ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ಶತಾಬಿ ಎಕ್ಸ್‌ಪ್ರೆಸ್‌ ಮೇಲೆ ಕಲ್ಲು ತೂರಾಟ

Picture of Savistara

Savistara

Bureau Report

ಫಿರೋಜಾಬಾದ್: ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಲಖನೌ-ದೆಹಲಿಶತಾಬಿ ಎಕ್ಸ್‌ಪ್ರೆಸ್‌ನ ಬೋಗಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕಲ್ಲು ತೂರಾಟ ನಡೆಸಿದ್ದಾನೆ. ಇದೇ ರೈಲಿನಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ(ಜೂನ್ 12) ಸಂಜೆ 7.45ರ ಸುಮಾರಿಗೆ ಇಟಾವಾ-ತುಂಡ್ಲಾ ವಿಭಾಗದ ಪೆಮೇಶ್ವರ್ ಗೇಟ್ ಸೇತುವೆಯ ಬಳಿ ಶತಾಬ್ ಎಕ್ಸ್‌ಪ್ರೆಸ್‌ನ ಬೋಗಿಯ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ನಡೆದಿದೆ. ಕಾಲ್ಪುರದಲ್ಲಿ ಇ1 ಬೋಗಿಯನ್ನು ಹತ್ತಿದ ಭಾಗವತ್ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ, ಫಿರೋಜಾಬಾದ್ ಎಸ್.ಪಿ ಆದಿತ್ಯ ಲಾಂಫೆ, ಆಗ್ರಾ ರೈಲ್ವೆ ಎಸ್‌ಪಿ ಅನಿಲ್‌ ಝಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ ನಂತರ ಕಲ್ಲು ತೂರಾಟ ಮಾಡಿದ ವ್ಯಕ್ತಿ ಯಾರು ಮತ್ತು ಅವನ ಉದ್ದೇಶ ಏನು ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

[t4b-ticker]
error: Content is protected !!