ಸುಳ್ಯ‌ದ ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿಕ ಸಮಾಜ ವತಿಯಿಂದ ರೈತರಿಗೆ ತರಬೇತಿ

Picture of Savistara

Savistara

Bureau Report

ಸುಳ್ಯ ತಾಲೂಕು ಕೃಷಿ ಇಲಾಖೆಯ ವತಿಯಿಂದ 2025 -26 ನೇ ಸಾಲಿನ ರಾಜ್ಯ ವಲಯ ಕೀಟನಾಶಕ ನಿಯಂತ್ರಣ ಪ್ರಯೋಗ ಶಾಲೆ ಯೋಜನೆ ಯಲ್ಲಿ ಭತ್ತದಬೆಳೆಯಲ್ಲಿ ಬೀಜೋಪಚಾರ ಆಂದೋಲನ, ಸುರಕ್ಷಿತ ಕೀಟನಾಶಕಗಳ ಬಳಕೆಯ ರೈತರಿಗೆ ತರಬೇತಿ ಕಾರ್ಯಕ್ರಮ, ವಿಶ್ವ ಪರಿಸರ ದಿನಾಚರಣೆ ಎ.ಪಿ.ಯಂ.ಸಿ ಸಭಾಂಗಣದಲ್ಲಿ ನಡೆಯಿತು. ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಭತ್ತ ಕೃಷಿ ಕುರಿತು ದ.ಕ. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಹರೀಶ್ ಶಣೈ ಮಾಹಿತಿ ನೀಡಿ ಬೀಜೋಪಾಚಾರದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಿದರು.

ಅಡಿಕೆ, ತೋಟಗಾರಿಕಾ ಬೆಳೆಗಳ ಬಗ್ಗೆ ದ.ಕ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಶ್ಮಿ ಮಾಹಿತಿ ನೀಡಿದರು.ಅಡಿಕೆ ಕೃಷಿಯ ಕೀಟನಾಶಕಗಳ ಬಳಕೆಗಳ ಬಗ್ಗೆ ಮಾಹಿತಿ ನೀಡಿ ಕೊಳೆ ರೋಗ ತಡೆಗಟ್ಟಲು ಬೋಡೋ ಮಿಶ್ರಿಣ ಬಳಕೆ, ಪೋಷಕಾಂಶಗಳ ಬಳಕೆ ಅಲ್ಲದೇ ಎಲೆಚುಕ್ಕಿ ರೋಗ ಬಗ್ಗೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ಜೇನು ಸೊಸೈಟಿ ಅಧ್ಯಕ್ಸ ಚಂದ್ರಾ ಕೋಲ್ಚರ್, ಕೃಷಿಕ ಸಮಾಜ ಅಧ್ಯಕ್ಷ ಎ. ಟಿ. ಕುಸುಮಾಧಾರ,ವೀರಪ್ಪ ಗೌಡ,ಕೃಷಿಕ ಬಂಧುಗಳು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!