ಭಾರತ ವಿಶ್ವಕಪ್ ಗೆದ್ದಾಗ ಕೆಂಪು ಕೋಟೆಯಲ್ಲಿ ಸನ್ಮಾನ ಮಾಡಿರಲಿಲ್ಲ ಮಾಜಿ ಸಚಿವ ಬಿ.ಸಿ ಪಾಟೀಲ್

Picture of Savistara

Savistara

Bureau Report

ತೀರ್ಥಹಳ್ಳಿ : ಭಾರತ ತಂಡ ವಿಶ್ವಕಪ್ ಗೆದ್ದ ಸಂದರ್ಭದಲ್ಲಿ

ಪ್ರಧಾನಿಗಳು ಅವರನ್ನು ಕರೆದು ಕೆಂಪು ಕೋಟೆ ಮೇಲೆ ಸನ್ಮಾನ ಮಾಡಿಲ್ಲ. ತಮ್ಮ ಮನೆಗೆ ಗೌರವದಿಂದ ಕರೆದು ಅಭಿನಂದಿಸಿ ಕಳುಹಿಸಿದರು. ಅದು ಒಬ್ಬ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಮಾಡಬೇಕಾದ ಕೆಲಸ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಹೇಳಿದರು.

ಮಂಗಳವಾರ ತೀರ್ಥಹಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ರಾಜ್ಯಸರ್ಕಾರ ತಮ್ಮ ಒಣ ಪ್ರತಿಷ್ಠೆಗಾಗಿ ವಿಧಾನಸೌಧದ ಎದುರು ಸನ್ಮಾನಿಸಿದರು. ಸನ್ಮಾನ ಮಾಡಿ ಜನಪ್ರಿಯತೆ ತೆಗೆದುಕೊಳ್ಳುವ ಸಲುವಾಗಿ ಕಾರ್ಯಕ್ರಮ ಮಾಡಿದ್ದು, ಅದನ್ನು ಬಿಟ್ಟರೆ ಸಂಪೂರ್ಣ ಬೇಜವಾಬ್ದಾರಿತನ, ಯಾವುದೇ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಿರಲಿಲ್ಲ, ಹಾಗಾಗಿ ಹನ್ನೊಂದು ಜನರ ಪ್ರಾಣವನ್ನು ಕಾಂಗ್ರೆಸ್ ತೆಗೆದುಕೊಂಡಿದೆ ಹನ್ನೊಂದು ಜನರ ಪ್ರಾಣ ಹೋಗಲು ಕಾಂಗ್ರೆಸ್ ನ ಬೇಜವಾಬ್ದಾರಿ ಕಾರಣ ಎಂದರು.

ನನಗೂ ಅದಕ್ಕೂ ಸಂಬಂಧವಿಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಮುಖ್ಯಮಂತ್ರಿಯೋ?ನನಗೂ ಅದಕ್ಕೂ ಸಂಬಂಧವಿಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಮುಖ್ಯಮಂತ್ರಿಯೋ? ಕರ್ನಾಟಕ ರಾಜ್ಯದ ಯಾವುದೇ ಮೂಲೆಯಲ್ಲಿ ಏನೇ ಆದರೂ ಅದಕ್ಕೆ ಮುಖ್ಯಮಂತ್ರಿಗಳು ಹೊಣೆ ಅಲ್ವಾ? ಒಳ್ಳೆ ಕೆಲಸ ಆಗಿದ್ದರೆ ಇದೇ ರೀತಿ ಹೇಳುತ್ತಿದ್ದರಾ?

ಅಥವಾ ಕರ್ನಾಟಕ ರಾಜ್ಯಕ್ಕೆ ಮುಖ್ಯಮಂತ್ರಿಯೋ?

ಮುಖ್ಯಮಂತ್ರಿಯಾಗಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯೇ ಎಂದು ಪ್ರೆಶ್ನೆ ಮಾಡಿದರು.

ಚಿನ್ನಸ್ವಾಮಿ ಕ್ರೀಡಾಂಗಣ ತಮಿಳುನಾಡಿನಲ್ಲಿ ಇದೆಯೇ?

ಎಂದು ಪ್ರಶ್ನೆ ಮಾಡಿದರು

ನನಗೂ ಅದಕ್ಕೂ ಸಂಬಂಧ ಇಲ್ಲ ಎನ್ನಲು, ಇದರಿಂದ ಕೈ ತೊಳೆದಕೊಳ್ಳುವ ಕೆಲಸ ಮಾಡುತ್ತಿದ್ದಾರೆ, ಪೊಲೀಸ್‌ ಅಧಿಕಾರಿಗಳನ್ನು ಬಲಿ ಕೊಟ್ಟು ಅಮಾನತು ಮಾಡಿ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪೊಲೀಸ್‌ ಇಲಾಖೆಯ ನೈತಿಕತೆ ಕುಗ್ಗಿಹೋಗಿದೆ ಎಂದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!