‘ರಾಮಾಯಣ ಇತಿಹಾಸ ಸೃಷ್ಟಿಸಲಿ, ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯಾಗಲಿ, ಭವ್ಯ ದೃಶ್ಯಕಾವ್ಯ ಕಣ್ತುಂಬಿಕೊಳ್ಳಲು ಕಾಯುತ್ತಿದ್ದೇನೆ’

Picture of Savistara

Savistara

Bureau Report

ಕೆಜಿಎಫ್​ ಸ್ಟಾರ್​ ಯಶ್​ ಮುಖ್ಯಭೂಮಿಕೆಯಲ್ಲಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ್ದು, ಬಹುತೇಕ ಉತ್ತಮ ಪ್ರತಿಕ್ರಿಯೆಗಳನ್ನೇ ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನ ಕಾಂತಾರ ಸಾರಥಿ ರಿಷಬ್ ಶೆಟ್ಟಿ ಅವರು ಯಶ್​ ಮತ್ತು ಚಿತ್ರತಂಡಕ್ಕೆ ಶುಭಕೋರಿದ್ದು, ಬಹುತೇಕರ ಗಮನ ಸೆಳೆದಿದೆ.

ರಿಷಬ್ ಶೆಟ್ಟಿ ಶುಭ ಹಾರೈಕೆ

”ನಮ್ಮ ಕಾಲಾತೀತ ಕಥೆಗಳು ಮತ್ತು ಸಂಸ್ಕೃತಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಜೀವಂತಗೊಳಿಸುವುದನ್ನು ನೋಡುವುದರಲ್ಲಿ ನಿಜವಾಗಿಯೂ ವಿಶೇಷವಾದದ್ದೇನೋ ಇದೆ. ಭಾರತೀಯ ಚಿತ್ರರಂಗಕ್ಕೆ ಇದೊಂದು ಹೆಮ್ಮೆಯ ಕ್ಷಣ! ಯಶ್​​, ರಣ್​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಭವ್ಯ ದೃಶ್ಯಕಾವ್ಯವನ್ನು ದೊಡ್ಡ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ. ರಾಮಾಯಣ ಇತಿಹಾಸ ಸೃಷ್ಟಿಸಲಿ ಮತ್ತು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯಾಗಲಿ!” ಎಂದು ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​ಗಳಲ್ಲಿ ಬರೆದುಕೊಂಡಿದ್ದಾರೆ.

