ಒಂದೇ ತಿಂಗಳಿನಲ್ಲಿ 10 ಗ್ರಾಂಗೆ 18,000 ರೂ. ಇಳಿಕೆ | 18 ವರ್ಷಗಳಲ್ಲೇ ದಾಖಲೆಯ ಮಾಸಿಕ ಕುಸಿತ

Picture of Savistara

Savistara

Bureau Report

ಹೊಸದಿಲ್ಲಿ: ಜೂನ್ ತಿಂಗಳಿನಲ್ಲಿ ಅಪರಂಜಿಚಿನ್ನದ ಬೆಲೆ ಹತ್ತು ಗ್ರಾಂಗೆ ಬರೋಬ್ಬರಿ 18,000 ರೂ. ಇಳಿಕೆಯಾಗಿದೆ. ಒಂದೇ ತಿಂಗಳಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಚಿನ್ನದ ದರ ಕುಸಿತವಾಗಿರುವುದು 2008ರ ಬಳಿಕ ಇದೇ ಮೊದಲು. ಇನ್ನೊಂದೆಡೆ, ಬೆಳ್ಳಿ ದರವೂ ಏರಿಳಿತ ಕಾಣುತ್ತಿದೆ. ಇಡೀ ತಿಂಗಳ ವಹಿವಾಟು ಗಮನಿಸಿದರೆ ಇಳಿಕೆ ಹಾದಿಯಲ್ಲಿಯೇ ಇದೆ.ಕೆನ್ಮಾರುಕಟ್ಟೆಯ ಜಾಗತಿಕ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತೀವ್ರ ಕುಸಿದಿದೆ. ಹೊಸದಿಲ್ಲಿಯಲ್ಲಿ 24 ಕ್ಯಾರಟ್‌ನ ಪರಿಶುದ್ದ ಚಿನ್ನದ ಬೆಲೆ 30 ದಿನಗಳಲ್ಲಿ ಶೇ.12.5ರಷ್ಟು ಕುಸಿದಿದೆ. ಅಂದರೆ ಜೂನ್ 1ರಂದು 10 ಗ್ರಾಂ ಅಪರಂಜಿ ಚಿನಕ್ಕೆ 1.60 ಲಕ್ಷ ರೂ. ಇದ್ದದ್ದು, ಜೂನ್ 30ರಂದು 1.42 ಲಕ್ಷ ರೂ. ಆಸುಪಾಸಿಗೆ ತಲುಪಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟು ಸಂಪೂರ್ಣ ಶಮನ ವಾಗದೇ ಇದ್ದರೂ ಶಾಂತಿ ಮಾತುಕತೆ ಒಪ್ಪಂದ ವಾಗಿದೆ. ಕೆಲವು ಅಡೆತಡೆಗಳ ನಡುವೆಯೂ ಶಾಂತಿ ನೆಲೆಸುವ ಕುರಿತು ಖಾತ್ರಿ ಇದೆ. ಕಚ್ಚಾ ತೈಲದ ಬೆಲೆ ಗಮನಾರ್ಹ ಪ್ರಮಾಣ ಇಳಿದು ಅಮೆರಿಕ-ಇರಾನ್ ಕದನ ಪೂರ್ವ ಸ್ಥಿತಿಗೆ ಮುಟ್ಟಿದೆ. ಷೇರುಪೇಟೆಗಳು ಚೇತರಿಸಿಕೊಳ್ಳುತ್ತಿವೆ. ಹೀಗಾಗಿ, ಚಿನ್ನ-ಬೆಳ್ಳಿ ಮೇಲಿನ ಹೂಡಿಕೆಯ ಅವಲಂಬನೆ ತಗ್ಗಿದೆ. ಚಿನ್ನದ ಬೆಲೆ ಇಳಿಕೆಗೆ ಇದು ಕೂಡ ಕಾರಣ ಎನ್ನುವುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ.

ಚಿನ್ನದ ಬೆಲೆ ಕುಸಿತಕ್ಕೆ 5 ಕಾರಣ

1. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ 1 ಮೌಲ್ಯದಲ್ಲಿ ಶೇ.2.9ರಷ್ಟು ಏರಿಕೆ

2. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ‘ಈ ವರ್ಷ ಬಡ್ಡಿ ದರ ಹೆಚ್ಚಿಸಬಹುದು ಎಂಬ ನಿರೀಕ್ಷೆ

3. ಮಧ್ಯಪ್ರಾಚ್ಯ ಬಿಕಟು ಬಗೆಹರಿಯುವ ಸೂಚನೆ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಮೇಲೆ ಹೂಡಿಕೆ ಕುಸಿತ.

4. ಕಚ್ಚಾತೈಲ ಬೆಲೆ ಕೆಲವು ದಿನಗಳಿಂದ -ಸತತವಾಗಿ ಇಳಿಕೆ ಹಾದಿಯಲ್ಲಿರುವುದು

5. ಹೂಡಿಕೆದಾರರು ಸುರಕ್ಷಿತ ಹೂಡಿಕೆಗಿಂತ ತ್ವರಿತವಾಗಿ ರಿಸ್ಕ್ ಇದ್ದರೂ, ತ್ವರಿತ ಲಾಭ ನೀಡುವ ಹೊಡಿಕೆಗಳತ್ತ ಆಕರ್ಷಿತರಾಗಿರುವುದು

ದಿಲ್ಲಿಯಲ್ಲಿ ಏರಿಕೆ, ಬೆಂಗಳೂರಿನಲ್ಲಿ ಇಳಿಕೆ

ಹೊಸದಿಲ್ಲಿಯಲ್ಲಿ ಮಂಗಳವಾರ ಚಿನ್ನದ ದರ ಇಳಿಕೆಯಾಗಿ, ಬೆಳ್ಳಿ ದರ ಏರಿಕೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಅದಕ್ಕೆ ತದ್ವಿರುದ್ದವಾಗಿ ಚಿನ್ನ ಏರಿಕೆಯಾದರೆ ಬೆಳ್ಳಿದರ ಕುಸಿದಿದೆ. ಉದ್ಯಾನ ನಗರಿಯಲ್ಲಿ 10 ಗ್ರಾಂ ಅಪರಂಜಿ ಚಿನ್ನದ ದರ 110 ರೂ. ಏರಿ 1,42,040 ರೂ ಆಗಿದೆ. ಆಭರಣ ಚಿನ್ನ 100 ರೂ ಏರಿ 1,30,200 ಆಗಿದೆ. ಬೆಳ್ಳಿ ಬೆಲೆ ಕೆಜಿ 5,000 ಇಳಿದು 2,35,000 ರೂ ಆಗಿದೆ.

[t4b-ticker]
error: Content is protected !!