ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಕೇಂದ್ರ ಸರ್ಕಾರ ನೀಡಿದ ರಸಗೊಬ್ಬರ ಹಾಗೂ ಯೂರಿಯಾವನ್ನು ಕಾಳ ಸಂತೆಯಲ್ಲಿ ಮಾರಿ ರೈತರಿಗೆ ವಂಚಿಸಿ, ಅಧಿಕಾರಕ್ಕೆ ಬಂದ ದಿನದಿಂದಲೂ ನಾಡಿನ ಅನ್ನದಾತರಿಗೆ ಒಂದಲ್ಲ ಒಂದು ಸಂಕಷ್ಟಕ್ಕೆ ದೂಡುತ್ತಿರುವ ಮತ್ತು ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ನಿರಂತರ ಕಿರುಕುಳ ನೀಡುತ್ತಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಭಾರತೀಯ ಜನತಾ ಪಕ್ಷದ ಕ್ರೀಯಾಶೀಲ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಾಯಿತು.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 8,13,000 ಟನ್ ಯೂರಿಯಾವನ್ನು ಕಳುಹಿಸಿದೆ. ಆದರೆ ಇದರ ನಡುವೆಯೂ ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರವು ತನ್ನ ಅಸಮರ್ಪಕ ಆಡಳಿತದಿಂದಾಗಿ ರಸಗೊಬ್ಬರವನ್ನು ಸರಿಯಾಗಿ ಹಂಚಿಕೆ ಮಾಡದೆ ರೈತರಿಗೆ ಅನ್ಯಾಯ ಮಾಡಿದೆ. ಸಬ್ಸಿಡಿಯಲ್ಲಿ ರೂ. 258 ಕ್ಕೆ ಸಿಗಬೇಕಾಗಿದ್ದ ಯೂರಿಯಾ ಇಂದು ಕಾಳಸಂತೆಯಲ್ಲಿ 500 ರೂಪಾಯಿಗಳಿಗೆ ಬಿಕರಿಯಾಗುತ್ತಿದೆ, 1200 ಕ್ಕೆ ಸಿಗಬೇಕಾಗಿದ್ದ ಡಿಎಪಿ ಇಂದು 2000 ಕ್ಕೂ ಅಧಿಕ ಮೊತ್ತಕ್ಕೆ ಮಾರಾಟವಾಗುತ್ತಿದೆ. ರಾಜ್ಯದೆಲ್ಲೆಡೆಯ ರೈತ ಸಮುದಾಯ “ಗೊಬ್ಬರ ಕೊಡಿ-ಇಲ್ಲ ವಿಷ ಕೊಡಿ” ಎಂದು ಬಹಿರಂಗವಾಗಿ ಆಗ್ರಹಿಸುತ್ತಿದೆ.

ಆದರೆ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಮಾತ್ರ, ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರುವ ದಂಧೆಕೋರರ ವಿರುದ್ಧ ಇದುವರೆಗೂ ಕ್ರಮ “ಕೈ”ಗೊಳ್ಳದಿರುವುದು ಅತ್ಯಂತ ವಿಪರ್ಯಾಸ.ಈ ವೇಳೆ ಪ್ರತಿಭಟನೆಯಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾದ ಎನ್.ಕೆ ಜಗದೀಶ್ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರ ಅವರು, ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು, ತೀರ್ಥಹಳ್ಳಿ ಶಾಸಕರು ಮತ್ತು ಮಾಜಿ ಗೃಹ ಸಚಿವರು ಶ್ರೀ ಆರಗ ಜ್ಞಾನೇಂದ್ರ ಅವರು, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಆರುಣ್ ಅವರು ,

ಶಿವಮೊಗ್ಗ ಜಿಲ್ಲಾ ಬಿಜೆಪಿಯ ರೈತ ಮೋರ್ಚಾ ಅಧ್ಯಕ್ಷರಾದ ಸಿದ್ದಲಿಂಗಪ್ಪ ನಿಂಬೆಗೊಂದಿ ಅವರು, ಮಾಜಿ ಸಚಿವರಾದ ಹರತಾಳು ಹಾಲಪ್ಪ ಅವರು, ಶಿವಮೊಗ್ಗ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ ಅವರು, ಮಾಜಿ ಶಾಸಕರಾದ ಕೆ.ಬಿ ಅಶೋಕ್ ನಾಯ್ಕ್ ಅವರು, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾದ ಶ್ರೀ ದತ್ತಾತ್ರಿ ಅವರು, ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ರೈತಬಂಧುಗಳು ಉಪಸ್ಥಿತರಿದ್ದರು.











































