ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ

Picture of Savistara

Savistara

Bureau Report

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ಹಬ್ಬವು ಕತ್ತಲೆ ಮೇಲೆ ಬೆಳಕು, ಕೆಡಕಿನ ಮೇಲೆ ಒಳಿತು ಹಾಗೂ ಹತಾಶೆ ಮೇಲೆ ಭರವಸೆಯ ಶಾಶ್ವತ ವಿಜಯವನ್ನು ಸಾರುತ್ತದೆ ಎಂದು ಹೇಳಿದ್ದಾರೆ.

Advertisement

ಈ ಹಬ್ಬದ ಋತುವು ಪ್ರತಿಯೊಬ್ಬರಲ್ಲೂ ದಯೆ ಮತ್ತು ಸಕಾರಾತ್ಮಕತೆಯನ್ನು ಹರಡಲು ಹಾಗೂ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಲು ಪ್ರೇರಣೆ ನೀಡಲಿ ಎಂದೂ ಮೋದಿ ಆಶಿಸಿದ್ದಾರೆ.’ನನ್ನ ಪ್ರೀತಿಯ ನಾಗರಿಕರೇ, ದೀಪಾವಳಿಯ ಈ ಶುಭ ಸಂದರ್ಭದಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳು! ಈ ಹಬ್ಬವು ಕತ್ತಲೆ ಮೇಲೆ ಬೆಳಕು, ಕೆಡಕಿನ ಮೇಲೆ ಒಳಿತು ಮತ್ತು ಹತಾಶೆಯ ಮೇಲೆ ಭರವಸೆಯ ಶಾಶ್ವತ ವಿಜಯವನ್ನು ಸಾರುತ್ತದೆ’ ಎಂದು ಮೋದಿ ಅವರು ಭಾರತ ಸರ್ಕಾರದ ‘ಜನಸಂಪರ್ಕ ಪೋರ್ಟಲ್’ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.’ದೀಪಾವಳಿ ಹಬ್ಬವು ಭಾರತದ ಶ್ರೀಮಂತ ಪರಂಪರೆಯನ್ನು ಸಾರುವ ಹಾಗೂ ಎಲ್ಲರ ನಡುವಿನ ಒಗ್ಗಟ್ಟಿನ ಬಂಧವನ್ನು ಬಲಪಡಿಸುವ ಅದ್ಭುತ ಅವಕಾಶವಾಗಿದೆ’ ಎಂದೂ ಮೋದಿ ಬಣ್ಣಿಸಿದ್ದಾರೆ.

Advertisement

‘ದೀಪಾವಳಿಯು ಪ್ರತಿಯೊಬ್ಬರ ಮನೆಯಲ್ಲೂ ಸಂತೋಷ, ಸೌಹಾರ್ದತೆ ಮತ್ತು ಸಮೃದ್ಧಿಯ ಬೆಳಕನ್ನು ಚೆಲ್ಲಲಿ. ಈ ಹಬ್ಬದ ಋತುವು ಪ್ರತಿಯೊಬ್ಬರಲ್ಲೂ ದಯೆ, ಸಕಾರಾತ್ಮಕತೆಯನ್ನು ಹೆಚ್ಚಿಸಿ, ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಕೆಲಸ ಮಾಡಲು ಪ್ರೇರೇಪಿಸಲಿ’ ಎಂದಿದ್ದಾರೆ.ಸಮೃದ್ಧ ಮತ್ತು ‘ವಿಕಸಿತ ಭಾರತ’ವನ್ನು ನಿರ್ಮಿಸುವ ಸಲುವಾಗಿ ಹೊಸ ಶಕ್ತಿ ಹಾಗೂ ದೃಢ ಸಂಕಲ್ಪದೊಂದಿಗೆ ಎಲ್ಲರೂ ಮುನ್ನಡೆಯೋಣ ಎಂದು ಮೋದಿ ಕರೆ ನೀಡಿದ್ದಾರೆ.

Advertisement
News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!