ಸುಳ್ಯ : ಬಿ ಜೆ ಪಿ ಮಂಡಲದ ನೇತೃತ್ವದಲ್ಲಿ ಯೋಗ ದಿನಾಚರಣೆ

Picture of Savistara

Savistara

Bureau Report

ಸುಳ್ಯ ಬಿಜೆಪಿ ಸುಳ್ಯ ಮಂಡಲ ವತಿಯಿಂದ ಸುಳ್ಯದ ಕೇರ್ಪಳದಲ್ಲಿರುವ ಶ್ರೀ ದುರ್ಗಾ ಸಭಾಭವನದಲ್ಲಿ ಯೋಗ ಕಾರ್ಯಕ್ರವು ಜೂ.21 ರಂದು ನಡೆಯಿತು. ಸುಳ್ಯದ ಶಾಸಕರಾದ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸುಳ್ಯ ಶಾಖೆಯ ನಿಶಿತಾನವೀನ್, ಸುಳ್ಯ ಬಂಟರ ಭವನ ಶಾಖೆಯ ಸುನಿತಾ ಕರುಣಾಕರ,ಹೇಮನಾಥ ಕುತ್ತಿಮುಂಡ ,ಆಗಮಿಸಿ ಯೋಗದ ಮಹತ್ವವನ್ನು ಯೋಗ ಪಟುಗಳಿಗೆ ತಿಳಿಸಿದರು.


ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್ ಅಂಗಾರ, ಮಂಡಲ ಸಮಿತಿಯ ಅಧ್ಯಕ್ಷರಾದ ವೆಂಕಟ್ ವಳಲಂಬೆ, ವಿಕಸಿತ ಭಾರತ ಸಂಕಲ್ಪದಿಂದ ಸಾಧನೆಯವರೆಗೆ ಸಮಿತಿಯ ಜಿಲ್ಲಾ ಸಂಚಾಲಕ ಹರೀಶ ಕಂಜಿಪಿಲಿ, ಜಿಲ್ಲಾಉಪಾಧ್ಯಕ್ಷ ರಾಕೇಶ ರೈ,ಕಾರ್ಯದರ್ಶಿ ವಿನಯ್ ಮುಳುಗಾಡು,
ಸುಳ್ಯ ಮಂಡಲ ಸಂಚಾಲಕಿ ಪುಲಸ್ಯ ರೈ,ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಕುಮಾರ, ಪ್ರದೀಪ್ ರೈ, ಕೋಶಾಧಿಕಾರಿ ಸುಭೋಧ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಎ.ವಿ ತೀರ್ಥರಾಮ, ಮಹಿಳಾ ಮೊರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ,ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.

[t4b-ticker]
error: Content is protected !!