ಪ್ರವೀಣ್ ನೆಟ್ಟಾರು ಹ*ತ್ಯೆ : ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್

Picture of Savistara

Savistara

Bureau Report

ಹೊಸದಿಲ್ಲಿ : ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ನೆಟ್ಟಾರು ಹ*ತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದವನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಎಂಬಾತನಾಗಿದ್ದು, ಕತಾರ್‌ನಿಂದ ಕೇರಳಕ್ಕೆ ಆಗಮಿಸಿದಾಗ ಎನ್‌ಐಎ ತಂಡ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ರೆಹಮಾನ್ ಮತ್ತು ತಲೆಮರೆಸಿಕೊಂಡಿದ್ದ ಇತರ ಇಬ್ಬರು ಆರೋಪಿಗಳು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದು, ಒಟ್ಟು ಆರೋಪ ಪಟ್ಟಿ 28 ಕ್ಕೆ ತಲುಪಿದೆ.ತಲೆಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳ ಮಾಹಿತಿ ನೀಡಿದವರಿಗೆ ಎನ್‌ಐಎ ಇನಾಮು ಘೋಷಿಸಿತ್ತು. ರೆಹಮಾನ್ ಮಾಹಿತಿ ನೀಡಿದವರಿಗೆ ನಾಲ್ಕು ಲಕ್ಷ ರೂ. ಇನಾಮು ನೀಡುವುದಾಗಿ ಘೋಷಿಸಿತ್ತು.

ಪಿಎಫ್‌ಐ ನಾಯಕತ್ವದ ನಿರ್ದೇಶನದ ಮೇರೆಗೆ ರೆಹಮಾನ್ ಪ್ರಮುಖ ದಾಳಿಕೋರರು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರರಿಗೆ ಸ್ವಯಂಪ್ರೇರಣೆಯಿಂದ ಆಶ್ರಯ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ ನಂತರ ಆತ ಕತಾರ್‌ಗೆ ಪಲಾಯನ ಮಾಡಿದ್ದ ಎಂದು ತಿಳಿಸಿದ್ದಾರೆ.ಪ್ರವೀಣ್‌ ನೆಟ್ಟಾರು ಅವರನ್ನು ದಕ್ಷಿಣಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ 2022ರ ಜುಲೈ 26, ರಂದು ಪಿಎಫ್‌ಐ ಕಾರ್ಯಕರ್ತರು ಮಾರಕ ಆಯುಧಗಳಿಂದ ಹೊಡೆದು ಹ*ತ್ಯೆಗೈದಿದ್ದರು. 2022 ಆಗಸ್ಟ್ 4 ರಂದು ಪ್ರಕರಣವನ್ನು ಮರು ದಾಖಲಿಸಿಕೊಂಡಿದ್ದ NIA, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನ ಮುಂದುವರಿಸಿದೆ.

[t4b-ticker]
error: Content is protected !!