ಭಟ್ಕಳ: ಊರಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಾಗ ಒಮ್ಮೆ ಅಲ್ಲಿ ಹೋಗಿ ನೋಡಿಕೊಂಡು ಬರುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು ಇದು ನಮ್ಮ ನಡುವೆ ಸಾಮರಸ್ಯದ ಭಾವನೆಯನ್ನುಬೆಳೆಯಲು ಸಹಕರಿಸುತ್ತದೆ ಎಂದು ಸ್ವಾಮಿ ವಿವೇಕಾನಂದ ಜನಸ್ಪಂದನಾ ಫೌಂಡೆಷನ್ ಅಧ್ಯಕ್ಷ ವಸಂತ ನಾಯ್ಕ ಹೇಳಿದರು.

ತಾಲೂಕಿನ ಜಾಲಿಯಲ್ಲಿರುವ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಭಾಭವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸ್ವಾಮಿ ವಿವೇಕಾನಂದ ಜನಸ್ಪಂದನಾ ಫೌಂಡೇಶನ್ ವತಿಯಿಂತ ರವಿವಾರ ನಡೆದ ಕೃಷ್ಣಲೀಲಾ ಧಾರ್ಮಿಕ ಸ್ಪರ್ಧಾ ಚಟುವಟಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಹಿಂದೆ ಹಬ್ಬಗಳು ಮನೆಯಲ್ಲಿ ಮಾತ್ರ ಆಚರಿಸಲ್ಪಡುತ್ತಿದ್ದು ಧಾರ್ಮಿಕ ಸ್ಪರ್ಧಾ ಚಟುವಟಿಕೆಯ ಕಾರಣಕ್ಕೆ ಎಲ್ಲರೂ ಒಂದು ಕಡೆ ಸೇರಿ ಸಂತಸದಿಂದ ಕಳೆಯಲು ಸಂದರ್ಭ ದೊರೆತಂತಾಗಿದೆ.
ಮಕ್ಕಳ ಕಾರ್ಯಕ್ರಮದ ಜತೆ ಮಹಿಳೆಯರಿಗೂ ರಂಂಗೋಲಿ ಕಾರ್ಯಕ್ರಮ ಏರ್ಪಡಿಸಿರುವುದರಿಂದ ಸದಾಕಾಲ ಮನೆಯಲ್ಲಿ ಕಾಲಕಳೆಯುವ ಮಹಿಳೆಯರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದಂತಾಗಿದೆ. ಸ್ವಾಮಿ ವಿವೇಕಾನಂದ ಪೌಂಡೆಷನ್ ಇಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ ಎಂದರು.ರಾಘವೇಂದ್ರ ಗೊಂಡಭಟ್ಕಳ್ ಗೊಂಡ ಸಮಾಜದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಗೊಂಡ ಮಾತನಾಡಿ , ಈ ಫೌಂಡೇಶನ್ ಅವರು ನಮ್ಮ ಜಾಲಿಯಲ್ಲಿ ಯಾರು ಮಾಡಿರದ ಅದ್ಭುತ ಕಾರ್ಯ ಮಾಡುತ್ತಿದ್ದಾರೆ.ಇವರಿಂದ ಜಾಲಿಯಲ್ಲಿ ಉತ್ತಮ ಬದಲಾವಣೆ ಆಗ್ತಿದೆ.

ಈ ಫೌಂಡೇಶನ್ ಸಮಾಜದ ಉತ್ತಮ ಚಿಂತನೆ ಇದ್ದು ಇವರ ಜೊತೆ ನಾವೆಂದು ನಿಲ್ಲುತ್ತೇವೆ ಎಂದರುವಸಂತ ನಾಯ್ಕಕಾರ್ಯಕ್ರಮ ಉದ್ಘಾಟಿಸಿ ನಿವೃತ್ತ ಶಿಕ್ಷಕ ಡಿಬಿ ನಾಯ್ಕ ಮಾತನಾಡಿ ಜಾಲಿಯಲ್ಲಿ ಇತ್ತಿಚೆಗೆ ಇಂತಹ ಅಪರೂಪದ ಕಾರ್ಯಕ್ರಮಗಳು ನಡೆಯುತ್ತಿದೆ. ಸ್ಪರ್ಧೆಯಲ್ಲಿ ಸೋಲು ಗೆಲುವು ಸಹಜವಾಗಿದ್ದು ಸೋತ ಸ್ಪರ್ಧಿಗಳು ಬೆಸರಿಸಿಕೊಳ್ಳದೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.ಡಿಬಿ ನಾಯ್ಕಕಾರ್ಯಕ್ರಮದಲ್ಲಿ ಮುದ್ದು ಕೃಷ್ಣ ಮುದ್ದು ರಾಧೆ, ಚೆಲ್ವ ಕೃಷ್ಣ ಚೆಲ್ವೆ ರಾಧೆ, ಭಗವತ್ ಗೀತಾ ಶ್ಲೋಕ ಸಾರ, ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು. ಮಕ್ಕಳು ಕೃಷ್ಣ ರಾಧೆಯ ವೇಷ ತೊಟ್ಟ ವೇಧಿಕೆಯಲ್ಲಿ ಪ್ರದರ್ಶನ ನೀಡಿದರು.
ಫ್ಲೋ ಭಗವತ್ ಗೀತಾ ಶ್ಲೋಕ ಸಾರ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ತಮ್ಮ ತೊದಲು ನುಡಿಯಲ್ಲಿ ಭಗವತ್ವಗೀತೆಯ ಶ್ಲೋಕವನ್ನು ಪಠಿಸಿ, ಅದರ ಅರ್ಥ ವಿವರಿಸಿದ್ದು ವಿಶೇಷವಾಗಿತ್ತು.ರಂಗೋಲಿ ಸ್ಪರ್ಧೆಯಲ್ಲಿ ಯುವತಿಯರು, ಮಹಿಳೆಯರು ಭಾಗವಹಿಸಿ ಆಕರ್ಷಕ ರಂಗೋಲಿಯನ್ನು ಬಿಡಿಸಿ ಗಮನಸೆಳೆದರು.ಸ್ಪರ್ಧೆಯಲ್ಲಿ ಗೆದ್ದ ಅಬ್ಯರ್ಥಿಗಳಿಗೆ ಸಂಘಟಕರ ಕಡೆಯಿಂದ ಬಹುಮಾನವನ್ನು ವಿತರಿಸಲಾಯಿತು.














































