ಶ್ವೇತಭವನದ ಭೋಜನ ಕೂಟದಲ್ಲಿ ಗುಂಡಿನ ಸಿಡಿತದ ಶಬ್ದ; ಅಮೆರಿಕ ಅಧ್ಯಕ್ಷ ಟ್ರಂಪ್ ಸ್ಥಳಾಂತರ

Picture of Savistara

Savistara

Bureau Report

ವಾಷಿಂಗ್ಟನ್, ಎ.26: ಶ್ವೇತಭವನದಲ್ಲಿ ಶನಿವಾರ ರಾತ್ರಿ ನಡೆದ ವಾರ್ಷಿಕ ವರದಿಗಾರರ ಭೋಜನ ಕೂಟದ ವೇಳೆ ಜೋರಾಗಿ ಗುಂಡು ಸಿಡಿಯುವ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭದ್ರತಾ ಸಿಬ್ಬಂದಿ ತುರ್ತಾಗಿ ಸ್ಥಳಾಂತರಿಸಿದರು.ಶಬ್ದ ಕೇಳಿಬಂದ ಕೂಡಲೇ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಹಾಗೂ ಇತರ ಭದ್ರತಾ ಅಧಿಕಾರಿಗಳು ಸಭಾಂಗಣದತ್ತ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಟ್ರಂಪ್ ಅವರನ್ನು ತಕ್ಷಣವೇ ಸುರಕ್ಷಿತ ವಲಯಕ್ಕೆ ಕರೆದೊಯ್ಯಲಾಯಿತು.ಅಧಿಕಾರಿಗಳು ಅತಿಥಿಗಳ ನಡುವೆ ದಾರಿ ಮಾಡಿಕೊಳ್ಳುತ್ತಾ ಒಳನುಗ್ಗಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ತಿಳಿಸಿದೆ.

ಘಟನೆಯ ವೇಳೆ ಚಿತ್ರೀಕರಿಸಲಾದ ವೀಡಿಯೊಗಳಲ್ಲಿ ಜೋರಾಗಿ ಸಿಡಿಯುವ ಶಬ್ದ ಕೇಳಿಬರುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸೇರಿದಂತೆ ಇತರ ಪ್ರಮುಖರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು ಎಂದು ಎಎಫ್‌ಪಿ ವರದಿ ತಿಳಿಸಿದೆ.ನಂತರ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಟ್ರಂಪ್ ಹಾಗೂ ಇತರರನ್ನು ಸ್ಥಳದಿಂದ ಸಂಪೂರ್ಣವಾಗಿ ಹೊರತೆಗೆದರು. ಇದೇ ವೇಳೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ವಶಕ್ಕೆ ಪಡೆದಿರುವುದಾಗಿ ಎಎಫ್‌ಪಿ ವರದಿ ತಿಳಿಸಿದೆ.

[t4b-ticker]
error: Content is protected !!