್ರಂಪ್ ಪ್ರತಿಸುಂಕ ಜಾರಿಮಾಡುವ ಘೋಷಣೆ ಮಾಡಿದ ಬಳಿಕ ಏ.4 ರಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಲೋಲಕಲ್ಲೋಲ ಆಗಿದೆ.ಇದೀಗ ಏಪ್ರಿಲ್ ಮೂರನೇ ವಾರದಲ್ಲೂ ಭರ್ಜರಿ ಬೆಲೆ ಏರಿಕೆ ಆಗಿತ್ತು. ಏಪ್ರಿಲ್ ಕೊನೆಯ ವಾರದಲ್ಲಿ ಚಿನ್ನದ ಬೆಲೆ ಇಳಿದಿದೆ. ಇದೀಗ ಅಕ್ಷಯ ತೃತೀಯ ಹಬ್ಬದ ಸೀಸನ್ ಆಗಿರುವುದರಿಂದ ಬೆಲೆ ಏರಿಕೆ ಕಂಡಿದೆ. ಹಬ್ಬ ಮುಗಿದ ಬಳಿಕ ಚಿನ್ನದ ಬೆಲೆ ಇಳಿಕೆ ಆಗಿದೆ.

ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ. ಇಲ್ಲಿರುವ ಚಿನ್ನ-ಬೆಳ್ಳಿಯ ಬೆಲೆ ಜಿಎಸ್‌ಟಿ ಸೇರ್ಪಡೆ ಆಗಿಲ್ಲ. ಇಲ್ಲಿರುವ ಚಿನ್ನದ ದರ ಪಟ್ಟಿ ಜಿಎಸ್‌ಟಿ ಹೊರತುಪಡಿಸಿದ ಬೆಲೆಯಾಗಿದೆ. ಪ್ರತೀ ನಗರ ಹಾಗೂ ನೀವು ವಾಸಿಸುವ ನಗರದ ಆಯಾ ದಿನದ ಚಿನ್ನ ಮತ್ತು ಬೆಳ್ಳಿಗೆ ಎಷ್ಟು ಬೆಲೆ ಇದೆ ಎಂಬುದು ಇಲ್ಲಿ ಪ್ರತೀ ದಿನ ತಿಳಿದುಕೊಳ್ಳಬಹುದಾಗಿದೆ.

[t4b-ticker]
error: Content is protected !!