ನರೇಂದ್ರ ಮೋದಿ ಫೈಟರ್, ಯಾವ್ದೇ ಸವಾಲು ಎದುರಿಸುತ್ತಾರೆ- ರಜನಿಕಾಂತ್

Picture of Savistara

Savistara

Bureau Report

ಮುಂಬೈನಲ್ಲಿ ವೇವ್ಸ್ ಸಮ್ಮೇಳನಕ್ಕೆ (World Audio Visual and Entertainment Summit) ಪಿಎಂ ನರೇಂದ್ರ ಮೋದಿ (Narendra Modi) ಅವರು ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್ ಅವರು ನರೇಂದ್ರ ಮೋದಿ ಅವರನ್ನು ಫೈಟರ್ ಎಂದು ಹೇಳುವ ಮೂಲಕ ಕೊಂಡಾಡಿದ್ದಾರೆ.

ಕಾರ್ಯಕ್ರಮಲ್ಲಿ ರಜನಿಕಾಂತ್ (Rajinikanth) ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ಕಾರ್ಯಕ್ರಮವನ್ನು ಮುಂದೂಡಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ನನಗೆ ಮೋದಿ ಅವರ ಮೇಲೆ ನಂಬಿಕೆಯಿತ್ತು. ಈ ಕಾರ್ಯಕ್ರಮ ಖಂಡಿತವಾಗಿಯೂ ನಡೆಯುತ್ತೆ ಎಂದು ವಿಶ್ವಾಸವಿತ್ತು ಎಂದರು.

ನರೇಂದ್ರ ಮೋದಿ ಒಬ್ಬ ಫೈಟರ್. ಅವರು ಎಂತಹ ಸವಾಲನ್ನು ಬೇಕಾದರೂ ಎದುರಿಸುತ್ತಾರೆ. ಅದನ್ನು ಅವರು ಈಗಾಗಲೇ ನಿರೂಪಿಸಿದ್ದಾರೆ. ನಾವು ಕಳೆದ ಒಂದು ದಶಕದಿಂದ ನೋಡುತ್ತಲೇ ಬಂದಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಅವರು ಧೈರ್ಯದಿಂದ ಮತ್ತು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ನಮ್ಮ ದೇಶಕ್ಕೆ ಅವರು ಕಳೆ ತರಲಿದ್ದಾರೆ ಎಂದು ತಲೈವಾ ಕೊಂಡಾಡಿದ್ದಾರೆ.

ವೇವ್ಸ್ ಸಮ್ಮೇಳನಕ್ಕೆ (Waves 2025) ಭಾಗಿಯಾಗಿರೋದು ನನ್ನ ಸೌಭಾಗ್ಯ. ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿರೋದಕ್ಕಾಗಿ ಕೇಂದ್ರ ಸರ್ಕಾರಕ್ಕೆ ನನ್ನ ಅಭಿನಂದನೆಗಳು ಎಂದು ರಜನಿಕಾಂತ್ ಮಾತನಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಜೊತೆ ಮೆಗಾಸ್ಟಾರ್ ಚಿರಂಜೀವಿ, ಹೇಮಾ ಮಾಲಿನಿ, ಮೋಹನ್‌ಲಾಲ್, ಅಕ್ಷಯ್ ಕುಮಾರ್, ಮೋಹನ್‌ಲಾಲ್, ದೀಪಿಕಾ ಪಡುಕೋಣೆ, ರಾಜಮೌಳಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!