
ರಾಮನಗರ: ಪರಿಸರ ದಿನದಂದು ಪ್ಲಾಸ್ಟಿಕ್ ಮಾಲಿನ್ಯಕ್ಕೆ
ಕಡಿವಾಣ ಹಾಕುವ ದಿಟ್ಟ ಹೆಜ್ಜೆಯನ್ನು ಬೆಂಗಳೂರು ಹಾಲು ಒಕ್ಕೂಟ ಇರಿಸಲು ಮುಂದಾಗಿದೆ. ಇದುವರೆಗೆ ಪರಿಸರಕ್ಕೆ ಮಾರಕವಾಗಿರುವ ಪಾಲಿಥಿನ್ ಕವರ್‌ನಲ್ಲಿ ಹಾಲು ಪೂರೈಸುವ ಬದಲು, ಬಯೋಡಿಗ್ರೇಡಬಲ್ (ಜೈವಿಕವಾಗಿ ವಿಘಟನೆ ಹೊಂದುವ) ಕವರ್‌ನಲ್ಲಿ ನಂದಿನಿ ಹಾಲನ್ನು ಗ್ರಾಹಕರ ಮನೆಗೆ ತಲುಪಿಸುವ ಪ್ರಯತ್ನ ಕನಕಪುರ ಮೆಗಾಡೇರಿಯಿಂದ ಆರಂಭವಾಗಿದೆ.
ಹೌದು, ಪ್ರಸ್ತುತ ಹಾಲನ್ನು ಪ್ಯಾಕಿಂಗ್ ಮಾಡಲು ಪಾಲಿಥಿನ್ ಕವರ್ ಬಳಸಲಾಗುತ್ತಿದೆ. ಸರ್ಕಾರ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿದೆಯಾದರೂ, ಹಾಲಿನ ಪ್ಯಾಕಿಂಗ್‌ಗೆ ಪರ್ಯಾಯ ವಸ್ತು ಇಲ್ಲದ ಕಾರಣ ಹಾಲಿನ ಪ್ಯಾಕ್‌ಗಳಿಗೆ ನಿಷೇಧದಿಂದ ವಿನಾಯ್ತಿ ನೀಡಲಾಗಿದೆ. ಆದರೆ, ಹಾಲಿನ ಪೊಟ್ಟಣ ಪರಿಸರಕ್ಕೆ ಮಾರಕವಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮುಂದಡಿ ಇರಿಸಿರುವ ಬಮೂಲ್ ಜೈವಿಕವಾಗಿ ವಿಘಟನೆಗೊಳ್ಳುವ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಲು ಪ್ಯಾಕಿಂಗ್ ಮಾಡಲು ಮುಂದಾಗಿದೆ.
ಕನಕಪುರ ಘಟಕದಲ್ಲಿ ತಯಾರಿಕೆ
ಬಮೂಲ್ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ಸಿದ್ಧವಾಗಿದೆ.ಕನಕಪುರ ಘಟಕದಲ್ಲಿ ತಯಾರಿಕೆ
ಬಮೂಲ್ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ಸಿದ್ಧವಾಗಿರುವ ಡಿ-ಕಂಪೋಸಬಲ್ ಕವರ್ ಬಳಕೆ ಮಾಡುತ್ತಿದೆ.
ಪ್ರಾಯೋಗಿಕವಾಗಿ 2 ಲಕ್ಷ ಬಯೋಡಿಗ್ರೇಡಬಲ್ ಕವರ್ ಬಳಕೆ ಮಾಡಿ ಹಾಲನ್ನು ಪ್ಯಾಕ್ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಒಕ್ಕೂಟದ ವ್ಯಾಪ್ತಿಯ ಎಲ್ಲಾ ಹಾಲನ್ನು ಈ ಪರಿಸರ ಸ್ನೇಹಿ ಕವರ್ ಬಳಕೆ ಮಾಡಿ ಪ್ಯಾಕಿಂಗ್ ಮಾಡುವ ಗುರಿ ಹೊಂದಿದೆ.
ಮಹಾನಗರದ ತ್ಯಾಜ್ಯ ಸಮಸ್ಯೆಗೆ ಪರಿಹಾರ
ಬೆಂಗಳೂರು ಮಹಾನಗರದ ಅರ್ಧಭಾಗದಷ್ಟು ಪ್ರದೇಶದಲ್ಲಿ ಬೆಂಗಳೂರು ಹಾಲು ಒಕ್ಕೂಟ ಹಾಲು ಮತ್ತು ಮೊಸರನ್ನು ಮಾರಾಟ ಮಾಡುತ್ತಿದೆ. ಪ್ರತಿದಿನ 14 ಲಕ್ಷ ಲೀಟರ್ ಹಾಲು ಮತ್ತು ಮೊಸರನ್ನು ಮಾರಾಟ ಮಾಡುತ್ತಿರುವ ಬಮೂಲ್ 200 ಎಂಎಲ್ ನಿಂದ1 ಲೀಟರ್ ವರೆಗೆ ಹಾಲು ಮತ್ತು ಮೊಸರನ್ನು ಕವರ್‌ನಲ್ಲಿ ಪೂರೈಕೆ ಮಾಡುತ್ತಿದೆ. ಪ್ರತಿದಿನ 20 ರಿಂದ 25 ಲಕ್ಷ ಹಾಲಿನ ಕವರ್ ಬಳಕೆ ಮಾಡುತ್ತಿದ್ದು, ಇಷ್ಟು ಕವರ್ ತ್ಯಾಜ್ಯವಾಗಿ ಬದಲಾಗುತ್ತಿದೆ. ಜೈವಿಕವಾಗಿ ವಿಘಟನೆ ಹೊಂದುವ ಹಾಲಿನ ಕವರ್‌ಗಳಲ್ಲಿ ಹಾಲು ಪೂರೈಕೆಯಾದರೆ ಮಹಾನಗರದ ಕಸದ ಸಮಸ್ಯೆಗೆ ಒಂದಷ್ಟು ಪರಿಹಾರ ಕಾಣಬಹುದು.













































