ಅಡವಿಟ್ಟ 6.5ಕೆ.ಜಿ ಚಿನ್ನವನ್ನೇ ಎಗರಿಸಿ 3.5ಕೋಟಿ ಸಾಲ ಪಡೆದ ಮ್ಯಾನೇಜರ್ !ಇಬ್ಬರ ಬಂಧನ, ಇನ್ನಿಬ್ಬರಿಗೆ ಶೋಧ | ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ

Picture of Savistara

Savistara

Bureau Report

ನಗರದ ಹೊರವಲಯದ ಶಕ್ತಿನಗರ ವ್ಯವಸಾಯ ಸಂಘವೊಂದಲ್ಲಿ ಗ್ರಾಹಕರು ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣವನ್ನು ಸೊಸೈಟಿ ಮ್ಯಾನೇಜರ್ ಎಗರಿಸಿ ಬೇರೆ ಸೊಸೈಟಿಯಲ್ಲಿ ಅಡವಿಟ್ಟು 3.5 ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಸಹಕಾರಿ ಸಂಘದ ಮ್ಯಾನೇಜರ್ ಪ್ರೀತೇಶ್ ಪ್ರಕರಣದ ಪ್ರಮುಖ ಆರೋಪಿ, ಈತನಿಗೆ ಸಹಕಾರ ನೀಡಿದ ಶೇಖ್ ಮಹ ಮ್ಮದ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗೆ ಶೋಧ ಕಾರ್ಯ ನಡೆಯುತ್ತಿದೆ.ಈ ಸಹಕಾರಿ ಸಂಘದಲ್ಲಿ 20 ಮಂದಿ ಗ್ರಾಹಕರು ಚಿನ್ನಾಭರಣ ಅಡವಿಟ್ಟಿದ್ದರು. ಬ್ಯಾಂಕ್ ಮ್ಯಾನೇಜರ್ ತನ್ನ ಅಧಿ ಕಾರವನ್ನು ದುರ್ಬಳಕೆ ಮಾಡಿಕೊಂಡು. ಸಹಕಾರಿ ಸಂಘದ ಲಾಕರ್‌ನಿಂದ ಚಿನ್ನಾಭರಣವನ್ನು ಎಗರಿಸಿ ತನ್ನ ಆಪ್ತರ ಮೂಲಕ ಶಕ್ತಿನಗರದಲ್ಲೇ ಇರುವ ಇನ್ನೊಂದು ಸಹಕಾರಿ ಸಂಘದಲ್ಲಿ ಅಡವಿಟ್ಟು 3.25 ಕೋಟಿ ರೂ. ಸಾಲ ಪಡೆದಿದ್ದಾನೆ.

ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ:ಆರೋಪಿಯ ವಂಚನೆಯ ಮಾಹಿತಿ ಸಹಕಾರಿ ಸಂಘದೊಳಗೆ ಗುಸುಗುಸು ಸುದ್ದಿಯಾಗುತ್ತಿದ್ದಂತೆ ಆರೋಪಿ ಬೆಂಗಳೂರಿಗೆ ತೆರಳಿ ಅಲ್ಲಿಂದ ವಿದೇಶಕ್ಕೆ ಪರಾರಿಯಾಗಿದ್ದಾನೆ. ಇದರ ಬೆನ್ನಲ್ಲೇ ಗ್ರಾಹಕರು ಸಹಕಾರಿ ಸಂಘಕ್ಕೆ ಬಂದು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿ ದರು. ಜೂ.17ರಂದು ಪ್ರಕರಣ ದಾಖಲಾಗಿದ್ದು, ಆರೋಪಿ ವಿರುದ್ಧ ಲುಕ್ ಔಟ್ ಹೊರಡಿಸಿದ್ದರು.

ಆರೋಪಿ ಮತ್ತೆ ಹಾಜರು: ಸಹಕಾರಿ ಸಂಘದ ವ್ಯವಹಾರದ ಮೇಲೆ ದೊಡ್ಡ ಹೊಡೆತದ ಮುನ್ಸೂಚನೆ ಸಿಗುತ್ತಿದ್ದಂತೆ ಆರೋಪಿ ಪ್ರೀತಮ್ ವಿದೇಶದಿಂದ ಮಂಗಳೂರಿಗೆ ಬಂದು ವಕೀಲರ ಮೂಲಕ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಆರೋಪಿಯ ಹೆಚ್ಚಿನ ವಿಚಾರಣೆಗೆ ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ.

ಆರೋಪಿಯ ಶೋಕಿ ಜೀವನ: ಆರೋಪಿ ಪ್ರೀತೇಶ್ ಶೋಕಿ ಜೀವನಕ್ಕೆ ಮೊರೆ ಹೋಗಿದ್ದು, ಸಾಲ ಪಡೆದ ಹಣವನ್ನು ದುಂದುವೆಚ್ಚಕ್ಕೆ ಬಳಸಿರುವುದು ಪ್ರಾರಂಭಿಕ ತನಿಖೆಯಿಂದ ತಿಳಿದು ಬಂದಿದೆ.

[t4b-ticker]
error: Content is protected !!