ಸುಳ್ಯ: ಮನೆಗೆ ತಡರಾತ್ರಿ ಪೊಲೀಸರ ಭೇಟಿಗೆ ಮಹಿಳೆಯರ ಆಕ್ಷೇಪ ಅತಿರೇಕದ ಪ್ರವೃತ್ತಿ ನಿಲ್ಲಿಸಲು ಮನವಿ

Picture of Savistara

Savistara

Bureau Report

ಯಾವುದೇ ಅಪರಾಧದ ಹಿನ್ನೆಲೆ ಇರದ, ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವ ಆರೆಸ್ಸೆಸ್, ಹಿಂದು ಪರ ಸಂಘಟನೆಯ ಕಾರ್ಯಕತರ ಮನೆಗೆ ಮಧ್ಯರಾತ್ರಿ ತೆರಳಿ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದು, ಈ ಅತಿರೇಕದ ಪ್ರವೃತ್ತಿ ನಿಲ್ಲಿಸುವಂತೆ ಒತ್ತಾಯಿಸಿ ಬಂಟ್ವಾಳ ಮತ್ತು ಸುಳ್ಯ ತಾಲೂಕಿನ ಮಹಿಳೆಯರು ಗುರುವಾರ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.

ಕಾನೂನು ಸುವ್ಯವಸ್ಥೆ ರಕ್ಷಣೆ ನೆಪದಲ್ಲಿ ಸಂಘಪರಿವಾರದ ಪ್ರಮುಖರು, ಕಾರ್ಯಕರ್ತರು ಅದರಲ್ಲು ಯಾವುದೇ ಪ್ರಕರಣದಲ್ಲೂ ಗುರುತಿಸಿಕೊಳ್ಳದ ಹಿರಿಯರ ಮನೆಗೆ ತಡರಾತ್ರಿಯಲ್ಲಿ ಮನೆಗಳಿಗೆ ನುಗ್ಗಿ ಅಮಾನವೀಯವಾಗಿ
ವರ್ತಿಸಿ, ವೈಯುಕ್ತಿಕ ಛಾಯಾ ಚಿತ್ರ ತೆಗೆದು, ಮನೆಯ ಜಿಪಿಎಸ್ ದಾಖಲಿಸಿ ಭಯ, ಆತಂಕ ನಿರ್ಮಿಸುವುದು ಖಾಸಗಿತನಕ್ಕೆ ಮತ್ತು ಮೂಲಭೂತ ಹಕ್ಕುಗಳಿಗೆ ದಕ್ಕೆ ಉಂಟು ಮಾಡುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಸುಳ್ಯದಲ್ಲಿ ಮನವಿ ಸಲ್ಲಿಕೆ ಸಂದರ್ಭಪ್ರಮುಖರಾದ ಗುಣವತಿ ಕೊಲ್ಲಂತಡ್ಕ ಶಶಿಕಲಾ ಎ. ನೀರಬಿದರೆ, ಶಶಿಕಲಾ ಸೋಣಂಗೇರಿ, ಶಶಿಕಲಾ ಬೇಲ್ಯ ಸೋಣಂಗೇರಿ, ಆರತಿ ಪುರುಷೋತ್ತಮ, ಸುಶೀಲಾ ಜಿನ್ನಪ್ಪ ಪೂಜಾರಿ ಕಲ್ಲುಮುಟ್ಟು ದಿವ್ಯ ಚೊಕ್ಕಾಡಿ, ದಿವ್ಯಲತಾ ಚೌಟಾಜೆ, ಶೀಲಾ ಕುರುಂಜಿ, ಕಿಶೋರಿ ಶೇಟ್, ಸುಮತಿ ಜಯನಗರ, ಭಾರತಿ ಪುರುಷೋತ್ತಮ ಉಳುವಾರು, ಶಿಲ್ಪಾ ಸುದೇವ್, ಕಿಶೋರಿ ಶೇಟ್, ಪುಷ್ಪ ಮೇದಪ್ಪ ಸಹಿತ ಮಹಿಳೆಯರು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!