ಐವರ್ನಾಡು: ಐವರ್ನಾಡು ಗ್ರಾಮದ ಮುಚ್ಚಿನಡ್ಕ, ಮಡ್ತಿಲ, ಕೊಯಿಲ ಬಜಂತಡ್ಕ ರಸ್ತೆಗೆ ಶಾಸಕರ ರೂ 10 ಲಕ್ಷ ಅನುದಾನದಲ್ಲಿ ಕಾಂಕ್ರಿಟ್ ಕರಣಗೊಂಡು ತರಾತುರಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಸಿ ಹಿನ್ನಲೆಯಲ್ಲಿ ಇದೀಗ ಕಾಂಕ್ರಿಟ್ ರಸ್ತೆ ಇಬ್ಬಾಗವಾಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಕ್ರಿಟ್ ರಸ್ತೆಗೆ ಕಡಿಮೆ ವೆಂದರೆ 20 ದಿನ ಕಾಲ ಕ್ಯೂರಿಂಗ್ ಸಮಯ ಬೇಕಾಗುತ್ತದೆ. ಆದರೆ ಸ್ಥಳೀಯರೊಬ್ಬರ ಮನೆಗೆ ಘನ ವಾಹನ ಈ ರಸ್ತೆಯಲ್ಲಿ ಸಂಚಾರಿಸಿದ ಪರಿಣಾಮ ಕಾಂಕ್ರಿಟ್ ಬಿರುಕು ಬಿಟ್ಟಿದ್ದು ಸಾರ್ವಜನಿಕರ ಬಳಸುವ ಈ ರಸ್ತೆ 2 ವಾರದಲ್ಲಿ ಬಿರುಕು ಮೂಡಲು ಜನರ ಆಸಡ್ಡೆ ಬಗ್ಗೆ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಕ್ರೀಟ್ ಕ್ಯೂರ್ ಆಗುವ ಅವಧಿಯ ಮೊದಲೇ ಲಾರಿ ಹೋದುದರಿಂದ ಬಿರುಕಾಗಿದ್ದು ಉಂಟಾಗಿದೆ.ಮುಂದೆ ಹಾಗೆ ಆಗಬಾರದು ಎಂಬ ಕಾರಣ ಬಿರುಕಿನ ವೀಡಿಯೋ ಮಾಡಿರುವುದಾಗಿ ಗಣೇಶ್ ಬಜಂತಡ್ಕ ತಿಳಿಸಿದ್ದಾರೆ. ಕಾಂಕ್ರಿಟ್ ರಸ್ತೆ ಬಿರುಕು
ಉಂಟಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.














































