ನವದೆಹಲಿ: ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ 100ನೇ ಜನ್ಮದಿನವನ್ನು ಪಕ್ಷದ ಇಲ್ಲಿನ ಪ್ರಧಾನ
Advertisement

Advertisement

ಕಚೇರಿಯಲ್ಲಿ ಭಾನುವಾರ (ನ.8ರಂದು) ಆಚರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತಿಳಿಸಿದ್ದಾರೆ.
Advertisement

Advertisement

1927ರ ನ. 8ರಂದು ಜನಿಸಿರುವ ಅವರು 2024ರಲ್ಲಿ ಭಾರತ ರತ್ನ ಗೌರವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
Advertisement

ಬಿಜೆಪಿ ಪ್ರಮುಖ ನೀತಿ ನಿರೂಪಕರಲ್ಲಿ ಒಬ್ಬರಾದ ಅವರು ದೇಶದಾದ್ಯಂತ ಪಕ್ಷದ ಛಾಪು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಕೇಂದ್ರ ಗೃಹಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ 2002ರಿಂದ 2004ರವರೆಗೆ ಉಪ ಪ್ರಧಾನಿಯೂ ಆಗಿದ್ದರು.








































