ಮಂಗಳೂರು: ಕಾಂಗ್ರೆಸ್ ಪಕ್ಷದ ಜನವಿರೋಧಿ ನೀತಿಯ ವಿರುದ್ಧ ಬಿಜೆಪಿ ಮಂಗಳೂರು ವಿಭಾಗ ವತಿಯಿಂದ ನಡೆದ ‘ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ’ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಪ್ರದರ್ಶಿಸಲಾದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು.


ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಲ್ಲಿಸಿದ 25 ವರ್ಷಗಳ ಅದ್ಭುತ ಸಾರ್ವಜನಿಕ ಸೇವೆ, ತ್ಯಾಗ ಮತ್ತು ದೂರದರ್ಶಿತ್ವದ ನಾಯಕತ್ವವನ್ನು ಈ ಬೀದಿ ನಾಟಕದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಯಿತು.


ದೇಶದಲ್ಲಿ ದುಷ್ಟ ಶಕ್ತಿಗಳು ಹೋರಾಟದ ನೆಪದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ದೇಶಭಕ್ತನೂ ಮೋದಿಯವರ ಜೊತೆ ನಿಲ್ಲುವ ಮೂಲಕ ದೇಶ ರಕ್ಷಣೆಗೆ ಕೈಜೋಡಿಸಬೇಕು ಎಂಬ ಸಂದೇಶವನ್ನು ಬೀದಿ ನಾಟಕ ನೀಡಿತು.ಮೋದಿಯವರ ಧನಾತ್ಮಕ ಕಾರ್ಯಗಳು, ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕಲಾವಿದರು ಜೀವಂತವಾಗಿ ಅಭಿನಯಿಸಿ ತೋರಿಸಿದ್ದು, ನೆರೆದಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರ ಚಪ್ಪಾಳೆ ಗಿಟ್ಟಿಸಿಕೊಂಡಿತು.ಬಿಜೆಪಿ ಉಭಯ ಜಿಲ್ಲೆಯ ಶಾಸಕರು, ಜಿಲ್ಲಾಧ್ಯಕ್ಷರು, ಬಿಜೆಪಿ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು








































