ಬೆಂಗಳೂರು, ಜು.1: ರಾಜ್ಯ ಸರಕಾರ ಮೇ 12 ರಂದು ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ ಕೆಎಸ್ಆರ್ ಟಿಸಿ ಸೇರಿ ರಾಜ್ಯದ ನಾಲ್ಕೂ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ ಬುಧವಾರ (ಜು.1)ದಿಂದ ಶೇ.12.5 ವೇತನ ಹೆಚ್ಚಳ ಜಾರಿಯಾಗಿದ್ದು ಇದೇ ತಿಂಗಳ ವೇತನದೊಂದಿಗೆ ಹೊಸ ವೇತನ ಆಗಸ್ ನಲ್ಲಿ ನೌಕರರ ಖಾತೆಗೆ ಜಮೆ ಆಗಲಿದೆ. 4 ಸಾರಿಗೆ ನಿಗಮಗಳ 1.05 ಲಕ್ಷ ನೌಕರರಿಗೆ ವೇತನ ಪರಿಷ್ಕರಣೆ ಅನ್ವಯವಾಗಲಿದೆ. ಈ ವೇತನ ಪರಿಷ್ಕರಣೆಯಿಂದ 4 ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು 72.80 ಕೋ. ರೂ., ಪ್ರತಿ ವರ್ಷ 873.64 ಕೋ. ರೂ. ಹೆಚ್ಚುವರಿ ವೆಚ್ಚವಾಗಲಿದೆ.
ಈ ತಿಂಗಳಿನಿಂದಲೇ ಸರಕಾರಿ ಬಸ್ ಸಿಬಂದಿ ವೇತನ ಶೇ.12.5 ಹೆಚ್ಚಳ
Savistara
Bureau Report
[t4b-ticker]











































