ಸುಬ್ರಹ್ಮಣ್ಯ:ಕೆ ಎಸ್,ಎಸ್ ಕಾಲೇಜ್ ಅಂತಿಮ ವರ್ಷ ವಿದ್ಯಾರ್ಥಿಗಳಿಂದ ಹರ್ಷಾಚರಣೆಯಲ್ಲಿ ಕಾಲೇಜ್ ನಿಯಮಕ್ಕೆ ವಿರುದ್ಧವಾಗಿ ನಡವಳಿಕೆ |ಸೂಕ್ತ ಕ್ರಮಕ್ಕೆ ದೇವಸ್ಥಾನ ಸಮಿತಿ ಮತ್ತು ಸಚಿವರಿಗೆ ದೂರು

Picture of Savistara

Savistara

Bureau Report

ಸುಬ್ರಹ್ಮಣ್ಯದ ಕೆ .ಎಸ್. ಎಸ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳ ಹರ್ಷಾಚರಣೆ ಯ ವಿಡಿಯೋ ವೈರಲ್ ಆಗಿದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ,ಭಕ್ತರಲ್ಲಿ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜಿನ ಕೊನೆಯ ದಿನ ಕಾಲೇಜಿನ ಆವರಣದೊಳಗಡೆ ಹರ್ಷಾಚರಣೆ ಮಾಡಿದ್ದು, ತಮ್ಮ ಯೂನಿಫಾರ್ಮ್ ಅನ್ನು ಹರಿದು ಬಿಸಾಡಿರುವ ವಿಡಿಯೋ ಸೆರೆಯಾಗಿದೆ,ಕಾಲೇಜ್ ನಿಯಮಕ್ಕೆ ವಿರುದ್ಧವಾದ ನಡವಳಿಕೆಯಾಗಿದ್ದು,ಕಾಲೇಜ್ ಸಮವಸ್ತ್ರ ಹರಿದು ಹಾಕಿ ವಿಕೃತಿ ತೋರಿರುವುದು ಅನಾಗರಿಕ ಲಕ್ಷಣವಾಗಿದ್ದು ಈ ಬಗ್ಗೆ ಸಾರ್ವಜನಿಕರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಗೆ ಮನವಿ ನೀಡಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ನೀಡಿದ್ದಾರೆ. ಅಲ್ಲದೆ ಮುಜರಾಯಿ ಸಚಿವರಿಗೆ ಈ ಬಗ್ಗೆ ದೂರು ಸಾರ್ವಜನಕರು ವಿಡಿಯೋ ಕಳುಹಿಸಿರುವುದಾಗಿ ತಿಳಿದು ಬಂದಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!