ಸುಳ್ಯ ನಗರ ಒಳಚರಂಡಿ ಅವ್ಯವಸ್ಥೆ | ಮುಖ್ಯ ರಸ್ತೆಯಲ್ಲಿ ಹರಿಯುತ್ತಿದೆ ಮಳೆ ನೀರು

Picture of Savistara

Savistara

Bureau Report

ಸುಳ್ಯ: ಮಳೆಗಾಲ ಶುರುವಾದರೆ ಸಾಕು ಸುಳ್ಯ ಪೇಟೆಯಲ್ಲಿ ಪಾದಚಾರಿ ಮತ್ತು ವಾಹನ ಸವಾರರು ಪಡುವ ಸಂಕಷ್ಟ ಕೇಳೋವರು ಇಲ್ಲದಂತಾಗಿದೆ,ನಗರದಲ್ಲಿ ಒಳಚರಂಡಿ ಅವ್ಯವಸ್ಥೆಯ ಅಗರವಾಗಿದ್ದು ಹೆಸರಿಗೆ ಮಾತ್ರ ಒಳಚರಂಡಿಯಾಗಿದೆ! ಮಳೆ ಬಂದರೇ ಸುಳ್ಯದ ಮುಖ್ಯ ರಥ ಬೀದಿಯಿಂದ ಕೆಳಗಿನ ದೇವರ ಕಟ್ಟೆಯ ವರೆಗೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದೂ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದ್ದೂ ಅಲ್ಲಿ ನೀರು ಹರಿದು ಹೋಗಲು ಸರಿಯಾದ ಒಳ ಚರಂಡಿ ವ್ಯವಸ್ಥೆ ವಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.ಮುಖ್ಯ ರಸ್ತೆಯಲ್ಲಿ ಕೆಲವು ಕಡೆ ಸ್ಲಾಬ್ ಗಳು ಮುರಿದು ಅಪಾಯಕ್ಕೆ ಆಹ್ವಾನಿಸುತ್ತಿದ್ದರು ಅಧಿಕಾರಶಾಹಿ ಮತ್ತು ಆಡಳಿತಶಾಹಿ ಮೌನವಾಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸುಳ್ಯ ನಗರಕ್ಕೆ ದಿನ ನಿತ್ಯ ವಿದ್ಯಾರ್ಥಿಗಳು ಮಾತ್ರವಲ್ಲದೆ ವೈಯುಕ್ತಿಕ ಕಾರ್ಯ ನಿಮಿತ್ತ ಬರುತ್ತಿರುತ್ತಾರೆ ಇಂತಹ ಜನ ನಿಬಿಡ ನಗರದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

[t4b-ticker]
error: Content is protected !!