ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್‌ನ ಸದಸ್ಯ ಹರಿ ಬಾಕ್ಸ‌ರ್ ಅಮೆರಿಕದಲ್ಲಿ ವಶಕ್ಕೆ

Picture of Savistara

Savistara

Bureau Report

Advertisement

ಜೈಪುರ: ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್‌ನ ಕುಖ್ಯಾತ ಸದಸ್ಯ ಹರಿಚಂದ್ ಜಾಟ್ ಅಲಿಯಾಸ್ ಹರಿ ಬಾಕ್ಸರ್‌ನನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಸಂಸ್ಥೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

Advertisement

ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಕಾನೂನು ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ ಎಂದು ರಾಜಸ್ಥಾನ ಪೊಲೀಸರು ಭಾನುವಾರ ತಿಳಿಸಿದ್ದಾರೆ.ರಾಜಸ್ಥಾನದ ಗ್ಯಾಂಗ್‌ಸ್ಟರ್‌ ವಿರೋಧಿ ಕಾರ್ಯಪಡೆ (ಎಜಿಟಿಎಫ್), ಸಿಬಿಐ ಮತ್ತು ಇಂಟರ್‌ಪೋಲ್‌ನಂತಹ ಏಜೆನ್ಸಿಗಳು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Advertisement

ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಕಾನೂನು ಪ್ರಕ್ರಿಯೆಗಳು ಭರದಿಂದ ಸಾಗುತ್ತಿವೆ ಎಂದು ರಾಜಸ್ಥಾನ ಪ್ರಕಟನೆ ದಿನಾಂಕ.ರಾಜಸ್ಥಾನದ ಗ್ಯಾನ್‌ಸ್ಟರ್‌ ವಿರೋಧಿ ಕಾರ್ಯಪಡೆ (ಎಜಿಟಿಎಫ್), ಮತ್ತು ಇಂಟರ್‌ಪೋಲ್‌ನಂತಹ ಏಜೆನ್ಸಿಗಳು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ನಿರಂತರ ಸಮನ್ವಯ ಸಾಧಿಸಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ನಿರ್ಧರಿಸಲಾಗಿದೆ.

ಕ್ರಿಮಿನಲ್ ಚಟುವಟಿಕೆ:

ರಾಜಸ್ಥಾನದ ಕೋಟಪುತಲಿ-ಬೆಹ್ರರ್‌ ಜಿಲ್ಲೆಯ ಚತರ್‌ಪುರ ಗ್ರಾಮದ ನಿವಾಸಿಯಾಗಿರುವ 40ರ ಹರೆಯದ ಹರಿ ಬಾಕ್ಸರ್, ವಿದೇಶದಲ್ಲಿದ್ದುಕೊಂಡೇ ಭಾರತದಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದನು. ಅಲ್ಲದೆ, ಲಾರೆನ್ಸ್ ಬಿಷ್ಟೋಯಿ – ರೋಹಿತ್ ಗೋದಾರಾ ಗ್ಯಾಂಗ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.ರಾಜಸ್ಥಾನ, ಹರಿಯಾಣ, ಪಂಜಾಬ್, ದೆಹಲಿ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ (ಮುಂಬೈ ಮತ್ತು ಪುಣೆ ಸೇರಿದಂತೆ) ರಾಜ್ಯಗಳಲ್ಲಿ ಸುಲಿಗೆ ಬೆದರಿಕೆ ಹಾಗೂ ಗುಂಡಿನ ದಾಳಿ ಪ್ರಕರಣಗಳಲ್ಲಿ ಈತನ ಕೈವಾಡವಿದೆ ಎಂದು ಎಜಿಟಿಎಫ್ ಎಡಿಜಿ ದಿನೇಶ್ ಎಂ.ಎನ್. ಮಾಹಿತಿ ನೀಡಿದ್ದಾರೆ.

ಶ್ರೀಮಂತ ಉದ್ಯಮಿಗಳ ಸುಲಿಗೆ:ಆರೋಪಿಯು ವಾಟ್ಸ್ಆ್ಯಪ್ ಮತ್ತು ಸಿಗ್ನಲ್ ಆಧಾರಿತ ವಿಒಐಪಿ ಕರೆಗಳ ಮೂಲಕ ಶ್ರೀಮಂತ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದನು. ಸುಲಿಗೆ ಬೇಡಿಕೆ ಈಡೇರದಿದ್ದರೆ ವ್ಯಕ್ತಿಗಳ ಮೇಲೆ ಅಥವಾ ಅವರ ಕುಟುಂಬದವರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದನು.

ರೋಹಿತ್ ನಿವಾಸದ ಹೊರಗಡೆ ಗುಂಡಿನ ದಾಳಿ:ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಹಲವು ಫೈರಿಂಗ್ ಪ್ರಕರಣಗಳಲ್ಲೂ ಈತ ಬೇಕಾಗಿದ್ದನು. ಈ ದಾಳಿಯ ಬಳಿಕ ಆತ ಸಾಮಾಜಿಕ ಜಾಲತಾಣದಲ್ಲಿ ತಾನೇ ಹೊಣೆ ಎಂದು ಪೋಸ್ಟ್ ಮಾಡಿದ್ದನು.

22ಕ್ಕೂ ಅಧಿಕ ಪ್ರಕರಣ:ರಾಜಸ್ಥಾನದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ಯೆಯತ್ನ, ಸುಲಿಗೆ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಮತ್ತು ಸಂಘಟಿತ ಅಪರಾಧಗಳು ಸೇರಿದಂತೆ 22ಕ್ಕೂ ಹೆಚ್ಚು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.ಹರಿ ಬಾಕ್ಸರ್ 2023ರ ಏಪ್ರಿಲ್‌ನಲ್ಲಿ ತನ್ನದೇ ಪಾಸ್‌ಪೋರ್ಟ್ ಬಳಸಿ ಭಾರತದಿಂದ ಪರಾರಿಯಾಗಿದ್ದನು. ದುಬೈ, ಡೊಮಿನಿಕನ್ ರಿಪಬ್ಲಿಕ್ ಮತ್ತು ಗಯಾನಾ ಮೂಲಕ ಪ್ರಯಾಣಿಸಿ, ಮೆಕ್ಸಿಕೊದ ಅಕ್ರಮ ವಲಸೆ ಮೂಲಕ ಅಮೆರಿಕ ತಲುಪಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಸಿಬಿಐ ಜತೆಗಿನ ಸಮನ್ವಯದ ಮೇರೆಗೆ 2024ರ ನವೆಂಬರ್ 14ರಂದು ಇಂಟರ್‌ಪೋಲ್ ಮೂಲಕ ಈತನ ವಿರುದ್ದ ರೆಡ್ ಕಾರ್ನರ್ ನೋಟಿಸ್‌ ಜಾರಿಗೊಳಿಸಿತ್ತು.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!