ಘಜ್ನಿ ಬಿಟ್ಟರೆ ಬಿಜೆಪಿ, ಆರೆಸ್ಸೆಸ್‌ ನವರಿಂದ ದೇವಸ್ಥಾನ ಲೂಟಿ: ಬಿ.ಕೆ. ಹರಿಪ್ರಸಾದ್

Picture of Savistara

Savistara

Bureau Report

ಬೆಂಗಳೂರು, ‘ಜಾತಿ ಧರ್ಮದ ಹೆಸರಿನಲ್ಲಿ ನಡೆಯುವ ಗಲಾಟೆಗಳಲ್ಲಿ ಜೈಲಿಗೆ ಹೋಗುವವರು ಬರೀ ದಲಿತರು, ಶೂದ್ರರೇ ಆಗಿರುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಬುಧವಾರ ಪಕ್ಷದ ಪ್ರಚಾರ ಸಮಿತಿ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ಧರ್ಮದ ಹೆಸರಿನಲ್ಲಿ ನಡೆಯುವ ಗಲಾಟೆಗಳಲ್ಲಿ ಜೈಲಿಗೆ ಹೋಗುವವರು ಬರೀ ದಲಿತರು, ಶೂದ್ರರೇ ಆಗಿರುತ್ತಾರೆ. ಆದರೆ, ರಾಮ ಮಂದಿರ ಲೂಟಿ ಮಾಡಿದವರು ಯಾರು? ದಲಿತರು, ಶೂದ್ರರಾ? ಇಲ್ಲ. ಅದನ್ನು ಕಟ್ಟಲು ಹೊರಟವರೇ – ಅದರ ಲೂಟಿ ಮಾಡಿದ್ದಾರೆ. / ಇತಿಹಾಸದಲ್ಲಿ ಮೊಹಮದ್ ಘಜ್ನಿ ಭಾರತವನ್ನು 17 ಬಾರಿ ಲೂಟಿ ಮಾಡಿದ್ದಾನೆ ಎಂದು ಓದಿದ್ದೇವೆ. ಅವರನ್ನು ಬಿಟ್ಟರೆ, ದೇವಸ್ಥಾನಗಳನ್ನು ಲೂಟಿ ಮಾಡಿರುವವರು ಆರೆಸ್ಸೆಸ್ ಹಾಗೂ ಬಿಜೆಪಿಯವರು. ಇವರು ನಮಗೆ ದೇವರ ಬಗ್ಗೆ ಪಾಠ ಮಾಡುತ್ತಾರೆ ಎಂದು ಕಿಡಿಕಾರಿದರು.

ನಾನೂ ಹಿಂದೂ

ನಾನು ಒಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು ಪಾಲಿಸುವುದು ಮಹಾತ್ಮ ವಿವೇಕಾನಂದ, ಗಾಂಧಿ, ನಾರಾಯಣಗುರು, ಕನಕದಾಸ, ಬಸವಣ್ಣ ಹೇಳುವ ಹಿಂದೂ ಧರ್ಮ. ಗೋಲ್ವಾಲ್ಕರ್, ಗೋಡ್ರೆ ಹೆಡ್ಡೆವಾರ್ ಹೇಳುವ ಹಿಂದೂ ಧರ್ಮ ಪಾಲಿಸುವುದಿಲ್ಲ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರಾದ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಮಾಜಿ ಸಂಸದ ಡಾ| ಎಲ್. ಹನಮಂತಯ್ಯ ಮತ್ತಿತರರು ಭಾಗವಹಿಸಿದ್ದರು.

[t4b-ticker]
error: Content is protected !!