ರಾಜ್ಯದ ಗಡಿ ಬಂದಡ್ಕದ ಮೂಲಕ ಅಂತರಾಜ್ಯ ಬಸ್ಸು ವ್ಯವಸ್ಥೆಯನ್ನು ಒದಗಿಸುವ ಕುರಿತು ರಾಜ್ಯ ಸರ್ಕಾರದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಮನವಿ

Picture of Savistara

Savistara

Bureau Report

ಕೇರಳ ರಾಜ್ಯಸರಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದಿಂದ ಗಡಿಪ್ರದೇಶ ಬಂದಡ್ಕದ ಸುಳ್ಯ ತಾಲೂಕು ಆಲೆಟ್ಟಿ- ಬಂದಡ್ಕ, ಕಾಸರಗೋಡು, ಕಾಜ್ಞoಗಾಡ್ ಮೂಲಕ ಹಾದು ಹೋಗುವ ಅಂತರಾಜ್ಯ ಬಸ್ಸು ವ್ಯವಸ್ಥೆಯನ್ನು ಒದಗಿಸುವ ಕುರಿತು ಮನವಿ ಸಲ್ಲಿಸಲಾಯಿತು. ಗಡಿನಾಡು ಕನ್ನಡಿಗರ ಸಂಘ (ರೀ) ಅಧ್ಯಕ್ಷರಾದ ಪುರುಷೋತ್ತಮ ಬೊಡ್ಡನಕೊಚ್ಚಿ. ಗ್ರಾಮ ಗೌಡಸಮಿತಿ ಅಧ್ಯಕ್ಷರಾದ ವೆಂಕಟ್ರಮಣ ಕೊಯಿoಗಾಜೆ. ಮಾಜಿ ಅದ್ಯಕ್ಷರು ಅಚ್ಚುತ ಇಳoದಿಲ, ನೇತೃತ್ವದಲ್ಲಿ ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ಪಿ.ಯಸ್.ಗಂಗಾಧರ, ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ. ಹಿರಿಯರಾದ ಗೌಡ ಸಂಘದ, ಹಾಗೂ ಕಾಂಗ್ರೆಸ್ಸಿನ ಮುಖಂಡರಾದ ನಿತ್ಯಾನಂದ ಮುಂಡೋಡಿ, ಪಿ. ಸಿ. ಜಯರಾಮರೊಂದಿಗೆ ಮಾಜಿ ಸಚಿವ ರಾಮನಾಥ ರೈ ಮತ್ತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಇವರ ಸಾರಥ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರಿಗೆ ಮನವಿಯನ್ನು ನೀಡಲಾಯಿತು. ಮನವಿಗೆ ಸ್ಪಂದಿಸಿದ ಸಚಿವರು ಸಾರ್ವಜನಿಕರ ಸೌಕರ್ಯಕ್ಕಾಗಿ ರಸ್ತೆಸಾರಿಗೆ ವ್ಯವಸ್ಥೆ ಯನ್ನು ಕಲ್ಪಿಸುವ ಭರವಸೆ ನೀಡಿದರು.

[t4b-ticker]
error: Content is protected !!