‘ರಾಮಾಯಣ’ದ ಮೊದಲ ಟ್ರೇಲರ್ ಜುಲೈ​ 30ರ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾಗಿತ್ತು. ಅಂದು ಕೂಡಾ ಡಿವೈನ್​​ ಸ್ಟಾರ್​ ಯಶ್​ ಮತ್ತು ಚಿತ್ರತಂಡದ ಮೇಲೆ​ ತಮ್ಮ ಮೆಚ್ಚುಗೆಯ ಮಳೆ ಹರಿಸಿದ್ದರು. ”ನಮ್ಮ ಮಹಾಕಾವ್ಯಗಳ ಕಥೆಗಳು ಮತ್ತು ಪಾತ್ರಗಳೊಂದಿಗೆ ಜನರನ್ನು ಮನವೊಲಿಸುವುದು ಸುಲಭದ ಕೆಲಸವಲ್ಲ. ನಾವೆಲ್ಲರೂ ಅವುಗಳನ್ನು ಕೇಳುತ್ತಾ ಬೆಳೆದಿದ್ದೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ಈ ಕಾಲಾತೀತ ದಂತಕಥೆಗಳ ಬಗ್ಗೆ ತಮ್ಮದೇ ಆದ ಕಲ್ಪನೆಯನ್ನು ಹೊಂದಿದ್ದಾರೆ. ಅಂತಹ ಮನವೊಪ್ಪಿಸುವ ಜಗತ್ತನ್ನು ಸೃಷ್ಟಿಸಿದ್ದಕ್ಕಾಗಿ ತಂಡಕ್ಕೆ ಹ್ಯಾಟ್ಸ್ ಆಫ್. ನಿರ್ದೇಶಕ ನಿತೇಶ್​ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಟೇಕ್​ ಅ ಬೋ.​ ಅಂತಹ ಪ್ರತಿಮಾರೂಪ ಪಾತ್ರಗಳನ್ನು ನಿರ್ವಹಿಸುವಾಗ ಕಲಾವಿದರು ಅನುಭವಿಸುವ ಒತ್ತಡವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಇಲ್ಲಿ ಪ್ರತಿಯೊಬ್ಬ ತಾರೆಯೂ ಆ ಜವಾಬ್ದಾರಿಯನ್ನು ಸ್ವೀಕರಿಸಿ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಎಆರ್​ ರೆಹಮಾನ್​, ಹ್ಯಾನ್ಸ್ ಜಿಮ್ಮರ್ ನಿಮ್ಮ ಸಂಗೀತದಿಂದ ಪ್ರತೀ ಭಾವನೆಯೂ ಸುಂದರವಾಗಿ ಹೇಳಲ್ಪಟ್ಟಿದೆ. ಎಂತಹ ಅದ್ಭುತ ಸಂಗೀತ!. ರಣ್​​ಬೀರ್ ಕಪೂರ್, ಬ್ರದರ್​, ನೀವು ನಮಗೆ ನಿಜವಾಗಿಯೂ ರಾಮನ ಔರಾ ಮತ್ತು ದೈವಿಕತೆಯನ್ನು ಅನುಭವಿಸುವಂತೆ ಮಾಡಿದ್ದೀರಿ. ಯಶ್​ ಸರ್​, ನಿಮ್ಮ ಪ್ರತೀ ದೃಶ್ಯದಲ್ಲೂ ನನ್ನ ಕಣ್ಣುಗಳು ದೊಡ್ಡದಾಗುತ್ತಾ ಹೋಯಿತು. ಆ ಪಾತ್ರಕ್ಕೆ ಬೇರೆ ಯಾರೇ ನ್ಯಾಯ ಒದಗಿಸಬಲ್ಲರು ಎಂದು ನನಗನಿಸೋದಿಲ್ಲ. ನಿಮ್ಮ ಅದ್ಭುತ ಅಭಿನಯದ ಬಗ್ಗೆ ಹೆಚ್ಚು ಹೇಳಲು ಪದಗಳೇ ಸಾಲುತ್ತಿಲ್ಲ. ಆದರೆ ಒಂದು ವಿಷಯ, ಓರ್ವ ಕನ್ನಡಿಗನಾಗಿ ನೀವು ಸದಾ ನಮಗೆ ಹೆಮ್ಮೆ ತರುತ್ತೀರಿ” ಎಂದು ಕಾಂತಾರ ಫ್ರ್ಯಾಂಚೈಸಿ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಿಸಿರುವ ಶೆಟ್ರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಇದೀಗ ಸಿನಿಮಾ ಯಶಸ್ಸಿಗೆ ಹಾರೈಸುವುದರ ಜೊತೆಗೆ ರಾಮಾಯಣವನ್ನು ವೀಕ್ಷಿಸುವ ತಮ್ಮ ಕಾತರವನ್ನೂ ವ್ಯಕ್ತಪಡಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಯೋಜನೆ ತನ್ನ ಬೃಹತ್ ಪ್ರಮಾಣ, ಆಕರ್ಷಕ ದೃಶ್ಯಗಳು ಮತ್ತು ತಾರಾಬಳಗದಿಂದ ಗಮನ ಸೆಳೆದಿದೆ. ಸದ್ಯ ಆರಂಭಿಕ ಪ್ರತಿಕ್ರಿಯೆಗಳು ಚಿತ್ರಕ್ಕೆ ಪ್ಲಸ್​​ ಪಾಯಿಂಟ್​ ಆಗಿವೆ. ಸಿನಿಮಾದಲ್ಲಿ ರಣ್​ಬೀರ್ ಕಪೂರ್ ಭಗವಾನ್ ರಾಮನ ಪಾತ್ರವನ್ನು, ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ಮತ್ತು ಯಶ್ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ, ಸನ್ನಿ ಡಿಯೋಲ್ ಹನುಮಂತನಾಗಿ, ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಂಡಿದ್ದಾರೆ. ಲಾರಾ ದತ್ತಾ ಮತ್ತು ಅರುಣ್ ಗೋವಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

‘ರಾಮಾಯಣ: ಭಾಗ 1’ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್​​ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ. 2ನೇ ಭಾಗವನ್ನು 2027ರ ದೀಪಾವಳಿಯಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಚಿತ್ರದ ಅಂತಾರಾಷ್ಟ್ರೀಯ ಬಿಡುಗಡೆಗಾಗಿ ನಿರ್ಮಾಪಕರು ಸೋನಿ ಪಿಕ್ಚರ್ಸ್‌ನೊಂದಿಗೆ ಕೈಜೋಡಿಸಿದ್ದಾರೆ. ಈ ಚಿತ್ರವು ಪ್ರಪಂಚದಾದ್ಯಂತ 70,000 ಪರದೆಗಳಲ್ಲಿ ಬಿಡುಗಡೆಯಾಗಿದೆ, ಭಾರತೀಯ ಚಲನಚಿತ್ರವೊಂದರ ಅತಿ ದೊಡ್ಡ ಬಿಡುಗಡೆಗಳಲ್ಲಿ ಇದೂ ಒಂದಾಗಿದೆ ಎಂದು ವರದಿಯಾಗಿದೆ.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!