ಪ್ರಾಣ ಹೋದರೂ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ

Picture of Savistara

Savistara

Bureau Report

ನವದೆಹಲಿ:ಪ್ರಾಣ ಹೋದರೂ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ನಮ್ಮ ಸೇನಾ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳನ್ನು ಧೂಳಿಪಟ ಮಾಡಿವೆ. ಭಯೋತ್ಪಾದಕರು ಮತ್ತೆ ಹೆಡೆ ಬಿಚ್ಚಿದರೆ ಅದನ್ನು ತುಳಿದು ಹಾಕುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.ಬಿಹಾರ ಮತ್ತು ಉತ್ತರ ಪ್ರದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಆಪರೇಷನ್ ಸಿಂಧೂರದ ಯಶಸ್ಸು ಮತ್ತು ತಾವು ಕೊಟ್ಟಿದ್ದ ಭರವಸೆ ಕುರಿತು ಮಾತನಾಡಿದರು. ಈ ವೇಳೆ ಪಹಲ್ಲಾಮ್ಲ ಉಗ್ರರು ದಾಳಿ ನಡೆಸಿದ ಬಳಿಕ ನಾನು ಬಿಹಾರಕ್ಕೆ ಭೇಟಿ ನೀಡಿದ್ದೆ ಆ ವೇಳೆ ಭಯೋತ್ಪಾದಕರು ಊಹಿಸಲೂ ಸಾಧ್ಯ ವಿಲ್ಲದಂತಹ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ ಅವರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಪ್ರತಿಜ್ಞೆ ಮಾಡಿದ್ದೆ. ಅದರಂತೆ ನಾನು ಅಂದು ನೀಡಿದ್ದ ಭರವಸೆಯನ್ನು ಈಡೇರಿಸಿ ಮರಳಿ ಬಿಹಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.ಆಪರೇಷನ್ ಸಿಂಧೂರ ವೇಳೆ ಭಾರತದ ಹೆಣ್ಣು ಮಕ್ಕಳ ಸಿಂಧೂರದ ಶಕ್ತಿಯನ್ನು ಪಾಕಿಸ್ತಾನ ಮತ್ತು ಇಡೀ ಜಗತ್ತು ನೋಡಿದೆ. ಪಾಕ್‌ಸೇನಾ ರಕ್ಷಣೆಯಲ್ಲಿ ಭಯೋತ್ಪಾದಕರು ಸುರಕ್ಷಿತವಾಗಿದ್ದಾರೆ ಎಂದು ಭಾವಿಸಿದ್ದರು. ಆದರೆ ಭಾರತೀಯ ಸೇನಾ ಪಡೆಗಳು ಅವರು ಮಂಡಿಯೂರುವಂತೆ ಮಾಡಿವೆ. ಆಪರೇಷನ್ ಸಿಂಧೂರ ನಮ್ಮ ಬತ್ತಳಿಕೆಯಲ್ಲಿರುವ ಒಂದು ಬಾಣ ಮಾತ್ರ. ಭಯೋತ್ಪಾದಕರ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ. ಭಯೋತ್ಪಾದಕರು ವಿಷಸರ್ಪವಿದ್ದಂತೆ, ಅವರು ಮತ್ತೆ ಹೆಡೆ ಎತ್ತಲು ಪ್ರಯತ್ನಿಸಿದರೆ ಹುತ್ತದಿಂದ ಹೊರಗೆಳೆದು ತುಳಿದು ಹಾಕುತ್ತೇವೆ ಎಂದು ಮೋದಿ ತಿಳಿಸಿದರು.

ಆಪರೇಷನ್‌ ಸಿಂಧೂರ ವೇಳೆ ಪಾಕಿಸ್ತಾನಕ್ಕೆ ಬೆಂಬಲ ನೀಡಿ ತನ್ನ ಶಸ್ತ್ರಾಸ್ತ್ರ ಪೂರೈಸಿದ ಟರ್ಕಿ ವಿರುದ್ಧ ಕ್ರಮಕ್ಕೆ ಭಾರತ ಮುಂದಾಗಿದೆ. ಟರ್ಕಿ ಏರ್‌ಲೈನ್ಸ್‌ನಿಂದ ಇಂಡಿಗೋ ವಿಮಾನಯಾನ ಸಂಸ್ಥೆ ಎರಡು ವಿಮಾನಗಳನ್ನು ಲೀಸ್‌ಗೆ ಪಡೆದಿತ್ತು. ಲೀಸ್ ಅನ್ನು ರದ್ದುಪಡಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ತಕ್ಷಣದಿಂದ ಲೀಸ್ ರದ್ದುಗೊಳಿಸಿದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಇಂಡಿಗೋ ಮನವಿ ಪುರಸ್ಕರಿಸಿ ಲೀಸ್ ಅವಧಿಗೆ 3 ತಿಂಗಳ ವಿಸ್ತರಣೆ ನೀಡಿದೆ. 3 ತಿಂಗಳ ಬಳಿಕ ಲೀಸ್ ಕೊನೆಗೊಳ್ಳಲಿದೆ. ಇದಕ್ಕೂ ಮುನ್ನ ಭಾರತದ 9 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸರಕು ನಿರ್ವಹಣೆ ಸೇವೆ ಒದಗಿಸುತ್ತಿದ್ದ ಟರ್ಕಿಯ ಸಿಲಿಬಿ ಏವಿಯೇಷನ್‌ಗೆ ನೀಡಿದ್ದ ಭದ್ರತಾ ಅನುಮತಿ ಹಿಂಪಡೆದಿತ್ತು.

[t4b-ticker]
error: Content is protected !!