ಐವರ್ನಾಡು ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ ಕಾರ್ಯಕ್ರಮ | ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಿಗೆ ಮಾಹಿತಿ ನೀಡದೆ ಸಭಾಭವನ ಉದ್ಘಾಟನೆ,ಕಾರ್ಯಕರ್ತರಿಂದ ಆಕ್ರೋಶ

Picture of Savistara

Savistara

Bureau Report

ಐವರ್ನಾಡು :ಐವರ್ನಾಡು ಗ್ರಾಮದಲ್ಲಿ ಶಾಸಕರಾದ ಕುಮಾರಿ ಭಾಗಿರತಿ ಮುರುಳ್ಯ ರವರು ಕೊಡ್ತಿಲು ಬಳಿ ಕಾಂಕ್ರಿಟ್ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಸಭಾಭವನ ಉದ್ಘಾಟನೆಯ ಕಾರ್ಯಕ್ರಮ ಇಂದು ನಡೆಯಿತು.ಈ ವಿಚಾರವಾಗಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಿಗೆ ಮಾಹಿತಿ ನೀಡಿರಲಿಲ್ಲ ಈ ಬಗ್ಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಕಳೆದ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಬಂಡಾಯದ ನಿಂತ ಗುಂಪಿನೊಂದಿಗೆ ಸೇರಿಕೊಂಡು ಉದ್ಘಾಟನೆ ನಡೆಸಿದ್ದು ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆವಿಲ್ಲವೇ? ಪ್ರಶ್ನಿಸಿದ್ದಾರೆ ಆಕ್ರೋಶಗೊಂಡ ಕಾರ್ಯಕರ್ತರು ಶಾಸಕರ ಕಚೇರಿಗೆ ತೆರಳಿ ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ ಈ ವೇಳೆ ಶಕ್ತಿ ಕೇಂದ್ರ ಪ್ರಮುಖರು ನಮಗೆ ಪಕ್ಷ ಜವಾಬ್ದಾರಿ ನೀಡಿದ್ದು ನಮ್ಮ ಗಮನಕ್ಕೆ ಯಾಕೆ ತರುತ್ತಿಲ್ಲ,ನಾವು ಅಭಿವೃದ್ದಿಗೆ ವಿರೋಧವಿಲ್ಲ ನಮ್ಮನ್ನು ಯಾಕೆ ವಿಶ್ವಾಸ ತೆಗೆದುಕೊಳ್ಳುತ್ತಿಲ್ಲ?ನಾವು ಆನೇಕ ಕಾಮಗಾರಿ ಬಗ್ಗೆ ಗಮನ ಸೆಳೆದರೂ ಐವರ್ನಾಡು ಗ್ರಾಮದಲ್ಲಿ ಬಿಜೆಪಿ ಯ ನಿಷ್ಠಾವಂತ ಕಾರ್ಯಕರ್ತರ ಭಾವನೆ ಗೆ ಸ್ಪಂದಿಸುತ್ತಿಲ್ಲ ವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಬಿಜೆಪಿ ಸಮಿತಿಗೆ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು ದೂರು ನೀಡಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!