ಸುಳ್ಯ: ಚೊಕ್ಕಾಡಿ – ಅಯ್ಯನಕಟ್ಟೆ -ಬೆಳ್ಳಾರೆ ನಡುವಿನ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿ ಮರಗಳು ರಸ್ತೆಗೆ ವಾಲಿಕೊಂಡು ನಿಂತಿದ್ದು ಅಪಾಯಕ್ಕೆ ಆಹ್ವಾನಿಸುತ್ತಿವೆ.
Advertisement

ಕಳೆದ ಒಂದು ವಾರದಿಂದ ಮಳೆ ಕೂಡ ಆರಂಭಗೊಂಡಿದ್ದು, ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಬೈಕ್ ಸವಾರರು, ಇತರೆ ವಾಹನ ಸವಾರರು ಸಂಚರಿಸುತ್ತಿರುತ್ತಾರೆ.
Advertisement

ಈ ಹಿಂದೆ ಅನೇಕ ಬಾರಿ ರಸ್ತೆಗೆ ಮರ ಬಿದ್ದು ಸಂಚಾರ ಬ್ಲಾಕ್ ಆಗಿ ಶಾಲಾ ಮಕ್ಕಳಿಗೆ ಸಮಸ್ಯೆಯಾಗಿತ್ತು.ದುರಂತ ಸಂಭವಿಸಿ, ಪ್ರಾಣಹಾನಿಯಾದ ನಂತರ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಜಂಟಿ ಸಮೀಕ್ಷೆ ನಡೆಸಿ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಅಲ್ಲದೆ, ರಸ್ತೆ ಬದಿಯ ಮರಗಳ ಕೊಂಬೆಗಳನ್ನು ಕಡಿದು ಸುರಕ್ಷತೆ ಕಲ್ಪಿಸಬೇಕು, ಮಳೆಗಾಲ ಮುಗಿಯುವವರೆಗೆ ತುರ್ತು ತಂಡವನ್ನು ಸಜ್ಜಾಗಿರಿಸಬೇಕು ಮತ್ತು ಮರ ಬಿದ್ದರೆ ತಕ್ಷಣ ತೆರವುಗೊಳಿಸಲು ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
Advertisement








































