ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ವೇಳೆ ವಿರಾಟ್ ಕೊಹ್ಲಿ (Virat Kohli) ಅವರು, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ಅವರೊಡನೆ ʻಈ ಸಲ ಕಪ್ ನಮ್ದುʼ ಎಂದು ಹೇಳಿಸಿದ ಕ್ಷಣ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತು.
ಹೌದು. 20ನೇ ಓವರ್‌ನ 2ನೇ ಎಸೆತವನ್ನು ಮೇಡಿನ್ ಮಾಡುತ್ತಿದ್ದಂತೆ ಆರ್‌ಸಿಬಿಗೆ ಗೆಲುವು ಪಕ್ಕಾ ಎಂದು ಗೊತ್ತಾಯಿತು. ಇದು ತಿಳಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಅವರು ಮೈದಾನದಲ್ಲಿ ಗಳಗಳನೆ ಅಳಲು ಶುರು ಮಾಡಿದ್ದರು. 18 ವರ್ಷಗಳ ನೆನಪನ್ನು ಒಮ್ಮೆಲೆ ನೆನೆದು ಭಾವುಕರಾದರು. ಅಲ್ಲದೇ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಹಳೆಯ ಟೀಮ್‌ಮೆಟ್ ಎಬಿಡಿ ವಿಲಿಯರ್ಸ್ ಮಗುವಿನಂತೆ ಓಡಿ ಬಂದು ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು. ಇದೇ ವೇಳೆ ಪತ್ನಿ ಅನುಷ್ಕಾ ಶರ್ಮಾ ಸಹ ಕೊಹ್ಲಿಯನ್ನ ಅಪ್ಪಿಕೊಂಡು ಭಾವುಕರಾದರು ಇದು ಅಭಿಮಾನಿಗಳನ್ನೂ ಕಣ್ಣೀರ ಕಡಲಲ್ಲಿ ತೇಲುವಂತೆ ಮಾಡಿತ್ತು.
18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ ಆರ್‌ಸಿಬಿ ಅಭಿಮಾನಿಗಳ ಕೋಟೆಯ ಸಾಮ್ರಾಟ ಬೆಂಗಳೂರನ್ನು ಮರೆಯಲ್ಲಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ… ಕಪ್ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು.
ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.













































