
ಇದು ಸಂಘಟಿತ ಒಕ್ಕೊರಲ ಧ್ವನಿಯ ಕೂಗು ಮತ್ತು ಭಯೋತ್ಪಾದಕ ಸಂಘಟನೆಗಳಾದ ಪಿಎಫ್ ಐ ಹಾಗೂ ಕೆಎಫ್ ಡಿ ಸಂಘಟನೆಗಳ ವಿರುದ್ಧ ತೊಡೆತಟ್ಟಿ ಹೋರಾಟ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಿಜೆಪಿ ನಾಯಕರ, ಹಿಂದೂ ಸಂಘಟನೆ ಪ್ರಮುಖರೂ ಮತ್ತು ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಜಯ!
ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಉಭಯ ಜಿಲ್ಲೆಯ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನ ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ಬಿಜೆಪಿಯ ಕಾರ್ಯಕರ್ತರು, ಮತ್ತು ಸುಹಾಸ್ ಶೆಟ್ಟಿಯವರ ತಾಯಿ ಹಾಗೂ ಮನೆಯವರು ಸೇರಿ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರ ಮೂಲಕ ನಾವು ಮನವಿ ಮಾಡಿದ್ದೆವು. ಇದನ್ನು ರಾಷ್ಟ್ರಮಟ್ಟದಲ್ಲಿ ನಮ್ಮ ರಾಷ್ಟ್ರಾಧ್ಯಕ್ಷರಾದ ಶ್ರೀ ಜೆಪಿ ನಡ್ಡಾರವರು, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾರವರು ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್ ಸಂತೋಷ್ ಜಿ ಅವರು ಖುದ್ದು ಮುತುವರ್ಜಿಯನ್ನು ವಹಿಸಿ, ಈ ಕೇಸಿನ ತೀವ್ರತೆಯನ್ನು ಗಮನಿಸಿ, ಭಯೋತ್ಪಾದಕರ ಸದ್ದಡಗಿಸಲು ಇದನ್ನು ಎನ್ ಐ ಎ ಗೆ ವಹಿಸಿದ್ದಾರೆ.
ಹಾಗಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಭಯೋತ್ಪಾದಕರಿಗೆ ಜಾಗವಿಲ್ಲ, ಮಾನ್ಯ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ದಿಟ್ಟ ನಿರ್ಧಾರಕ್ಕೆ ನಾವೆಲ್ಲರೂ ಚಿರ ಋಣಿ. ಇನ್ಮುಂದೆ ಭಯೋತ್ಪಾದಕ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನು ನಾವೆಲ್ಲರೂ ಕಾಣಲಿದ್ದೇವೆ. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಗಳು. ಈ ಮೂಲಕ ಸುಹಾಸ್ ಶೆಟ್ಟಿಯವರ ಆತ್ಮಕ್ಕೆ ಶಾಂತಿ ಸಿಗುವುದರ ಜೊತೆಗೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಅಮಿತ್ ಶಾ ಅವರ ತಂಡ ಮಾಡಿದೆ. ಭಗವಂತ ಎನ್ ಐ ಎ ಮುಖಾಂತರ ಭಯೋತ್ಪಾದಕರ ಹುಟ್ಟಡಗಿಸುವ ಕೆಲಸ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.













































