ಚಾಮುಂಡಿ ತಾಯಿ ಕೆಣಕಲು ಹೋದ್ರೆ ರಾಜಕೀಯವಾಗಿ ಭಸ್ಮ: ಬಿ.ವೈ.ವಿಜಯೇಂದ್ರ ಎಚ್ಚರಿಕೆ

Picture of Savistara

Savistara

Bureau Report

ಚಾಮುಂಡಿ ದೇವಿ ಹಿಂದೂಗಳ ಆಸ್ತಿಯಲ್ಲ’ ಡಿಸಿಎಂ ಡಿಕೆಶಿ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ

ಬೆಂಗಳೂರು: ಚಾಮುಂಡಿ ದೇವಿ ಹಿಂದೂಗಳ ಆಸ್ತಿಯಲ್ಲ ಎಂಬಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ವಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಎದುರಾಗಿರುವ ಬಿಕ್ಕಟ್ಟಿನಿಂದ ಪಾರಾಗಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಮತ್ತು ದಸರಾ ಸಂಪ್ರದಾಯವನ್ನು ಬಳಸಿಕೊಳ್ಳಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, “ಬಂಡೆ’ ಎಂದು ಬೀಗುತ್ತಿದ್ದ ನೀವು ಈಗಾಗಲೇ ಮುದ್ದೆಯಾಗಿ ಹೋಗಿದ್ದೀರಿ. ಈಗ ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗುವಿರಿ. ಕಾಂಗ್ರೆಸ್ ಪಕ್ಷದ ನಾಯಕರು ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಿದ್ದಾರೆ. ಹಿಂದೂ ಧಾರ್ಮಿಕ ಕೇಂದ್ರಗಳ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಇದೀಗ ಹಿಂದೂ ಪರಂಪರೆಯ ವಿಜಯದಶಮಿ ಹಬ್ಬವನ್ನು ಮಲಿನ ಮಾಡಲು ಹೊರಟಿದ್ದೀರಿ, ಮಹಿಷಾಸುರ ಮರ್ದಿನಿ ನಿಮ್ಮನ್ನು ಮರ್ದನ ಮಾಡುವ ಕಾಲ ದೂರವಿಲ್ಲ, ಚಾಮುಂಡಿ ತಾಯಿ ಶ್ರದ್ಧೆಯ ಭಕ್ತರ ಸ್ವತ್ತು, ಅದನ್ನು ಮುಟ್ಟಲು ಹೋದರೆ ಕಾದಿದೆ ನಿಮಗೆ ಆಪತ್ತು ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.

ಚಾಮುಂಡಿ ಬೆಟ್ಟ ಹಿಂದೂಗಳ ಸ್ವತ್ತು: ಆ‌ರ್. ಅಶೋಕ್‌ ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು. ಮುಸ್ಲಿಮರ ಸ್ವತ್ತಲ್ಲ. ಇಂತಹ ನೂರು ಡಿ.ಕೆ. ಶಿವಕುಮಾರ್ ಬಂದರೂ ಅದನ್ನು ಮಾಡಲಾಗಲ್ಲ. ಚಾಮುಂಡಿಬೆಟ್ಟ, ಧರ್ಮಸ್ಥಳ, ತಿರುಪತಿ, ಶಬರಿಮಲೆ ಎಲ್ಲವೂ ಹಿಂದೂಗಳದ್ದು. ಅದನ್ನು ಮುಟ್ಟಿದರೆ ದಂಗೆ ಆಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ.

[t4b-ticker]
error: Content is protected !!