ಸುಹಾಸ್​ ಕೊಲೆ: ಹಿಂದೂ ಕಾರ್ಯಕರ್ತರ ವಿರುದ್ಧ ಹೆಡ್​ ಕಾನ್ಸ್ಟೇಬಲ್ ರಶೀದ್ ದೂರು

Picture of Savistara

Savistara

Bureau Report

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಹೆಡ್‌ ಕಾನ್ಸ್‌ ಟೇಬಲ್ ಒಬ್ಬರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನ ಮಾಡಿ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಇಬ್ಬರು ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ ಐಆರ್ ದಾಖಲಾಗಿದೆ.ಹಿಂದೂ ಮುಖಂಡ ಮೂಡಬಿದ್ರೆಯ ಸಮಿತ್ ರಾಜ್ ದರೆಗುಡ್ಡೆ ಹಾಗೂ ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಉಲ್ಲಾಸ್ ಕೆ.ಟಿ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ಹಾಕಲಾಗಿದೆ.“ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಬಜಪೆ ಠಾಣೆಯ ಹೆಡ್‌ ಕಾನ್ಸ್‌ ಟೇಬಲ್ ಕೈವಾಡ ಇದೆ. ಯಾವಾಗ ಬಂಧನ” ಎಂದು ಸಮಿತ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವಿನಾಕಾರಣ ನನ್ನ ಹೆಸರು ಎಳೆದು ತಂದಿದ್ದಾರೆ. ಯಾವುದೇ ಆಧಾರ ಇಲ್ಲದೆ ನನ್ನ ಹೆಸರು ಹಾಕಿ ಅವಹೇಳನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೆಡ್‌ ಕಾನ್ಸ್ಟೇಬಲ್ ರಶೀದ್ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಇಬ್ಬರ ವಿರುದ್ಧ ಎಫ್‌ ಐಆರ್ ದಾಖಲಿಸಿಕೊಂಡಿದ್ದಾರೆ.

[t4b-ticker]
error: Content is protected !!