ಸುಳ್ಯ: ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ವತಿಯಿಂದ ಸುಳ್ಯದಲ್ಲಿ ಸ್ನೇಹ ಮಿಲನ ಕಾರ್ಯಕ್ರಮನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಸೇವೆ ಅನ್ನೋದು ನಮಗೆ ರಾಷ್ಟ್ರಕಾರ್ಯ, ಭಾರತೀಯರ ಪ್ರತಿಯೊಬ್ಬ ನಲ್ಲಿ ರಕ್ತಗತವಾಗಿ ಬಂದಿದೆ, ಸೇವಾ ಭಾರತಿ ದೇಶದ ವಿವಿದೆಡೆ ನೂರಾರು ಸೇವಾ ಕಾರ್ಯವನ್ನು ಮಾಡುತ್ತ ಬಂದಿದ್ದು ಯಾವುದೇ ಪ್ರಚಾರ ಅಪೇಕ್ಷೆಯಿಲ್ಲದೆ ನಡೆಯುತ್ತಿದೆ


ನೂರಾರು ಸ್ವಯಂ ಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸುಳ್ಯದಲ್ಲಿ ಸೇವಾಭಾರತಿ ಸ್ನೇಹ ಸಮ್ಮಿಲನ ಮೂಲಕ ಎಲ್ಲರನ್ನೂ ಮತ್ತೆ ಪ್ರೇರೇಪಿಸುವ ಕಾರ್ಯ ಮಾಡಿದೆಯೆಂದರು. ಟ್ರಸ್ಟ್ ಅಧ್ಯಕ್ಷರಾದ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ ರವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು.


ಈ ವೇಳೆ ವೈದ್ಯರಾದ ಡಾ.ಸದಾಶಿವ ರಾವ್ ಮತ್ತು ಶ್ರೀಮತಿ ಆಶಾಲತಾ ದಂಪತಿಯನ್ನು ಸನ್ಮಾನಿಸಲಾಯಿತು.ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್ ಅಂಗಾರ ಪ್ರಮುಖರಾದ ನ.ಸೀತಾರಾಮು, ಚಂದ್ರಶೇಖರ ತಳೂರು,


ಡಾ.ಹರಪ್ರಸಾದ್ ತುಡಿಯಡ್ಕ, ಸುಧಾಕರ ಕಾಮತ್, ಅಶೋಕ ಪ್ರಭು, ಕೃಷ್ಣ ಪ್ರಸಾದ್ ಮಡ್ಡಿಲ, ಶಶಿಕಲಾ ನೀರಬಿದಿರೆ, ಹರೀಶ್ ಕಂಜಿಪಿಲಿ, ಅವಿನಾಶ್ ಕುರುಂಜಿ, ಕುಸುಮಧಾರ ಎ. ಟಿ,ಅನೂಪ್ ಬಿಳಿಮಲೆ, ಉಮೇಶ್ ಪಿಕೆ ಲಕ್ಷ್ಮೀನಾರಾಯಣ ಕಜೆಗದ್ದೆ,


ಜಗನ್ನಾಥ ಜಯನಗರ ಜಿ.ಜಿ.ನಾಯಕ್ ಮತ್ತಿತರರು ಭಾಗವಹಿಸಿದರು.
ಸೇವಾ ಭಾರತಿ ಆಂಬ್ಯುಲೆನ್ಸ್ ಚಾಲಕ ಪ್ರಶಾಂತ್ ಜಯನಗರ, ರಕ್ತದಾನಿ ಶರತ್ ಪರಿವಾರಕಾನ, ಜ್ಯೋತಿ ಆಸ್ತ್ರತ್ರೆ ಉದ್ಯೋಗಿ ರಾಮಚಂದ್ರ, ಕು.ಪೂರ್ಣಿಮಾ ಕಲ್ಲಾರು ರವರನ್ನು ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
ಟ್ರಸ್ಟ್ ನ ಕಾರ್ಯದರ್ಶಿ ಸುದರ್ಶನ ಸೂರ್ತಿಲ ಸಹಕರಿಸಿದರು. ಟ್ರಸ್ಟ್ ನಿರ್ವಹಣಾ ಸಮಿತಿ ಸದಸ್ಯ ದೇವಿಪ್ರಸಾದ್ ಅರಂಬೂರು ಸ್ವಾಗತಿಸಿದರು. ಗಾಯತ್ರಿ ಚಿದಾನಂದ ವಿದ್ಯಾನಗರ ಸನ್ಮಾನ ಪತ್ರ ವಾಚಿಸಿದರು.
ಟ್ರಸ್ಟ್ ಸದಸ್ಯರಾದ ಶ್ರೀಮತಿ ಲತಾ ಮಧುಸೂಧನ್ ವಂದಿಸಿದರು. ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಕೊನೆಗೆ ಸಹ ಭೋಜನ ನಡೆಯಿತು








































