
ಸುಳ್ಯ ಪ್ರಖಂಡದ ವಿ.ಹೆಚ್.ಪಿ ಬಜರಂಗದಳ ಸಂಘಟನೆಯ ವತಿಯಿಂದ ಮುಂಬರುವ ಬಕ್ರಿದ್ ಹಾಗೂ ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಗೋಹತ್ಯೆ ಹಾಗೂ ಪ್ರಾಣಿ ಹತ್ಯೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ
ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸುಳ್ಯ ಪೋಲಿಸ್ ಠಾಣೆಗೆ ತೆರಳಿ ಠಾಣಾಧಿಕಾರಿಯವರಿಗೆ ಜೂ.5 ರಂದು ಮನವಿ ಸಲ್ಲಿಸಿದರು.
ರಾಜ್ಯ ಮತ್ತು ದೇಶದ ಕಾನೂನಿನ್ವಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು ಅದರ ಪ್ರಕಾರ ಕುರ್ಬಾನಿಗೆ ನಿಷೇಧವಿದೆ. ಕುರ್ಬಾನಿಗೆ ಜಾನುವಾರು ಸಾಗಾಟವು ಶಿಕ್ಷಾರ್ಹ ಅಪರಾಧ. ಇದಕ್ಕೆ ಒದಗಿಸುವ ಸ್ಥಳವನ್ನು ಕಾನೂನು ಪ್ರಕಾರ ಮುಟ್ಟುಗೋಲು ಹಾಕಲು ಅವಕಾಶವಿದೆ. ಕಾಯ್ದೆ 1959 ತಿದ್ದುಪಡಿ 1975 ರ ಪ್ರಕಾರ ಜಾನುವಾರು ಹತ್ಯೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಅಕ್ರಮ ಜಾನುವಾರು ಸಾಗಾಟವಾಗದಂತೆ ಇಲಾಖೆ ಅಲ್ಲಲ್ಲಿ ನಾಕಾಬಂಧಿ ಹಾಕಬೇಕು. ಜಾನುವಾರು ಹತ್ಯೆ ತಡೆಯಲು ಸಾರ್ವಜನಿಕರಿಗೂ ಅವಕಾಶವಿದ್ದು ಇಲಾಖೆ ಸಾರ್ವಜನಿಕರು ಅವಕಾಶವನ್ನು ಉಪಯೋಗಿಸದಂತೆ ಮುಂಚಿತವಾಗಿ ಎಚ್ಚೆತ್ತು ಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಯದ ಹಾಗೆ ಎಚ್ಚರಿಕೆ ವಹಿಸಬೇಕು. ಕಾನೂನು ಪ್ರಕಾರಇಲಾಖೆಯೊಂದಿಗೆ ಕೈ ಜೋಡಿಸಲು ಸಂಘಟನೆಯ ಕಾರ್ಯಕರ್ತರು ಸದಾ ಸಿದ್ಧರಿದ್ದೇವೆ ಎಂಬ ಬರಹದ ಮನವಿ ಪತ್ರವನ್ನು ಎಸ್.ಐ ಸಂತೋಷ್ ರವರ ಮುಖೇನ ನೀಡಲಾಯಿತು.
ಈ ಸಂದರ್ಭದಲ್ಲಿ ಸೋಮಶೇಖರ್ ಪೈಕ,ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ, ಭಾನುಪ್ರಕಾಶ್ ಪೆರುಮುಂಡ, ಉಪೇಂದ್ರ ನಾಯಕ್, ವರ್ಷಿತ್ ಚೊಕ್ಕಾಡಿ, ಅಭಿಜಿತ್ ಸುಳ್ಯ, ಕಿರಣ್ ಸುಳ್ಯ, ನಿರ್ದೇಶ್ ಸುಳ್ಳಿ, ನಿಕೇಶ್, ಪ್ರಿತೇಶ್ ನಾರ್ಣಾಕಜೆ ಮತ್ತಿತರರು ಉಪಸ್ಥಿತರಿದ್ದರು.













































