ಆ. 27ರಿಂದ ಭಾರತದ ಸರಕುಗಳ ಮೇಲೆ ಶೇ50 ಸುಂಕ: ಅಮೆರಿಕದಿಂದ ಕರಡು ಆದೇಶ ಬಿಡುಗಡೆ

Picture of Savistara

Savistara

Bureau Report

ವಾಷಿಂಗ್ಟನ್: ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದ ಹೆಚ್ಚುವರಿ ಶೇ 25 ರಷ್ಟು ಸುಂಕವನ್ನು ಜಾರಿಗೆ ತರುವ ಯೋಜನೆಗಳನ್ನು ವಿವರಿಸುವ ಕರಡು ಆದೇಶವನ್ನು ಅಮೆರಿಕ ಹೊರಡಿಸಿದೆ.

ಆಗಸ್ಟ್ 27ರ ಮಧ್ಯರಾತ್ರಿ 12.01ರಿಂದ ಈ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟೀಸ್‌ ಆದೇಶದಲ್ಲಿ ತಿಳಿಸಿದೆ.ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದರಿಂದ ದಂಡದ ಮಾದರಿಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ದ್ವಿಗುಣಗೊಳಿಸುವುದಾಗಿ ಆಗಸ್ಟ್ 7ರಂದು ಟ್ರಂಪ್‌ ಘೋಷಿಸಿದ್ದರು. ಆದರೆ, ಒಪ್ಪಂದದ ಕುರಿತಂತೆ ಮಾತುಕತೆ ನಡೆಸಲು 21 ದಿನಗಳ ಕಾಲಾವಕಾಶ ನೀಡಿದ್ದರು.ಜುಲೈ ಅಂತ್ಯದಲ್ಲಿ ಘೋಷಿಸಲಾದ ಶೇ 25ರಷ್ಟು ಸುಂಕ ಮತ್ತು ಆಗಸ್ಟ್ 7 ರಂದು ಘೋಷಿಸಿದ ಶೇ 25ರಷ್ಟು ಸುಂಕ ಸೇರಿ ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿಕೆಗೆ ಅಮೆರಿಕ ಮುಂದಾಗಿದೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!