ಡಿಸೆಂಬ‌ರ್ ವೇಳೆಗೆ ತಡೆರಹಿತ ಟೋಲ್ ವ್ಯವಸ್ಥೆ: ನಿತಿನ್ ಗಡ್ಕರಿ

Picture of Savistara

Savistara

Bureau Report

ನವದೆಹಲಿ: ‘ಡಿಸೆಂಬರ್ ವೇಳೆಗೆ ದೇಶದ ಹಲವಾರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಟೋಲ್ ವ್ಯವಸ್ಥೆ ಜಾರಿಗೆ ತರಲು ಯೋಜಿಸಲಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸರಕುಗಳ ಸಾಗಣೆ ವೆಚ್ಚವನ್ನು ತಗ್ಗಿಸಲು, ಉತ್ತಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಶುಕ್ರವಾರ ತಿಳಿಸಿದ್ದಾರೆ.ಈ ಹೊಸ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವಿಶ್ಲೇಷಣೆಯೊಂದಿಗೆ ಸ್ವಯಂಚಾಲಿತವಾಗಿ ವಾಹನಗಳ ಸಂಖ್ಯಾಫಲಕ ಗುರುತಿಸುವಿಕೆ (ಎಎನ್‌ಪಿಆರ್) ಮತ್ತು ಆರ್‌ಎಫ್‌ಐಡಿ ಆಧಾರಿತ ಫಾಸ್ಟ್ಯಾಗ್ ನೊಂದಿಗೆ ತಡೆರಹಿತ ಟೋಲಿಂಗ್ ಅನ್ನು ಸುಗಮಗೊಳಿಸುತ್ತದೆ.ಈ ವ್ಯವಸ್ಥೆಯಿಂದ ಟೋಲ್‌ಗಳಲ್ಲಿ ವಾಹನಗಳ ನಿಲುಗಡೆ ಮಾಡುವ ಅಗತ್ಯವಿಲ್ಲ. ಹೆಚ್ಚು ಸಾಮರ್ಥ್ಯ ಇರುವ ಎಎನ್‌ಪಿಆ‌ರ್ ಕ್ಯಾಮೆರಾ ಮತ್ತು ಫಾಸ್ಟಾಗ್ ರೀಡರ್‌ಗಳ ಗುರುತಿಸುವಿಕೆಯ ಆಧಾರದ ಮೇಲೆ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!