ಇರಾನಿನ ಪ್ರಸ್ತಾವನೆಗಳು ಅಪೂರ್ಣ: ಇಸ್ಲಾಮಾಬಾದ್ ಗೆ ಅಮೆರಿಕ ರಾಯಭಾರಿಗಳ ಪ್ರವಾಸ ರದ್ದು: ಟ್ರಂಪ್

Picture of Savistara

Savistara

Bureau Report

ವಾಷಿಂಗ್ಟನ್, ಡಿಸಿ, ಎ.26: ಇರಾನ್ ಮಂಡಿಸಿದ ಪ್ರಸ್ತಾವನೆಗಳು ಸಮರ್ಪಕವಾಗಿಲ್ಲವೆಂದು ಉಲ್ಲೇಖಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಗೂ ಅಳಿಯ ಜಾರೆಡ್ ಕುಶ್ನ‌ರ್ ಅವರ ಇಸ್ಲಾಮಾಬಾದ್ ಗೆ ನಿಗದಿಯಾಗಿದ್ದ ಪ್ರವಾಸವನ್ನು ಹಠಾತ್ ರದ್ದುಗೊಳಿಸಿದ್ದಾರೆ ಎಂದು Aljazeera ವರದಿ ಮಾಡಿದೆ.ಇಸ್ಲಾಮಾಬಾದ್‌ನ ಲ್ಲಿ ನಡೆಯಬೇಕಿದ್ದ ಮಾತುಕತೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮಾತುಕತೆಗಳ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಿದೆ.ಪೂರ್ವನಿಗದಿತವಾಗಿದ್ದ ಈ ಭೇಟಿ ಅಂತಿಮ ಕ್ಷಣದಲ್ಲಿ ರದ್ದಾದುದು ರಾಜತಾಂತ್ರಿಕ ಚಟುವಟಿಕೆಗಳ ಮೇಲೆ ಪ್ರಶ್ನೆ ಎತ್ತಿದೆ.

ಟ್ರಂಪ್‌ ತಮ್ಮ ಟೂತ್ ಸೋಷಿಯಲ್ ಖಾತೆಯಲ್ಲಿ ಪ್ರಕಟಿಸಿದ ಸಂದೇಶದ ಮೂಲಕ ಸಭೆ ರದ್ದಾದುದನ್ನು ಘೋಷಿಸಿದರು.ಬಳಿಕ ವರದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಸಮಾಲೋಚಕರು ಇಸ್ಲಾಮಾಬಾದ್ ನಲ್ಲಿ ಅಮೆರಿಕದ ಪ್ರತಿನಿಧಿಗಳಿಗಾಗಿ ನೀಡಿದ್ದ ದಾಖಲೆಗಳ ಕುರಿತು ಪ್ರಸ್ತಾಪಿಸಿದರು. “ಇರಾನಿಯರು ಕೆಲವು ಪ್ರಸ್ತಾವನೆಗಳನ್ನು ನೀಡಿದರು, ಆದರೆ ಅವು ಸಾಕಷ್ಟಾಗಿಲ್ಲ” ಎಂದು ಹೇಳಿದರು.ಈ ಪ್ರವಾಸವು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಮೆರಿಕದ ಹಿತಾಸಕ್ತಿಗಳಿಗೆ ಅನುಕೂಲಕರ ಫಲಿತಾಂಶಗಳು ದೊರೆಯದ ವಿಷಯಕ್ಕಾಗಿ ಉನ್ನತ ಮಟ್ಟದ ಪ್ರತಿನಿಧಿಗಳನ್ನು ಕಳುಹಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.”ಅಮೆರಿಕದ ಬಳಿ ಎಲ್ಲಾ ಆಯ್ಕೆಗಳಿವೆ,” ಎಂದು ಅವರು ಪುನರುಚ್ಚರಿಸಿದರೂ, ಇನ್ನೂ ಅನೇಕ ಪ್ರಶ್ನೆಗಳು ಉತ್ತರಿಸದೇ ಉಳಿದಿವೆ ಎಂದು ಒಪ್ಪಿಕೊಂಡರು.ಇತ್ತೀಚಿನ ಸುತ್ತಿನ ಮಾತುಕತೆಗಳು ಸ್ಥಗಿತಗೊಂಡಿದ್ದರೂ ರಾಜತಾಂತ್ರಿಕ ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿಲ್ಲ ಎಂದು ಟ್ರಂಪ್ ಹೇಳಿದರು. “ಇರಾನ್ ಮಾತುಕತೆಗೆ ಸಿದ್ಧವಿದ್ದರೆ, ಅವರು ಫೋನ್ ತೆಗೆದು ಕರೆ ಮಾಡುವುದಷ್ಟೇ ಸಾಕು,” ಎಂದು ಅವರು ತಿಳಿಸಿದ್ದಾರೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!